ಕರುನಾಡು ಘರ್ಜನೆ ಸುದ್ದಿ: ಗದಗ ಕಮ್ಯುನಿಸ್ಟ್ ಮಾದರಿಯ ರಾಷ್ಟ್ರದಲ್ಲಿ ಅಲ್ಲಿಯ ಪ್ರಜೆಗಳು ಒಂದೇ ತರಹದ ಕಾನೂನುಗಳನ್ನು ಪಾಲನೆ ಮಾಡಬೇಕು ಅದು ಧಾರ್ಮಿಕ ವಿರಲಿ ಅಥವಾ ಧಾರ್ಮಿಕ ಹೊರತುಪಡಿಸಿರಲಿ ಜನರು ಯಾವ ರೀತಿ ಬದುಕಬೇಕೆಂದು ಆ ರಾಷ್ಟ್ರವು ತೀರ್ಮಾನ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಎರಡು ಮಾದರಿಯ ಆಡಳಿತ ವ್ಯವಸ್ಥೆಗಳಿವೆ. ಒಂದು ಅಧ್ಯಕ್ಷೀಯ ಮಾದರಿಯಾದರೆ ಇನ್ನೊಂದು ಸಂಸದೀಯ ವ್ಯವಸ್ಥೆ. ಅಧ್ಯಕ್ಷೀಯ ಮಾದರಿಯಲ್ಲಿ ರಾಷ್ಟ್ರಾಧ್ಯಕ್ಷರು ನೇರವಾಗಿ ಜನರಿಂದ ಅಥವಾ ಅಧ್ಯಕ್ಷರ ಆಯ್ಕೆಗಾಗಿಯೇ ಜನರಿಂದ ಆಯ್ಕೆಯಾದ ಮಂಡಳಿಯಿಂದ ಚುನಾಯಿತರಾಗುತ್ತಾರೆ. ದೇಶದ ಆಡಳಿತದಲ್ಲಿ ಅಧ್ಯಕ್ಷರು ನಿರ್ಣಯ ಅಂತಿಮವಾಗಿರುತ್ತದೆ.
ಸಂಸದೀಯ ವ್ಯವಸ್ಥೆಯಲ್ಲಿ ಆಡಳಿತ ಚುಕ್ಕಾಣಿ ಸಂಪೂರ್ಣವಾಗಿ ಪ್ರಧಾನ ಮಂತ್ರಿಗಳದಾಗಿರುತ್ತದೆ. ರಾಷ್ಟ್ರಾಧ್ಯಕ್ಷರ ಹುದ್ದೆ ಅಥವಾ ರಾಷ್ಟ್ರಪತಿಗಳ ಹುದ್ದೆ ಕೇವಲ ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿರುತ್ತದೆ. ಭಾರತ ದೇಶವು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡೋ ಮುಖಾಂತರ ಸಂಸದೀಯ ವ್ಯವಸ್ಥೆಯಿಂದ ಅಧ್ಯಕ್ಷೀಯ ಮಾದರಿ ವ್ಯವಸ್ಥೆ ಕಡೆಗೆ ಹೆಜ್ಜೆ ಇಡುತ್ತಿರುವುದು ಆಘಾತಕಾರಿ ಆಗಿದೆ. ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಕಟ್ಟಿ ಹೇಳಿದ್ದಾರೆ.
ಪ್ರಸ್ತುತ ನಮ್ಮ ದೇಶದಲ್ಲಿ ಅಪರಾಧಿಕ್ಕೆ ಸಂಬಂಧಿಸಿದಂತೆ ಭಾರತದ ಪ್ರಜೆಗಳಲ್ಲಿ ಅವರು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ, ಕ್ರಿಶ್ಚನ್ ಆಗಿರಲಿ,ಯಾವುದೇ ಜಾತಿಗೆ ಸಂಬಂಧ ಪಟ್ಟವನಾಗಿರಲಿ ಅವರಿಗೆ ಭಾರತೀಯ ನ್ಯಾಯ ಸಂಹಿತಾ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಕಾನೂನು ಅಡಿಯಲ್ಲಿ ಶಿಕ್ಷಿಸಲಾಗುತ್ತದೆ. ಅಪರಾಧಿಕ ಪ್ರಕರಣಗಳನ್ನು ಹೊರತುಪಡಿಸಿ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಅವರವರ ಧರ್ಮದ ಆಧಾರದ ಮೇಲೆ ಕಾನೂನುಗಳನ್ನು ಮಾಡಲಾಗಿದೆ. ಉದಾಹರಣೆಗೆ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದಂತೆ ಹಿಂದೂ ಉತ್ತರಾಧಿಕಾರಿ ಕಾಯ್ದೆ, ಮುಸ್ಲಿಂ ಉತ್ತರಾಧಿಕಾರಿ ಕಾಯ್ದೆ ಮುಂತಾದವುಗಳನ್ನು ಧರ್ಮಗಳ ಆಚರಣೆಯ ಆಧಾರದ ಮೇಲೆ ಕಾನೂನುಗಳನ್ನು ಮಾಡಲಾಗಿದೆ. ಮದುವೆ, ಶವಸಂಸ್ಕಾರ, ಮರಣ ಶಾಸನ,ವಿಚ್ಛೇದನ,ಆಸ್ತಿಗಳ ಹಂಚಿಕೆ ಮತ್ತು ಪೂಜಾ ಪದ್ಧತಿಗಳಿಗೆ ಸ್ವತಂತ್ರ ಕಾನೂನುಗಳನ್ನು ಮಾಡಲಾಗಿದೆ.ಇದು ನಮ್ಮ ಸಂವಿಧಾನದ ಬಹುದೊಡ್ಡ ಕೊಡುಗೆಯಾಗಿದೆ.
