Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ವಿಶೇಷ

ಗದಗ | ‘ವ್ಯಾಜ್ಯಮುಕ್ತ ಗ್ರಾಮ’ಕ್ಕಾಗಿ ಜಾಗೃತಿ ಅಭಿಯಾನ

ಕರುನಾಡು ಘರ್ಜನೆ ಸುದ್ದಿ ಗದಗ: ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು-ನೆರವು ಮತ್ತು ಮಾನವಹಕ್ಕುಗಳ ಘಟಕದಿಂದ ‘ವ್ಯಾಜ್ಯಮುಕ್ತ ಗ್ರಾಮ’ಕ್ಕಾಗಿ ಗ್ರಾಮಗಳನ್ನು ದತ್ತು ಪಡೆದು, ಆ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಗದಗ ಜಿಲ್ಲೆಯ ಲಕ್ಷೆö್ಮÃಶ್ವರ…

ಕರುನಾಡು ಘರ್ಜನೆ ಸುದ್ದಿ ಗದಗ: ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು-ನೆರವು ಮತ್ತು ಮಾನವಹಕ್ಕುಗಳ ಘಟಕದಿಂದ ‘ವ್ಯಾಜ್ಯಮುಕ್ತ ಗ್ರಾಮ’ಕ್ಕಾಗಿ ಗ್ರಾಮಗಳನ್ನು ದತ್ತು ಪಡೆದು, ಆ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಗದಗ ಜಿಲ್ಲೆಯ ಲಕ್ಷೆö್ಮÃಶ್ವರ ತಾಲ್ಲೂಕಿನ ಗೊಜನೂರ, ಶ್ಯಾಬಳ, ಸಂಕದಾಳ ಮತ್ತು ಕೊಂಡಿಕೊಪ್ಪ ಗ್ರಾಮಗಳನ್ನು ದತ್ತು ಪಡೆದಿದ್ದು, ಆ ಗ್ರಾಮಗಳನ್ನು ವಿಶೇಷವಾಗಿ ಕೇಂದ್ರೀಕರಿಸಿ, ಅಲ್ಲಿನ ಜನರೊಂದಿಗೆ ಸಂವಾದ, ಚರ್ಚೆ ಮೂಲಕ ‘ವ್ಯಾಜ್ಯ ಮುಕ್ತ’ ಗ್ರಾಮಕ್ಕೆ ಅವರ ಸಹಕಾರದ ಬಗ್ಗೆ ತಿಳಿವಳಿಕೆ ಹೇಳಲಾಗುತ್ತಿದೆ.

