ಕರುನಾಡು ಘರ್ಜನೆ ಸುದ್ದಿ ಗದಗ,13 : ಗದಗ ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಅಂಗವಾಗಿ ಮತ್ತು ಕಾಂಗ್ರೆಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರ ಕೈ ಬಲ ಪಡಿಸುವ ಉದ್ದೇಶದಿಂದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ನೇತೃತ್ವದಲ್ಲಿ ಗದಗ ಬೆಟಗೇರಿ ಅವಳಿ ನಗರದ ಸವಿತಾ ಸಮಾಜದ ನೂರಾರು ಯುವ ಬಂಧುಗಳ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಯಿತು
ಯುವಕರು ಸಮಾಜಕ್ಕೆ ಮತ್ತು ಪಕ್ಷಕ್ಕೆ ಮುಂದಿನ ನಾಯಕರಾಗುವ ಅವಕಾಶ ಪಡೆಯಬಹುದು. ಸವಿತಾ ಸಮಾಜ ಮತ್ತು ಕಾಂಗ್ರೆಸ್ ಪಕ್ಷ ಬಲಪಡಿಸಲು ಯುವಕರು ಕಾರ್ಯೋನ್ಮುಖರಾಗಬೇಕೆಂದು ಹೊಸ ಯುವ ಸದಸ್ಯರಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮನವರಿಕೆ ಮಾಡಿ ಮಾತನಾಡಿದರು
ಈ ಸಂದರ್ಭದಲ್ಲಿ ಭಾಗವಹಿಸಿದ ಯುವ ಕಾಂಗ್ರೆಸ್ ಧುರೀಣರಾದ ಮಹಾಂತೇಶ ಮಡಿವಾಳರ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಹನಮಂತಪ್ಪ ರಾಂಪೂರ ಆಜನೈಯ್ಯ ಆದೋನಿ ಪಾಂಡು ಕಾಳೆ ರಮೇಶ ರಾಂಪೂರ ಬಸುವರಾಜ ಗೌಡರ ಕೀರಣ ರಾಂಪೂರ ಪರಶುರಾಮ ಮಾರ್ಲಬೇಡ್ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಸವಿತಾ ಸಮಾಜ ಸುಧಾರಣಾ ಸಂಘದ ಖಜಾಂಚಿಗಳಾದ ಅರೂಣ ರಾಂಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ ಚಾಯಾಗ್ರಾಹಕ ಕಾರ್ಯದರ್ಶಿಗಳಾದ ವಿನಾಯಕ ರಾಯಚೂರ ಯುವ ನಾಯಕರುಗಳಾದ ಕೃಷ್ಣಾ ಬುದೂರ ಗಣೇಶ ಕಡಮೂರ ಕಾರ್ತಿಕ ಆಗಲಾವೆ ಪ್ರೇಮ ಬುದೂರ ವಿನಾಯಕ ಮಾನೆ ಪ್ರೇಮ ರಾಂಪೂರ ವೆಂಕಟೇಶ ಆದೋನಿ ರಾಹೂಲ ಕೊಟೇಕಲ್ಲ ನಿಂಗರಾಜ ಕಡಮೂರ ಅರೂಣ ರಾಯಚೂರ ಸುರೇಶ ರಾಂಪೂರ ಸಂದೇಶ ಮಾನೆ ಸಿದ್ದೇಶ ಆದೋನಿ ಅಭಿಷೇಕ ಕಡಮೂರ ಹಾಗೂ ಸಮಾಜದ ನೂರಾರು ಯುವ ನಾಯಕರು ಗಳು ಉಪಸ್ತಿತರಿದ್ದರು .