ನಮ್ಮ ದೇಶದ ಸಂವಿಧಾನವು ಎರಡು ಮುಖ್ಯ ಭಾಗಗಳನ್ನು ಹೊಂದಿದೆ.ಒಂದು ಮೂಲಭೂತ ಹಕ್ಕುಗಳು ಮತ್ತು ಎರಡನೆಯದು ರಾಜ್ಯ ನೀತಿಯ ನಿರ್ದೇಶನ ತತ್ವಗಳು. ಇಬ್ಬರ ನಡುವಿನ ವಿವಾದಗಳ ವಿಷಯದಲ್ಲಿ, ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡಲಾಗುತ್ತದೆ.
ಭಾರತದಲ್ಲಿ, ನಮಗೆ ಧರ್ಮ, ಭಾಷಣ ಮತ್ತು ಸ್ವಂತ ಧರ್ಮವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ. ಮತ್ತು ಇದು ಕೇವಲ ಸ್ವಾತಂತ್ರ್ಯವಲ್ಲ, ಅದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಡಾ. ಬಿ ಆರ್ ಅಂಬೇಡ್ಕರ್ ಅವರು ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆ ಯಾವತರ ಇತ್ತು ಅಂತ ಹೇಳಿದರೆ ಮೀಸಲಾತಿ ನೀಡುವ ಮುಖಾಂತರ ಬಹಳಷ್ಟು ತುಳಿತಕ್ಕೊಳಗಾಗದ ಮಹಿಳೆಯರನ್ನು ಮೇಲ್ದರ್ಜೆಗೆ ತರುವುದು ಹಾಗೂ ಪುರುಷರ ಸಮಾನವಾಗಿ ನಿಲ್ಲಿಸುವುದು ಮತ್ತು ಅವರಿಗೆ ಆಸ್ತಿಯಲ್ಲಿ ಕಾನೂನು ಬದ್ಧವಾದ ಹಕ್ಕನ್ನು ದೊರಕಿಸುವುದು, ಧರ್ಮದ ಹೆಸರಿನಲ್ಲಿ ನಡೆಯುವ ಅಸ್ಪೃಶ್ಯತೆ ನಿವಾರಣೆ ಮಾಡುವುದು, ಉದ್ಯೋಗದಲ್ಲಿ ಮೀಸಲಾತಿ ನೀಡುವ ಮುಖಾಂತರ ಸಮಾನತೆಯನ್ನು ಸ್ಥಾಪಿಸುವುದು ಇವರ ಉದ್ದೇಶವಾಗಿತ್ತು. ಆದರೆ ಇಂದು ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿ ಪುರೋಹಿತಶಾಹಿ ವ್ಯವಸ್ಥೆಯನ್ನು ಜಾರಿ ಮಾಡಲು ಈ ಅಜೆಂಡಾವನ್ನು ಹೊಂದಿದೆ. ರಾಜಕೀಯ ಪಕ್ಷಗಳು ಹೇಳಿಕೆಗಳನ್ನು ಗಮನಿಸಿದರೆ ಭಾರತದ ವೈವಿಧ್ಯತೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಲು ಸಂಘಟಿತ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಎಂದು ವಾಸವಾಗುತ್ತದೆ.ಏಕರೂಪ ನಾಗರಿಕ ಸಂಹಿತೆ “ಹಿಂದಿನಿಂದಲೂ ಬುಡಕಟ್ಟು ಜನಾಂಗದ ಬುಡಕಟ್ಟು ಸಂಸ್ಕೃತಿಯನ್ನು ಬದಲಾಯಿಸುವ ಒಂದು ಭಾಗವಾಗಿದೆ. ಈ ಏಕರೂಪ ನಾಗರಿಕ ಸಂಹಿತೆ ಉದ್ದೇಶ ಒಂದು ಧರ್ಮವನ್ನು ಸಂಪೂರ್ಣವಾಗಿ ಬೆಂಬಲಿಸಿ, ಉಳಿದೆಲ್ಲ ಧರ್ಮಗಳನ್ನು ಮತ್ತು ಅವರ ಸಂಪ್ರದಾಯಗಳನ್ನು