ಕರುನಾಡು ಘರ್ಜನೆ ಸುದ್ದಿ ಗದಗ : ಸಂವಿಧಾನ ವಿರೋಧಿಸಿ ಹೊಸದಾಗಿ ನಿರ್ಮಿಸಲು ಹೊರಟಿರುವ ಅಖಂಡ ಹಿಂದು ರಾಷ್ಟ್ರದ ಸಂವಿಧಾನ ರಚಣೆ ವಿರುದ್ಧ & ಬಹುಜನರ ವಿರೋಧಿ ಚಟುವಟಿಕೆಯನ್ನು ಖಂಡಿಸಿ ಗದಗ ಜಿಲ್ಲಾ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಡಾ| ಬಾಬು ಜಗಜೀವನರಾವ್ ಸಮಾನತೆ ಸಮಿತಿ, ವತಿಯಿಂದ ಮನವಿ ಪತ್ರ,ಮಾನ್ಯ ಘನವೆತ್ತ ರಾಷ್ಟ್ರಪತಿ, ಭಾರತ ಸರ್ಕಾರ, ದೇಹಲಿ ರವರಿಗೆ ಮಾನ್ಯ ತಹಶಿಲ್ದಾರ, ಗದಗ ಇವರ ಮುಖಾಂತರ
ಮಹಾನ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ ದೇಶದಲ್ಲಿ ಬಹುಜನ ಸಮಾಜ ನಿರ್ಮಾಣ ಹೊಂದಿರುವ ಹಾಗೂ ಸ್ವತಂತ್ರ ಭಾರತದ ಸ್ವಾತಂತ್ರ್ಯವನ್ನು ಬಗ್ಗು ಬಡಿಯಲು ಶೀಘ್ರದಲ್ಲೆಯೇ ಸಿದ್ದವಾಗುತ್ತಿರುವ ಪ್ರಯಾಗರಾಜದಲ್ಲಿ ದಿನಾಂಕ: ಫೆಬ್ರುವರಿ 03, 2025 ರಂದು ಮಹಾಕುಂಭ ಮೇಳದಲ್ಲಿ ಅನಾವರಣಗೊಳಿಸಲು ಉದ್ದೇಶಿಸಿರುವ ಅಖಂಡ ಹಿಂದು ರಾಷ್ಟ್ರದ ಸಂವಿಧಾನ ರಚಣೆ ಹಾಗೂ ಜಾತಿ ವಿರೋಧಿ ಚಟುವಟಿಕೆಗಳನ್ನು ನಡೆಸಲು ಪ್ರಚೋಧನೆ ನೀಡುತ್ತಿರುವ ಬಿ.ಜೆ.ಪಿ ಹಾಗೂ ಎನ್.ಡಿ.ಎ ಮೈತ್ರಿಕೂಟ, ಮಾನ್ಯ ಘನವೆತ್ತ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿಯವರ ನಡೆಯನ್ನು ಖಂಡಿಸಿ ಮನವಿ ಪತ್ರ,
ಮಾನ್ಯ ಪ್ರಧಾನ ಮಂತ್ರಿ ಮೋದಿಯವರೇ ನೀವು ಲೋಕಸಭೆಯಲ್ಲಿ ರಾಜ್ಯಸಭೆಯಲ್ಲಿ ನಿಮಗೆ ಬಹುಮತ ಸಿಕ್ಕಿರಬಹುದು, ಆದರೆ ಇದು ಪ್ರಜಾಪ್ರಭುತ್ವದ ಬಹುಜನರು ವಾಸಿಸುತ್ತಿರುವ ಈ ದೇಶದಲ್ಲಿ ಬಹುಮತದಲ್ಲಿ ಇದ್ದೇವೆ ನೀವು ಸಂವಿದಾನವನ್ನು ಮುಟ್ಟಲು ಹೊದರೆ ನಿಮ್ಮ ಒಬ್ಬ ಎಮ್.ಎಲ್.ಎ. ಎಂಪಿ. ಬೀದಿಯಲ್ಲಿ ಓಡಾಡಲು ಬಿಡಲ್ಲ ಹಾಗೂ ಮೊದಲಿಗೆ ದಲ್ಲಾಳಿ ಎಸ್.ಸಿ ಎಸ್.ಟಿ ಎಮ್.ಎಲ್.ಎ. ಎಂ.ಪಿಗಳಿಗೆ ನಂತರ ಮಿಕ್ಕವರಿಗೆ ಬೀದಿಯಲ್ಲಿ ಅಟ್ಟಾಡಿಸಿ ಹೊಡಿತೀನಿ ಎಂದು ಅಂಬೇಡ್ಕರಮೊಮ್ಮಗ ಇವರು ಮೀಡಿಯಾದಲ್ಲಿ ಎಚ್ಚರಿಕೆ ಕೊಟ್ಟಿರುತ್ತಾರೆ. ಮುಂದುವರೆದು, ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ರಾಜ್ಯ ಸಭೆಯಲ್ಲಿ ಅಂಬೇಡ್ಕರ ಕುರಿತು ಅವಮಾನಕರವಾಗಿ ಮಾತನಾಡಿರುವುದು ಇದು ಘನವೆತ್ತ ಭಾರತ ಸರ್ಕಾರದ ಬಿ.ಜೆ.ಪಿ ಪಕ್ಷದ ಪ್ರತಿಯೊಬ್ಬ ದಲ್ಲಾಲಿಗಳು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದು ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧವನ್ನು ಎತ್ತಿತೋರಿಸುತ್ತದೆ.
