ಕರುನಾಡು ಘರ್ಜನೆ ಸುದ್ದಿ ಗದಗ, 27 : ಫೆಬ್ರವರಿ 4 ರಂದು ಶರಣರ, ದಾರ್ಶನಿಕ ಚಿಂತನೆ ವಿಚಾರಧಾರೆಗಳನ್ನು ತಿಳಿಸುವ ಮತ್ತು ಸವಿತಾ ಮಹರ್ಷಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಾಜದ ಆಶಯದಂತೆ ಸರ್ಕಾರದ ಆದೇಶವನ್ನು ಗದಗ ಜಿಲ್ಲೆಯ ಯಲ್ಲಾ ತಾಲ್ಲೂಕಾ ಮಟ್ಟದ ಯಾವದೇ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವಂತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಗದಗ ಜಿಲ್ಲಾಧಿಕಾರಿಗಳಿಗೆ ಪ್ರಕಟಣೆ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ
ಸವಿತಾ ಮಹರ್ಷಿಗಳ ಇತಿಹಾಸವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿ ಇಲಾಖೆ ಅಂಗನವಾಡಿಗಳಲ್ಲಿ ಜಯಂತಿ ಆಚರಣೆಯಷ್ಟೆ ಅಲ್ಲ ಮಕ್ಕಳಿಗೆ ತಿಳಿಸಲು ಶಿಕ್ಷಣ ಇಲಾಖೆ ಸಹ ಆದೇಶಿಸಬೇಕು
ಕಳೆದ 2023 ನೇ ವರ್ಷ ಸವಿತಾ ಮಹರ್ಷಿ ಜಯಂತಿ ದಿನದಂದು ಶಿರಹಟ್ಟಿ ತಹಶೀಲ್ದಾರರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಅವರನ್ನು ಅಮಾನತ್ತು ಮಾಡಿಸಲು ಒತ್ತಾಯಿಸಿದ್ದೇವು ಈಬಾರಿ ಅಂತಹ ಘಟನೆ ಪುನರಾವರ್ತನೆಗೊಂಡರೆ ಅಂತವರ ವಿರೂದ್ದ ಸೂಕ್ತಕ್ರಮಕ್ಕಾಗಿ ಗದಗ ಜಿಲ್ಲಾ ಸವಿತಾ ಸಮಾಜವು ಅನಿವಾರ್ಯವಾಗಿ ಹೋರಾಟ ಮಾಡಲಾಗುವದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಎಚ್ಚರಿಕೆ ನೀಡಿದ್ದಾರೆ