ಆಚರಣೆಗಳನ್ನು ನಾಶ ಮಾಡುವ ಉದ್ದೇಶ ಅಡಗಿದೆ. ಎಲ್ಲರೂ ಒಂದು ಧರ್ಮವನ್ನು ಸ್ವೀಕರಿಸಬೇಕು ಮತ್ತು ಪುರೋಹಿತರ ಸೇವೆಯನ್ನು ಮಾಡಬೇಕು. ಮತ್ತು ಸರ್ಕಾರವು ಈ ಕಾರ್ಯವನ್ನು ಮುಸ್ಲಿಮರ ಭುಜದ ಮೇಲೆ ಇಟ್ಟು ಮಾಡ್ತಾ ಇದೆ. ಈ ಸಂಹಿತೆಯಿಂದ ಕೇವಲ ಮುಸಲ್ಮಾನರಿಗೆ ತೊಂದರೆಯಾಗುತ್ತಿದೆ ಎಂದು ಸುಳ್ಳು ಪ್ರಚಾರಪಡಿಸಿ ಜನರು ಈ ಸಂಹಿತೆ ಒಪ್ಪಿಕೊಳ್ಳುವಂತೆ ಆಕರ್ಷಿಸುವುದು ಮತ್ತು ಒತ್ತಡ ಏರುವುದು ಬಿಜೆಪಿ ಸರ್ಕಾರದ ಕಾರ್ಯತಂತ್ರದ ಒಂದು ಭಾಗವಾಗಿದೆ.
ಹಿಂದೂ,ಬೌದ್ಧ,ಸಿಖ್,ಮುಸ್ಲಿಂ,ಪಾರ್ಸಿ, ಬುಡಕಟ್ಟು ಹಾಗೂ ಕ್ರಿಶ್ಚಿಯನ್ ಇದರ ಜೊತೆಗೆ ಇನ್ನೂ ನೂರಾರು ಜಾತಿಗಳು ಸಮುದಾಯದವರು ಈ ದೇಶದಲ್ಲಿ ತಮ್ಮ ಸಂಸ್ಕೃತಿಯೊಂದಿಗೆ ಬಾಳುತ್ತಿದ್ದಾರೆ. ಇವರ ಸಂಸ್ಕೃತಿ ಉಳಿಸುವುದು ಸಂವಿಧಾನದ ಮೊದಲ ಆದ್ಯತೆ. ಇದನ್ನು ಅರಿತಿದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ‘ಸಂವಿಧಾನ ಉಳಿಸುವ ಧ್ಯೇಯ’ ಸಂವಿಧಾನದ ಮೂಲಭೂತ ಹಕ್ಕುಗಳಿಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಸಮುದಾಯಗಳಲ್ಲಿ ವಿವಾಹ, ಆಸ್ತಿಗಳ ಪಾಲುದಾರಿಕ, ಮತ್ತು ಮೃತ್ಯುರ ಅಂತ್ಯ ಸಂಸ್ಕಾರಗಳಲ್ಲಿ ವಿಭಿನ್ನ ರೀತಿಯ ಸಂಪ್ರದಾಯಗಳನ್ನು ಹೊಂದಿವೆ. ಭಾರತದಾದ್ಯಂತ ಸಾವಿರಾರು ಬುಡಕಟ್ಟು ಜನಾಂಗಗಳಿವೆ ಮತ್ತು ವಿವಾಹ ಮತ್ತು ಆಸ್ತಿ ಹಂಚಿಕೆಯ ವಿಭಿನ್ನ ಮಾರ್ಗಗಳಿವೆ. ದೇಶದಲ್ಲಿ ಧಾರ್ಮಿಕ ಕಾನೂನುಗಳು ಬೇರೆ ಬೇರೆಯಾಗಿವೆ ಆದರೆ ಅಪರಾಧಿಕ ಕಾನೂನು ಎಲ್ಲ ಧರ್ಮದವರಿಗೂ ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ. ಸರ್ಕಾರ ಹೇಳುವಂತೆ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲರೂ ಸಮಾನರು ಹಾಗಾದರೆ ಉದ್ಯೋಗದಲ್ಲಿ ಮೀಸಲಾತಿ ಇರುತ್ತದೆ ಅಥವಾ ಇರೋದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಬಿಜೆಪಿ ಸರ್ಕಾರದ ಮೂಲ ಉದ್ದೇಶ ಏಕರೂಪ ನಾಗರಿಕ ಸಂಹಿತೆಯ ಮೂಲಕ ಬಹು ಸಂಸ್ಕೃತಿ ವೈವಿಧ್ಯತೆಯನ್ನು ಹಾಳು ಮಾಡುವುದು.
