ಕರುನಾಡು ಘರ್ಜನೆ ಸುದ್ದಿ ಗದಗ: ದಿವಂಗತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ನಾಳೆ ಒಂದೇ ದಿನ. ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಅವರ ಹುಟ್ಟುಹಬ್ಬವನ್ನು ನೆನಪಿಸುವ ನಿಟ್ಟಿನಲ್ಲಿ ಇಂದು ಜಾಕಿ ಸಿನಿಮಾ ರಿ ರಿಲೀಸ್ ಮಾಡಲಾಗಿದೆ.ಗದಗ ಶಾಂತಿ ಥಿಯೇಟರ್ನಲ್ಲಿ ಮೂದಲು ಶೋ ಆರಂಭ ಜಾಕಿ ಸಿನಿಮಾ ಬಿತ್ತರಿಸಲಾಗುತ್ತಿದೆ. ಥಿಯೇಟರ್ ಪೂರ್ತಿ ಜನಜಂಗುಳಿಯಿಂದ ಕೂಡಿದ್ದು ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಅಪ್ಪು ಫ್ಯಾನ್ಸ್ ಅಂತೂ ಜಾಕಿ ರೀ ರಿಲೀಸ್ ಅನ್ನ ಹಬ್ಬದಂತೆ ಆಚರಿಸುತ್ತಿದ್ದಾರೆ.ಬಹುತೇಕ ಚಿತ್ರಮಂದಿರಗಳಲ್ಲಿ ಶೋ ಹೌಸ್ ಫುಲ್ ಆಗಿದೆ. ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜಾಕಿ ರಿಲೀಸ್ ಆಗಿದೆ. ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜಾಕಿ ಸಿನಿಮಾ ರೀ ರಿಲೀಸ್ ಮಾಡಲಾಗಿದೆ.ಹಿಟ್ ಸಿನಿಮಾ ಜಾಕಿ 2010 ರಲ್ಲಿ ಬಿಡುಗಡೆ ಆಗಿದ್ದ ಜಾಕಿ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ದುನಿಯಾ ಸೂರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ನಟಿ ಭಾವನಾ ಅವರು ಅಪ್ಪುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 7 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಅಂದು 30 ಕೋಟಿಯನ್ನು ಬಾಚಿತ್ತು.
ಪವರ್ ಸ್ಟಾರ್ ಪುನೀತ್ ‘ಜಾಕಿ’ ಸಿನಿಮಾ ರಿ ರಿಲೀಸ್.. ಅಪ್ಪು ನೋಡಿ ಹುಚ್ಚೆದ್ದ ಫ್ಯಾನ್ಸ್, ಥಿಯೇಟರ್ಗಳು ಹೌಸ್ ಫುಲ್
ಕರುನಾಡು ಘರ್ಜನೆ ಸುದ್ದಿ ಗದಗ: ದಿವಂಗತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ನಾಳೆ ಒಂದೇ ದಿನ. ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಅವರ ಹುಟ್ಟುಹಬ್ಬವನ್ನು ನೆನಪಿಸುವ ನಿಟ್ಟಿನಲ್ಲಿ ಇಂದು ಜಾಕಿ ಸಿನಿಮಾ ರಿ ರಿಲೀಸ್ ಮಾಡಲಾಗಿದೆ.ಗದಗ ಶಾಂತಿ ಥಿಯೇಟರ್ನಲ್ಲಿ …