ಈಗಾಗಲೇ ಕರ್ನಾಟಕ ಸರಕಾರದ ಡಾ|| ಎಚ್.ಕೆ. ಪಾಟೀಲ್ ಮಾನ್ಯ ಸಚಿವರು, ಕಾನೂನು, ನ್ಯಾಯ, ಶಾಸನ ರಚನೆ, ಮಾನವ ಹಕ್ಕುಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮ ನ್ಯಾಯಾಲಯಗಳ ಕಾಯ್ದೆಯ ಅನ್ವಯ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಿ ನ್ಯಾಯ ಒದಗಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವುದು, ನ್ಯಾಯ ವಿತರಣೆ ವ್ಯವಸ್ಥೆಯನ್ನು ಗ್ರಾಮ ಮಟ್ಟದ ಜನರ ಬಾಗಿಲಿಗೆ ಕೊಂಡೊಯ್ಯುವುದು ಮತ್ತು ಯಾವುದೇ ವ್ಯಕ್ತಿ ತನ್ನ ಸಾಮಾಜಿಕ, ಆರ್ಥಿಕ ಅಥವಾ ಇತರೆ ಯಾವುದೇ ಬಲಹೀನತೆಯ ಕಾರಣವಾಗಿ ನ್ಯಾಯ ಪಡೆಯುವಲ್ಲಿ ವಂಚಿತನಾಗಬಾರದು ಎನ್ನುವ ಉದ್ದೇಶವಾಗಿದೆ. ಮಾನ್ಯ ಕಾನೂನು ಸಚಿವರು ಕರ್ನಾಟಕದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಗ್ರಾಮಸ್ಥರಲ್ಲಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸಲು ಧೃಡಸಂಕಲ್ಪ ಮಾಡಿ ಪ್ರಾಯೋಗಿಕವಾಗಿ ನಾಡಿನ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ವ್ಯಾಜ್ಯಮುಕ್ತ ಗ್ರಾಮ ಮಾಡಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ವ್ಯಾಜ್ಯಮುಕ್ತ ಗ್ರಾಮ ಮಾಡಬೇಕಾದರೆ ಸಾರ್ವಜನಿಕರು, ಕಕ್ಷಿದಾರರು, ವಕೀಲರು, ಜನ ಪ್ರತಿನಿಧಿಗಳು, ನ್ಯಾಯಾಧೀಶರ, ಪತ್ರಿಕಾ ಮತ್ತು ಟಿವಿ ಮಾಧÀ್ಯಮದವರ ಪಾತ್ರ ಪ್ರಮುಖವಾಗಿದೆ. ಅದೇ ರೀತಿಯಾಗಿ ವ್ಯಾಜ್ಯಮುಕ್ತ ಗ್ರಾಮ ಮಾಡುವ ಮಹತ್ವದ ಕಾರ್ಯದಲ್ಲಿ ಕಾನೂನು ಮಹಾವಿದ್ಯಾಲಯಗಳ ಪಾತ್ರವು ಬಹಳ ಮುಖ್ಯವಾಗಿದೆ ಹೀಗಾಗಿ ತಮ್ಮ ಗ್ರಾಮವನ್ನು ದತ್ತು ಪಡೆದಿದ್ದು, ವ್ಯಾಜ್ಯಮುಕ್ತ ಗ್ರಾಮ ಮಾಡಲು ತಮ್ಮ ಸಹಕಾರ, ಸಲಹೆ, ಅಗತ್ಯ ನೆರವು ಅತೀ ಅವಶ್ಯವಾಗಿದೆ. ಆದ್ದರಿಂದ ತಾವೆಲ್ಲರೂ ಗ್ರಾಮವನ್ನು ವ್ಯಾಜ್ಯಮುಕ್ತ ಮಾಡುವಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕೆಂದು ತಮ್ಮಲ್ಲಿ ಕಳ ಕಳಿಯಿಂದ ವಿನಂತಿಸುತ್ತೇವೆ.

ಮಾನವ ಸಮಾಜ ವಿಕಾಸದಲ್ಲಿ ನ್ಯಾಯಾಂಗ ಒಂದು ಸ್ವತಂತ್ರ ಶಕ್ತಿಯಾಗಿ ಬೆಳೆದುಬಂದಿದೆ. ಇಂದಿನ ಇವತ್ತು ನ್ಯಾಯಾಂಗ ಇಲ್ಲದ್ದಿದ್ದರೆ ನಾಗರಿಕ ಸಮಾಜ ಅಲ್ಲೋಲಕಲ್ಲೋಲವಾಗುತ್ತಿತ್ತು, ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯದ ಮೂಲಕ ನ್ಯಾಯವನ್ನು ಪಡೆಯುತ್ತಿದ್ದಾರೆ, ಆದರೂ ಇನ್ನೂ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುತ್ತವೆ.

ನಾಗರೀಕ ಸಮಾಜಗಳ ಅತಿ ಮುಖ್ಯವಾದ ಲಕ್ಷಣಗಳಲ್ಲಿ ಆ ಸಮಾಜಗಳಲ್ಲಿನ ನಿವಾಸಿಗಳು, ತಮ್ಮೊಳಗಿನ ವ್ಯಾಜ್ಯಗಳನ್ನು ಹೇಗೆ ಶಾಂತಯುತವಾಗಿ ಪರಿಹರಿಸಿಕೊಳ್ಳಬೇಕು ಎಂಬುದಕ್ಕೆ ರಾಜೀಸಂಧಾನದ ಪಾತ್ರ ಅತಿ ಮಹತ್ವದಾಗಿದೆ. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕರೆ ಅವರು ತೃಪ್ತಿ ಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅವರು ಅಸವiದಾನಗೊಳ್ಳುತ್ತಾರೆ. ಬಡವ ಬಲ್ಲಿದ, ಅನಕ್ಷರಸ್ಥರು, ಸಬಲ-ದುರ್ಬಲರೆಂಬ ಭೇದ-ಭಾವವಿಲ್ಲದೆ, ಯಾರಿಗೆ ಆಗಲಿ, ನ್ಯಾಯ ದೊರಕಿಸಿಕೊಡುವ ಸಂಸ್ಥೆಗಳೆAದರೆ ನ್ಯಾಯಾಲಯಗಳು. ಭಾರತ ದೇಶದಲ್ಲಿ ನ್ಯಾಯಾಂಗ ಒಂದು ಬಲಾಢ್ಯ ಸಂಸ್ಥೆಯಾಗಿ ಬೆಳೆದು ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದೆ. ಭಾರತದ ಜನ ಸಾಮಾನ್ಯರು ವಿಶ್ವಾಸ ಮತ್ತು ನಂಬಿಕೆಯನ್ನು ಇಟ್ಟಿರುವ ಸಂಸ್ಥೆಯೆAದರೆ ಅದು ನ್ಯಾಯಾಲಯ. ಈಗಾಗಲೇ ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳು ಜನರಿಗೆ ಕಾನೂನು ಅರಿವು-ನೆರವು ಜೊತೆಗೆ ಲೋಕ ಅದಾಲತ್‌ಗಳನ್ನು ಏರ್ಪಡಿಸಿ ರಾಜೀ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡುತ್ತಾ ಬಂದಿರುವದು ಶ್ಲಾಘನೀಯ ಸಂಗತಿಯಾಗಿದೆ.