ದೇಶದಲ್ಲಿ ಮೂಲಭೂತ ಹಕ್ಕುಗಳನ್ನು ನಾಶಪಡಿಸಿ ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯಗಳಾದ ಎಸ್‌ಸಿ,ಎಸ್‌ಟಿ ಜನಾಂಗದವರಿಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಶೋಷಣೆ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. “ಯಾವುದೇ ಪ್ರಾಮಾಣಿಕ ಸರ್ಕಾರವು ಮೊದಲು ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. ರಾಜ್ಯ ನಿರ್ದೇಶನದ ತತ್ವಕ್ಕೆ ವಿರುದ್ಧವಾಗಿ 25 ನೇ ವಿಧಿಗೆ ಬಂದಾಗ, ಲೇಖನ 25 ನಿಲ್ಲುತ್ತದೆ. ಸಂವಿಧಾನ ಎಲ್ಲರಿಗೂ ಧರ್ಮದ ಹಕ್ಕನ್ನು ನೀಡಿದೆ. ಜನರು ಇದರ ಬಗ್ಗೆ ಗಮನಹರಿಸಬೇಕು. ಸರ್ಕಾರವು ಪರೋಕ್ಷ ಮತ್ತು ಅಪರೋಕ್ಷವಾಗಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲೆ ಪುರೋಹಿತಶಾಹಿ ವ್ಯವಸ್ಥೆಯನ್ನು ಅನುಷ್ಠಾನ ಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಮೊದಲಿನಿಂದಲೂ ಸಂವಿಧಾನ ಬದಲಾಯಿಸುವುದು ಮೊದಲ ಉದ್ದೇಶವಾಗಿದೆ. ಏಕೆಂದರೆ ಸಂವಿಧಾನ ರಚನೆ ಮಾಡಿದ್ದು ಒಬ್ಬ ದಲಿತ ಮಹಾನ್ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಇದನ್ನು ಆರಗಿಸಿಕೊಳ್ಳಲು ಪುರೋಹಿತರಶಾಹಿಗಳಿಗೆ ಆಗ್ತಾ ಇಲ್ಲ. ಇಂಥವರು ವಿರುದ್ಧ ಎಲ್ಲರೂ ಒಗ್ಗೂಡಿ ರಾಷ್ಟ್ರವ್ಯಾಪಿ ಶಾಂತಿಯುತ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ.
ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವಗಳು ಅನುಚ್ಛೇದ 44 ಏಕರೂಪ ನಾಗರಿಕ ಸಂಹಿತೆ (UCC) “ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ರಾಜ್ಯವು ಪ್ರಯತ್ನಿಸುತ್ತದೆ.” ಇದನ್ನು ಕಾರ್ಯಗತಗೊಳಿಸುವ ಮೊದಲು,ಭಾಗIII ಆರ್ಟಿಕಲ್ 25 ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕು – ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕು. ಭಾಗ III ರಲ್ಲಿ ಕಡ್ಡಾಯವಾಗಿದೆ. ಆರ್ಟಿಕಲ್ 44 ರಾಜ್ಯವು ಪ್ರಯತ್ನಿಸಬೇಕಾದ ಭಾಗ IV ಆಗಿದೆ. ಭಾಗ III ಯಾವಾಗಲೂ ಭಾಗ IV ರ ವಿರುದ್ಧ ಆದ್ಯತೆಯನ್ನು ತೆಗೆದುಕೊಳ್ಳುತ್ತದೆ. 25 ನೇ ವಿಧಿಗೆ ವಿರುದ್ಧವಾದ ಯಾವುದಾದರೂ ನಿರ್ದೇಶನ ತತ್ವದ ಹೆಸರಿನಲ್ಲಿ ಯಾವುದೇ ಕಾನೂನನ್ನು ರಚಿಸಲಾಗುವುದಿಲ್ಲ.ಕೇಂದ್ರ ಸರ್ಕಾರವು ಮೊದಲು ಮಣಿಪುರದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಯಂತ್ರಿಸಬೇಕು ಯಾವುದೇ ಕಾನೂನನ್ನು ಮೋಸದಿಂದ ವಂಚನೆಯಿಂದ ಅತಿಕ್ರಮಣದ ಮೂಲಕ ರೂಪಿಸಲಾಗುವುದಿಲ್ಲ ಎಂಬುದು ಬಿಜೆಪಿಯ ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಎಂ ಎಸ್ ನಾಗರಕಟ್ಟಿ ಹೇಳಿದ್ದಾರೆ.