ಕರುನಾಡು ಘರ್ಜನೆ ಸುದ್ದಿ: ಗದಗ 23: ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಕೇತವಾದ ಕ್ಷೌರಿಕ ವೃತ್ತಿ ಕ್ಷೌರಿಕರ ಬದುಕಿಗೆ ಆಸರೆ ಆಗಲಿ ಎಂದು ಗದಗ ಬೆಟಗೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಯುತ ಎಚ್ ಎ ಬಂಡಿವಡ್ಡರ ಅಧೀಕಾರಿಗಳು ಶುಭ ಹಾರೈಸಿ ಹೇಳಿದರು
ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಗದಗಿನ ಸರ್ಕಿಟ್ ಹೌಸ್ ನಲ್ಲಿ ಹಮ್ಮಿಕೊಂಡ ವಿಶ್ವ ಕ್ಷೌರಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಸವಿತಾ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ವಿಶ್ವ ಕ್ಷೌರಿಕರ ದಿನ ಆಚರಣೆ ಮಾಡುತ್ತಿರುವುದಕ್ಕೆ ತತ್ಯಂತ ಹರ್ಷ ವ್ಯಕ್ತ ಪಡಿಸಿ ಕೃಷ್ಣಾ ಎಚ್ ಹಡಪದ ಹಾಗೂ ನಿಯೋಗದ ಬೆಡಿಕೆಯಂತೆ ಗದಗ ಗಂಗಿಮಡಿಯಲ್ಲಿರುವ ಸವಿತಾ ಸಮಾಜ ಸುಧಾರಣಾ ಸಂಘದ ನಿವೇಶನದಲ್ಲಿ ಅನಕುಲವಾಗುವಂತೆ ನಗರಸಭೆಯಿಂದ ಬೋರವೇಲ್ ಕೊರಿಸಿ ಕೊಡುವುದಾಗಿ ಹೇಳಿ ಸಂಬಂದಿಸಿದ ಅಧಿಕಾರಿಗಳಿಗೆ ವೇದಿಕೆಯಲ್ಲೇ ಮಂಜೂರಾತಿಯ ಸಹಿ ಮಾಡಿ ಆದೇಶ ನಿಡಿ ಮಾತನಾಡಿದರು
ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಕಲ್ಯಾಣದ ಜಿಲ್ಲಾಧಿಕಾರಿಗಳಾದ ಶ್ರೀಯುತ ರವಿ ಗುಂಜಿಕರ್ ಅವರು ಮಾತನಾಡಿ ಸರ್ವ ಮೂಲ ವೃತ್ತಿ ಉಳಿಸಿಕೊಂಡು ಕಾಪಾಡಿ ಬೆಳೆಸಬೆಕಾಗಿದೆ ಈ ದಿಶೇಯಲ್ಲಿ ಶತಮಾನಗಳೇ ಇಲ್ಲದ ಸಂದರ್ಭದಲ್ಲಿರುವ ವೇದಗಳ ಕಾಲದಲ್ಲಿ ಶ್ರೀ ಸವಿತಾ ಮಹರ್ಷಿಗಳಿಂದ ಹುಟ್ಟಿಕೊಂಡಿರುವ ಸವಿತಾ ಸಮಾಜದ ಮೂಲ ಕ್ಷೌರಿಕರಿಂದ ಸಲ್ಲಿಸುತ್ತಿರುವ ಕ್ಷೌರ ಸೇವೆಯನ್ನು ಸರ್ವ ಜನಾಂಗದರು ಪಡೆಯುವ ಮೂಲಕ ಮೂಲ ಕ್ಷೌರಿಕ ವೃತ್ತಿದಾರರನ್ನು ಉಳಿಸಿ ಬೆಳಿಸಬೆಕೇಂದು ಸರ್ವ ಜನಾಂಗದವರಲ್ಲಿ ಮನವಿ ಮಾಡಿದರು.