ಮಾನ್ಯ ಪ್ರಧಾನ ಮಂತ್ರಿ ಮೋದಿಯವರೇ ನೀವು ಭಾರತದ ಪ್ರಜೆಯಾಗಿ ಸಂವಿಧಾನ ನೀಡಿದ ಭಿಕ್ಷೆಯಿಂದ ನೀವು ಒಂದು ಚಹಾ ಮಾರುವ ವ್ಯಕ್ತಿಯಾಗಿದ್ದು ಇಂದು ಮುಖ್ಯ ಮಂತ್ರಿ ನಂತರ ಪ್ರಧಾನ ಮಂತ್ರಿ ಹುದ್ದೆಗೆರಲು ನೆರವಾಗಿದ್ದು ಸಂವಿಧಾನವೇ ಹೊರತು ಮನುವಾದಿ ಸಂಸ್ಕೃತಿಯಂದಿಲ್ಲ. ಕಾರಣ ಸಂವಿಧಾನ ವಿರೋಧಿ ಚಟುವಟಿಕೆಯಾದ ಪ್ರಯಾಗರಾಜದಲ್ಲಿ ದಿನಾಂಕ: ಫೆಬ್ರುವರಿ 03, 2025 ರಂದು ಮಹಾಕುಂಭ ಮೇಳದಲ್ಲಿ ಅನಾವರಣಗೊಳಿಸಲು ಉದ್ದೇಶಿಸಿರುವ ಅಖಂಡ ಹಿಂದು ರಾಷ್ಟ್ರದ ಸಂವಿಧಾನ ರಚಣೆ ಹಾಗೂ ಜಾತಿ ವಿರೋಧಿ ಚಟುವಟಿಕೆಗಳನ್ನು ನಡೆಸಲು ಪ್ರಚೋಧನೆ ನೀಡುತ್ತಿರುವ ಬಿ.ಜೆ.ಪಿ ಹಾಗೂ ಎನ್.ಡಿ.ಎ. ಮೈತ್ರಿಕೂಟದ ಕೇಂದ್ರ ಸರ್ಕಾರದ ವಿರುದ್ಧ ಗದಗ ಜಿಲ್ಲಾ ಡಾ।। ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಡಾ|| ಬಾಬು ಜಗಜೀವನರಾವ್ ಸಮಾನತೆ ಸಮಿತಿಯು ತೀವ್ರವಾಗಿ ಖಂಡಿಸಿದೆ. ಹಾಗೂ ಅಖಂಡ ಹಿಂದು ರಾಷ್ಟ್ರದ ಸಂವಿಧಾನ ರಚಣೆಗೊಂಡಲ್ಲಿ ಭಾರತದಲ್ಲಿ ಮತ್ತೊಮ್ಮೆ ಭೀಮಾ ಕೋರೆಗಾಂವನಂತಹ ಮತ್ತೊಂದು ಮಹಾಯುದ್ಧ ನಡೆಯುವುದು ಎಂದು ಎಚ್ಚರಿಕೆ ನೀಡಿದೆ.
ಕಾರಣ ತಕ್ಷಣ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಗದಗ ಜಿಲ್ಲಾ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಡಾ| ಬಾಬು ಜಗಜೀವನರಾವ್ ಸಮಾನತೆ ಸಮಿತಿ ವತಿಯಿಂದ ಮನವಿ. ಈ ಸಂದರ್ಭದಲ್ಲಿ ಗೋವಿಂದರಾಜ ಬಳ್ಳಾರಿ ಜಿಲ್ಲಾ ಸಂಚಾಲಕ ಮಾರ್ತಾಂಡಪ್ಪ ಹಾದಿಮನಿ ಪೃಥ್ವಿ ಪರಾಪೂರ ನಾಗೇಶ್ ಕಿಟಕಿ ಮಂಜುನಾಥ ಚಂದ್ರಗಿರಿ ನವೀನ್ ಭಂಡಾರಿ ನಾರಾಯಣ ಕಿನ್ನಾಳ ಬಾಬು ನರಸಪೂರ ಪವನ್ ಬಳ್ಳಾರಿ ಪೃಜವಲ ಯಟ್ಟಿ ಮಿಥುನ ತೌಜಲ ಉಪಸ್ಥಿತರಿದ್ದರು .