ಈ ನಿಟ್ಟಿನಲ್ಲಿ ನಾವು ದತ್ತು ಪಡೆದ ಗ್ರಾಮಗಳ ಜತೆಗೆ ರಾಜ್ಯದ ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಅವರ ಸ್ವಾಸ್ಥö್ಯ ಸಮಾಜ ನಿರ್ಮಾಣದತ್ತ ಕೈಗೊಂಡಿರುವ ಈ ‘ವ್ಯಾಜ್ಯಮುಕ್ತ ಗ್ರಾಮ’ಗಳನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು.

ಉಪಸ್ಥಿತಿ: ಆರ್.ಎಂ. ಮೂಲಿಮನಿ, ಅಧ್ಯಕ್ಷರು, ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆ (ರಿ), ಎಸ್.ಕೆ. ಪಾಟೀಲ ವಕೀಲರು, ಅಧ್ಯಕ್ಷರು, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಎಸ್.ಕೆ. ನದಾಫ ವಕೀಲರು, ಉಪಾಧ್ಯಕ್ಷರು, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಗದಗ. ಶ್ರೀಮತಿ ಪಲ್ಲವಿ ಎಸ್. ಬುಯ್ಯಾರ್, ಪ್ರಾಚಾರ್ಯರು, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಗದಗ, ಕುಮಾರಿ ನಾಜೀಮಾ ಎನ್. ಮುಲ್ಲಾ, ಸಂಯೋಜಕರು, ಕಾನೂನು ಅರಿವು-ನೆರವು ಮತ್ತು ಮಾನವ ಹಕ್ಕುಗಳ ಘಟಕ, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಗದಗ ಶ್ರೀ ಎಸ್.ಐ ಅಣ್ಣಿಗೇರಿ,ಶ್ರೀ ಮಹಾಂತೇಶ ಕೊರಡಕೇರಿ, ಸಂಯೋಜಕರು ಎನ್ ಎಸ್ ಎಸ್ ಘಟಕ, ಶ್ರೀ ವಿಶ್ವನಾಥ ಹಿರೇಮಠ ಸಂಯೋಜಕರು ಯುತ್ ರೇಡ್ ಕ್ರಾಸ್ ಘಟಕ, ಶ್ರೀ ಎಮ್ ವ್ಹಿ ಹಿರೇಮಠ ಸಂಯೋಜಕರು ಸಂಸ್ಕೃತಿಕ ವಿಭಾಗ, ಹಾಗೂ ಶ್ರೀ ಡಿ.ಎಲ್ ಕುಲಕರ್ಣಿ, ಶ್ರೀಮತಿ ಸಂಗೀತಾ ಪಾಟಿಲ, ಕು.ಬಸಮ್ಮ.ಎಚ್,ಶ್ರೀ ಮಹಾಂತೇಶ ಮಡ್ಡಿ, ಕು. ಅನುಸೂಯಾ ಕೇರಿ, ಹಾಗೂ ಶ್ರೀ ಎನ್.ವ್ಹಿ.ರಾಥೊಡ್ ಗ್ರಂಥಪಾಲಕರು ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಗದಗ.

Editor

Leave a comment