ಕರುನಾಡು ಘರ್ಜನೆ ಸುದ್ದಿ ಗದಗ ನಿನ್ನೆ ಸಾಯಂಕಾಲ 5 ಗಂಟೆಗೆ ನನ್ನ ಕಿವಿಗೆ ಬಿದ್ದ ಸುದ್ದಿ ಇಬ್ರಾಹಿಂ ಸರ್ ವರ್ಗಾವಣೆಯಾಗಿದೆ ಗಂಗಾವತಿ ನಗರಸಭೆಗೆ ಎಂದು ಆಗ ನನಗೆ ಅಚ್ಚರಿ ಜೊತೆಗೆ ಬೇಜಾರು ಈ ಸುದ್ದಿಯನ್ನು ಕಚಿತಗೊಳಿಸಲು ನಾನು ಒಂದಿಬ್ಬರಿಗೆ ಕರೆ ಮಾಡಿದೆ ನಂತರ whatsapp ಗೆ ಬಂದ ಪಿಡಿಎಫ್ ಅನ್ನು ನೋಡಿ ಖಚಿತವಾಯಿತು ಆಗ ನನಗೆ ಬಹಳ ದುಃಖ ನಿಮ್ಮೊಂದಿಗೆ ಇನ್ನಷ್ಟು ದಿನ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂಬ ನೋವು ನಿರಾಸೆ.
ಆದರೆ ನೀವು ನಮ್ಮ ಮೇಲೆ ತೋರಿದ ಪ್ರೀತಿ ಕಾಳಜಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿಯಾಗಿರುತ್ತೇನೆ . ಗದಗ-ಬೆಟಗೇರಿ ನಗರಸಭೆಗೆ ನೀವು ಬರುವ ಮೊದಲು ನಾವು ತುಂಬಾ ಕಷ್ಟದಲ್ಲಿದ್ದೆವು ಅಂದರೆ ನಮಗೆ ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ E S I ಮತ್ತು E P F ಸೌಲಭ್ಯ ಇರಲಿಲ್ಲ. ಅದು ನೀವು ಬಂದ ಮೇಲೆ ಅದನ್ನು ನೀವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ನಮಗೆ ಸಿಗಬೇಕಾದ ಸೌಲಭ್ಯ ವನ್ನು ಕೊಡಿಸಿದಿರಿ. ನೀವು ಈಗ ನಮ್ಮನ್ನೆಲ್ಲ ಬಿಟ್ಟು ಬೇರೆ ಸಂಸ್ಥೆಗೆ ಸೇವೆ ಸಲ್ಲಿಸಲು ಹೊರಟಿದ್ದೀರಿ ನೀವು ಇನ್ನೂ ಉನ್ನತ ಹುದ್ದೆಗೆ ಏರಿ ಸೇವೆ ಒದಗಿಸುವ ಅವಕಾಶವನ್ನು ಆ ಭಗವಂತ ನೀಡಲಿ ಎಂದು ಆಶಿಸುತ್ತೇನೆ ಮತ್ತೊಮ್ಮೆ ನಿಮ್ಮ ಕೈ ಕೆಳಗೆ ಸೇವೆ ಮಾಡಲು ಅವಕಾಶ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆ ಎಲ್ಲಾ ವಾಲ್ಮನ್ನರಗಳ ಪ್ರಕಾಶ್ ಬೆನ್ನಮಟ್ಟಿ ದೇವಪ್ಪ ಉಪ್ಪಾರ್ ಮಲ್ಲಿಕಾರ್ಜುನ್ ಮಾವಳ್ಳಿ ರಂಗನಾಥ ಕೋಣಿ ನಾಗರಾಜ್ ಬೆನ್ನಾಮಟ್ಟಿ ರಮೇಶ್ ಕೋನಿ, ಶಿವರಾಜ್, ಮಾರುತಿ ಭಜಂತ್ರಿ, ರಾಜು ಆರಟ್ಟಿ, ಮಂಜುನಾಥ್, ವಾಸು, ಶರಣಪ್ಪ ಕುರಿ, ಅಡಿವಪ್ಪ ಗೌಡ್ರ್, ಸಿದ್ದಪ್ಪ, ಸೋಮು, ಮಹಮ್ಮದ್, ಶಿವರಾಜ್, ಭರತ್, ಬಾಂಡಿಗೆ, ರಿಯಾಜ್, ಪ್ರವೀಣ್, ಮೈಲಾರಪ್ಪ, ಪ್ರಕಾಶ್, ವಿರುಪಾಕ್ಷಿ, ನಾರಾಯಣ, ಮುಂತಾದವರು