ಕರುನಾಡು ಘರ್ಜನೆ ಸುದ್ದಿ ಗದಗ 06: ಗದಗನಲ್ಲಿ 25 ವರ್ಷಗಳಿಂದ ಸವಿತಾ ಸಮಾಜ ಸೇವೆ ಸಲ್ಲಿಸುತ್ತಿರುವ ಹಾಗೂ ಉತ್ತರ ಕರ್ನಾಟಕ ಭಾಗದ ಸಮಘ್ರ ಅಭಿವೃದ್ಧಿಯ ಸಂಕಲ್ಪಗಾರ ಹಾಗೂ ಸವಿತಾ ಸಮಾಜದ ಏಕೈಕ ಯುವ ಮುಖಂಡರಾದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರಿಗೆ ಈ ಬಾರಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಬೆಟಗೇರಿ ಸಂತಸೇನಾ ಮಹಾರಾಜ ನಾಭೀಕ ಮಾರಾಠ ಕ್ಷೌರಿಕ ಸಮಾಜದಿಂದ ಅಧ್ಶಕ್ಷರಾದ ವಿಕಾಸ ಕ್ಷೀರಸಾಗರ ಹಾಗೂ ಪದಾಧಿಕಾರಿಗಳು ಸಮಾಜದ ಹಿರಿಯರು ಜತೆಗೂಡಿಕೊಂಡು ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು
ಉತ್ತರ ಕರ್ನಾಟಕ ಭಾಗದ ಸವಿತಾ ಸಮಾಜದ ಮುಖಂಡರಿಗೆ ಇಲ್ಲಿವರೆಗೂ ಯಾವುದೇ ರೀತಿಯ ರಾಜಕೀಯ ಪಕ್ಷಗಳು ಸ್ಥಾನಮಾನ ನೀಡದೆ ಕಡೆಗಣಿಸುತ್ತಾ ಬಂದಿವೆ. ಹಾಗಾಗಿ ಕಾಂಗ್ರೆಸ್ ಸರಕಾರ ಅವಧಿಯಲ್ಲಿ ಸವಿತಾ ಸಮಾಜದ ಬಗ್ಗೆ ಹಾಗೂ ಕಾಂಗ್ರೇಸ್ ಪಕ್ಷದ ಬಗ್ಗೆ ಅತ್ಯಂತ ಕಾಳಜಿ ಈರೂವ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸಚೀವರಿಗೆ ಮನವಿ ಮಾಡಿ ಒತ್ತಾಯಿಸಿದರು
ಹಿರಿಯರಾದ ಹನಮಂತಪ್ಪ ರಾಂಪೂರ ಅವರು ಸಚೀವರೊಂದಿಗೆ ಮಾತನಾಡಿ ಗದಗ ಕೃಷ್ಣಾ ಎಚ್ ಹಡಪದ ಅವರು ಅನೇಕ ವರ್ಷಗಳಿಂದ ಸವಿತಾ ಸಮಾಜದ ವತಿಯಿಂದ ಸಮಾಜ ಸೇವೆ, ಹೋರಾಟಗಳು ಮಾಡುವ ಜತೆಗೆ ಅವರಿವರೇನ್ನದೆ ಸಮಾಜ ಬಾಂಧವರ ಕಷ್ಟ ಸುಖಗಳಲ್ಲಿ ಭಾಗವಹಿಸಿದ್ದಾರೆ ಹಾಗಾಗಿ ಸರ್ವರನ್ನು ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ ಸವಿತಾ ನಿಗಮ ಅಧ್ಶಕ್ಷ ಸ್ಥಾನ ನೀಡುವಂತೆ ಸಚೀವರಾದ ಎಚ್ ಕೆ ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮರಾಠ ಕ್ಷೌರಿಕ ಸಮಾಜದ ಪದಾಧಿಕಾರಿಗಳು ಗುರು ಹಿರಿಯರು ಹಾಗೂ ಸಮಾಜದ ಯುವ ನಾಯಕರುಗಳು ಉಪಸ್ತಿತರಿದ್ದರು.