ಕರುನಾಡು ಘರ್ಜನೆ ಸುದ್ದಿ ಗದಗ 19: ಕಾಯಕಯೋಗಿ ಶ್ರೀ ವೀರಭದ್ರನ ಅವತಾರವೆನಿಸಿದ 12 ನೇ ಶತಮಾನದಲ್ಲಿ ಪ್ರಜ್ವಲಿಸಿದ, ಬಸವಾದಿ ಶರಣರಲ್ಲಿ ಅಗ್ರಗಣ್ಯ ಶರಣರಾದ ಗದಗ ಗಂಗಾಪೂರ ಪೇಟೆಯಲ್ಲಿ ಇರುವ ವೀರಗಂಟಿ ಶ್ರೀ ಮಡಿವಾಳ ಮಾಚಿದೇವರ 51ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ ಶಹರ ಶ್ರೀ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಗದಗ ನಗರದಲ್ಲಿ ಇಂದು ಬೆಳಗ್ಗೆ ಶ್ರೀ ತೋಂಟದಾರ್ಯ ಮಠದಿಂದ ಸಂತ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರ ಹೊತ್ತ ವರ್ಣರಂಜಿತ ಮೆರವಣಿಗೆ ಹಾಗೂ ಸಾಂಸ್ಕೃತಿಕ ತಂಡಗಳ ಪ್ರದರ್ಶನ ನಡೆದ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಅಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸಮಾಜದ ಹಿರಿಯರ ಜತೆಗೂಡಿ 12ನೇ ಶತಮಾನದ ಸಂತ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಿಸಿ ಮಾಲಾರ್ಫಣೆ ಮಾಡಿ ಆಶೀರ್ವಾದ ಪಡೆಯಲಾಯಿತು
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಪಾಂಡು ಕಾಳೆ ಪರಶುರಾಮ ಬಳ್ಳಾರಿ ಆನಂದ ಮಾನೆ ಮತ್ತು ಮಡಿವಾಳ ಹಾಗೂ ಪರೀಟ ಸಮಾಜದ ಸಮಸ್ತ ಗುರು-ಹಿರಿಯರು, ಯುವಕರು ನೂರಾರು ತಾಯಂದಿರು ಹಾಗೂ ಗಂಗಾಪೂರ ಪೇಟೆಯ ಸಮಸ್ತ ಗುರು-ಹಿರಿಯರು ಉಪಸ್ತಿತರಿದ್ದರು.