ಕರುನಾಡು ಘರ್ಜನೆ ಸುದ್ದಿ: ಗದಗ 23: ಸವಿತಾ ಸಮಾಜದ ಕ್ರೀಡಾ ಪಟುಗಳೊಂದಿಗೆ ಸಮಾಜದ ನವ ಯುವಕರನ್ನು ಸಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಅವರ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಹರಿಸುವ ಉದ್ದೇಶದಿಂದ ಗದಗ ಜಿಲ್ಲಾ ಸವಿತಾ ಸಮಾಜದಿಂದ ದಿ.27/8/2024 ರಂದು ಶ್ರೀ ಸಂಸಸೇನಾ ಮಹಾರಾಜರ ಪೂಣ್ಶಥಿತಿ ಅಂಗವಾಗಿ ಟಾಫ್ 6 ಕ್ರಿಕೇಟ್ ಟೂರ್ನಾಮಿಂಟ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು.
ಅವರು ಕಾಂಗ್ರೇಸ್ ಪಕ್ಷದ ಯುವ ಘಟಕದ ಮಾಜಿ ಅಧ್ಶಕ್ಷರಾದ ರವಿಕುಮಾರ ರಡ್ಡಿ ಅವರು ಸವಿತಾ ಸಮಾಜದ ಕ್ರಿಕೇಟ್ ತಂಡಕ್ಕೆ ಕೊಡಮಾಡಿದ ಕ್ರಿಕೇಟ್ ಕಿಟ್ ವಿತರಿಸಿ ಮಾತನಾಡಿ ಗದಗ ಜಿಲ್ಲಾ ಸವಿತಾ ಸಮಾಜ ಮರಾಠ ಕ್ಷೌರಿಕ ಸಮಾಜ ಮತ್ತು ಹಡಪದ ಸಮಾಜದ ಯುವಕರು ನಮ್ಮ ಕ್ಷೌರಿಕ ವೃತ್ತಿ ಜವಾಬ್ದಾರಿ ನಿಭಾಯಿಸುವ ಜತೆಗೆ ಕ್ರಿಕೆಟ್ ಸಹ ರೂಡಿಸಿಕೊಂಡು ಶ್ರಮವಹಿಸಿ ಆಟವಾಡಿ ನಮ್ಮ ಗದಗ ಜಿಲ್ಲೆಯ ಕೀರ್ತಿ ತರಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಕ್ರಿಡಾಪಟುಗಳಲ್ಲಿ ಮನವಿ ಮಾಡಿ ಮಾತನಾಡಿ ಹುರಿದುಂಬಿಸಿದರು
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಮರಾಠ ಕ್ಷೌರಿಕ ಸಮಾಜದ ಅಧ್ಶಕ್ಷರಾದ ವಿಕಾಸ ಕ್ಷೀರಸಾಗರ ಜಿಲ್ಲಾ ಸವಿತಾ ಸಮಾಜದ ಕ್ರಿಕೇಟ್ ತಂಡದ ಮ್ಶಾನೇಜರ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಪ್ರಮುಖರಾದ ಸುನೀಲ ರಾಯಚೂರ ವೆಂಕಟೇಶ ಕೊಟೇಕಲ್ಲ ಕೃಷ್ಣಾ ಬುದೂರ ಸುಧೀರ ಮಾನೆ ವಿಜಯ ಬುದೂರ ಹಾಗೂ ಸವಿತಾ. ಹಡಪದ. ಹಾಗೂ ಮರಾಠ ಕ್ಷೌರಿಕ ಕ್ರಿಡಾ ಪಟುಗಳು ಸಮಾಜದ ಗುರು ಹಿರಿಯರು ಯುವ ನಾಯಕರುಗಳು ಉಪಸ್ಥಿತರಿದ್ದರು.