ಸಮಾಜದ ಹಿರಿಯರಾದ ಹನಮಂತಪ್ಪ ರಾಂಪೂರ ಅವರು ಮಾತನಾಡಿ ರಾಜ್ಯ ಸರಕಾರವು ಕ್ಷೌರಿಕರ ಬದುಕಿಗೆ ಯೋಜನೆಗಳನ್ನು ರೂಪಿಸಬೇಕು. ಕ್ಷೌರಿಕ ವೃತ್ತಿಯನ್ನು ಉಳಿಸಿ ಬೆಳೆಸಲು ಅಗತ್ಯ ಪ್ರೋತ್ಸಾಹ ನೀಡುವ ಜೊತೆಗೆ ಯುವ ಸಮೂಹವನ್ನು ಕ್ಷೌರಿಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಕೊಡಮಾಡಿದ ಅಂಬೇಡ್ಕರ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಸ್ಮಾರ್ಟ ಕಾರ್ಡಗಳನ್ನು ಸವಿತಾ ಸಮಾಜದ ಕ್ಷೌರಿಕ ಬಾಂದವರಿಗೆ ಅಥಿತಿ ಅಧಿಕಾರಿಗಳಿಂದ ವಿತರಣೆ ಮಾಡಲಾಯಿತು
ಕ್ಷೌರಿಕರು ಅನಾದಿಕಾಲದಿಂದಲೂ ಕ್ಷೌರಿಕ ವೃತ್ತಿಯಲ್ಲಿಯೇ ಜೀವನ ಕಂಡುಕೊಂಡಿರುವ ಕ್ಷೌರಿಕರ ಬದುಕು ಹಸನವಾಗಿಸಲು ಆಳುವ ಸರಕಾರಗಳು ನೆರವಾಗಬೇಕು
ಸವಿತಾ ಸಮಾಜದ ಕ್ಷೌರಿಕರ ಮಕ್ಕಳಿಗೆ ಉಚೀತ ಶಿಕ್ಷಣ ನೀಡಬೇಕು, ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತವಾಗಿ 50.ರಷ್ಟು ಸಬ್ಸಿಡಿ ಮೂಲಕ ಆರ್ಥಿಕ ನೆರವು, ವಾಸಕ್ಕೆ ಸೂರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರವು ಮುಂದಾಗಲು ಆಗ್ರಹ
ಕೃಷ್ಣಾ ಎಚ್ ಹಡಪದ ಜಿಲ್ಲಾಧ್ಯಕ್ಷರು ಗದಗ ಜಿಲ್ಲಾ ಸವಿತಾ ಸಮಾಜ ಈ ಸಂದರ್ಭದಲ್ಲಿ ಗದಗ ಬೆಟಗೇರಿ ಸವಿತಾ ಸಮಾಜದ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ ಕಮಿಟಿಯ ಅಧ್ಯಕ್ಷರಾದ ವೆಂಕಟೇಶ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಉಪಾಧ್ಯಕ್ಷರಾದ ಜಂಮ್ಮಣ್ಣ ಕಡಮೂರ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಯಲ್ಲಪ್ಪ ರಾಯಚೂರ ಹೇಮಂತ ವಡ್ಡೆಪಲ್ಲಿ ದತ್ತು ಮಾನೆ ಬಸುರಾಜ ಗೌಡರ್ ವಸಂತ ಮಾನೆ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಚಾಯಾಗ್ರಾಹಕ ಕಾರ್ಯದರ್ಶಿ ವಿನಾಯಕ ರಾಯಚೂರ ಯುವ ನಾಯಕರಾದ ವೆಂಕಟೇಶ ಕೊಟೇಕಲ್ಲ ಕುಮಾರ ಹಡಪದ ದೀಪಕ ಗಂಗಾಧರ ವೆಂಕಟೇಶ ಆದೋನಿ ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ತಿತರಿದ್ದರು.