Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ಪೀರಸಾಬ ಕೌತಾಳರವರ ಜನ್ಮದಿನವನ್ನು ಸಮಾವೇಶವಾಗಿ ಪರಿವರ್ತಿಸಿದ -ಸುರೇಶ ಬೆಳಧಡಿ

ಕರುನಾಡು ಘರ್ಜನೆ ಸುದ್ದಿ ಗದಗ ೧೮: ಜವಳಗಲ್ಲಿ ೧೮ ನೇ ವಾರ್ಡಿನ ಯುವಕ ಮಂಡಳದ ಅಧ್ಯಕ್ಷರಾದ ಸುರೇಶ ಬೆಳಧಡಿ ನೇತೃತ್ವದಲ್ಲಿ ಪೀರಸಾಬ ಕೌತಾಳರವರ ಜನ್ಮದಿನವನ್ನು ನೂರಾರು ಯುವಕರೊಂದಿಗೆ ಪಕ್ಷಾತೀತವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪೀರಸಾಬ ಕೌತಾಳರವರು ನಾನು ಪ್ರಪ್ರಥಮವಾಗಿ ೧೮ನೇ…

ಕರುನಾಡು ಘರ್ಜನೆ ಸುದ್ದಿ ಗದಗ ೧೮: ಜವಳಗಲ್ಲಿ ೧೮ ನೇ ವಾರ್ಡಿನ ಯುವಕ ಮಂಡಳದ ಅಧ್ಯಕ್ಷರಾದ ಸುರೇಶ ಬೆಳಧಡಿ ನೇತೃತ್ವದಲ್ಲಿ ಪೀರಸಾಬ ಕೌತಾಳರವರ ಜನ್ಮದಿನವನ್ನು ನೂರಾರು ಯುವಕರೊಂದಿಗೆ ಪಕ್ಷಾತೀತವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪೀರಸಾಬ ಕೌತಾಳರವರು ನಾನು ಪ್ರಪ್ರಥಮವಾಗಿ ೧೮ನೇ ವಾರ್ಡಿನಿಂದ ನನ್ನ ವಾರ್ಡಿನ ಸಹೋದರ ಸಹೋದರಿಯರು ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದು ನನಗೆ ರಾಜಕೀಯ ಸ್ಥಾನ ಮಾನಕೊಟ್ಟಿದ್ದು ನಾನು ಎಂದು ಮರೆಯಲಾರೆ ಹಾಗೂ ವಿಶೇಷವಾಗಿ ೧೮ನೇ ವಾರ್ಡಿನ ಜನರಿಗೆ ನಾನು ಚಿರಋಣಿಯಾಗಿದ್ದು ಇಂದು ನನ್ನ ಹುಟ್ಟುಹಬ್ಬವನ್ನು ಸುರೇಶ ಬೆಳಧಡಿ ನೇತೃತ್ವದಲ್ಲಿ ನಡೆದಿರುವುದನ್ನು ನಾನು ಎಂದು ಮರೆಯಲಿಕ್ಕೆ ಸಾಧ್ಯವಿಲ್ಲ ಹಾಗೂ ಈ ವಾರ್ಡಿನಲ್ಲಿ ಏನೆ ಸಮಸ್ಯೆ ಇದ್ದರೂ ನಾನು ಬಗೆಹರಿಸಲಿಕ್ಕೆ ಸದಾ ಸಿದ್ದನೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ೧೮ನೇ ವಾರ್ಡಿನ ಯುವಕ ಮಂಡಳ ಅಧ್ಯಕ್ಷರಾದ ಸುರೇಶ ಬೆಳಧಡಿರವರು ಜನಾಬ ಪೀರಸಾಬ ಕೌತಾಳರವರು ಕೊಡುಗೆ ಅಪಾರವಾಗಿದ್ದು ಕೇವಲ ೧೮ನೇ ವಾರ್ಡು ಅಲ್ಲದೇ ಪೀರಸಾಬ ಕೌತಾಳರವರು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾದ ನಂತರ ರಾತ್ರಿ ೧೨-೦೦ ಗಂಟೆಯಿAದ ನಸುಕಿನ ಜಾವ ೫ ಗಂಟೆಯವರೆಗೆ ತಾವೇ ಖುದ್ದಾಗಿ ನಿಂತು ಗದಗ-ಬೆಟಗೇರಿ ಅವಳಿ ನಗರದ ಜನತೆಗೆ ನೀರು ಪೂರೈಸಿದ್ದು ಜನ ಮನದಲ್ಲಿ ಹಚ್ಚು ಹಸಿರಾಗಿ ನಿಂತಿದೆ. ಅವರ ಜನ್ಮದಿನಾಚರಣೆಯಲ್ಲಿ ಸೇರಿದ ೧೮ನೇ ವಾರ್ಡಿನ ನೂರಾರು ಯುವಕರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನ್ಯ ಪೀರಸಾಬ ಕೌತಾಳರವರಿಗೆ ಅನಿಲ ಜಕ್ಕನೂರ, ಕಾರ್ತಿಕ ಬೆಳಧಡಿ, ಹುಸೇನ ಜೈನಾಪೂರ, ಎಂ. ಡಿ. ಗಡಾದ ಅವರಿಂದ ಶಾಲು ಹೊದಿಸಿ ಬೃಹತ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಐಎಂಐಎA ಪಕ್ಷದ ಜಿಲ್ಲಾಧ್ಯಕ್ಷರಾದ ಎಂ. ಎಂ. ನಾಯ್ಕರ, ೧೮ನೇ ವಾರ್ಡಿನ ಕಾಂಗ್ರೆಸ್ ಮುಖಂಡರಾದ ತೌಸಿಫ ಕಮಾನಗಾರ, ಹಸನ ಮುಲ್ಲಾ, ಇರ್ಷಾದ ಕಾಗದಗಾರ ಹಾಗೂ ೧೮ನೇ ವಾರ್ಡಿನ ಜವಳಗಲ್ಲಿಯ ನೂರಾರು ಯುವಕರು ಮತ್ತು ಹಿರಿಯರು ಉಪಸ್ಥಿತರಿದ್ದರು.

Editor

Leave a comment