- ಕರುನಾಡು ಘರ್ಜನೆ ಸುದ್ದಿ ಗದಗ : ನಗರದ ಐದು ವರ್ಷದ ಪ್ರಾಚೀನ ಪ್ರಸಿದ್ಧವಾದ ದೇವಸ್ಥಾನ ಪವಿತ್ರವಾದ ದೇವಸ್ಥಾನ ಶ್ರೀ ಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಂ ಸಮಾಜದ ಶಾದಿಮಹಲ ಕಟ್ಟುತ್ತಿರುವುದನ್ನ ವಿರೋಧಿಸಿ ಕ್ರಾಂತಿ ಸೇನಾ ಸಂಘಟನೆ ಬಾಬು ಬಾಕಳೆ ಅವರ ನೇತೃತ್ವದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿ ಭವನದ ಮುಂದೆ ಜೈ ಶ್ರೀರಾಮು ಎಂದು ಘೋಷಣೆ ಹಾಗೂ ಶಾದಿಮಹಲ್ ಕಟ್ಟುವುದಕ್ಕೆ ಕೊಡಬಾರದೆಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ್ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ ಗದುಗಿನ ಹಿಂದೂ ಸಮಾಜ ಪೂಜಿಸುವಂತಹ ಶ್ರೀ ಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಂ ಸಮಾಜದವರು ಶಾದಿಮಹಲ ಕಟ್ಟುತ್ತಿರುವುದು ಖಂಡನೀಯ ಯಾಕೆಂದರೆ ಅಲ್ಲಿ ಶಾದಿಮಹಲ್ ಕಟ್ಟುವುದರಿಂದ ಹಿಂದೂ ಮುಸ್ಲಿಂ ಗಲಭೆ ನಡೆಯಬಹುದು ಕೋಮು ಸೌಹಾರ್ದತೆಗೆ ಧಕ್ಕೆ ಆಗಬಹುದು ದೇವಸ್ಥಾನದ ಪವಿತ್ರತೆಗೆ ಧಕ್ಕೆ ಆಗಬಹುದು.
ಆದ ಕಾರಣ ಪಕ್ಕದಲ್ಲಿ ಶಾದಿಮಹಲ್ ಕಟ್ಟುವುದಕ್ಕೆ ಅವಕಾಶ ಕೊಡಬಾರದು ಹಾಗೂ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಶಾಸಕರಿಗೆ ನಗರಸಭೆಯ ಪೌರಾಯುಕ್ತರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಮನವಿಗೆ ಸ್ಪಂದಿಸದಿದ್ದರೆ ಮುಂದೆ ಬರುವಂತ ದಿನಮಾನಗಳಲ್ಲಿ ಎಲ್ಲ ಹಿಂದೂ ಸಮಾಜದ ಬಂಧುಗಳು ಒಂದಾಗಿ ಗೆಲ್ಲುವವರೆಗೂ ಉಗ್ರವಾದ ಹೋರಾಟ ಮಾಡುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಸುಧೀರ್ ಕಾಟಿಗರ್ ಮಾತನಾಡಿ ದೇವಸ್ಥಾನ ಪಕ್ಕದಲ್ಲಿ ಶಾದಿಮಹಲ ಕಟ್ಟದೆ ಗದಗ್ ನಗರದಲ್ಲಿ ಕೋಮು ಸೌಹಾರ್ದತೆಗೆ ಮತ್ತೊಮ್ಮೆ ಹೆಸರಾಗಬೇಕು ಎಂದು ಹೇಳಿದರು ಬೇರೆ ಸ್ಥಳಗಳಲ್ಲಿ ಕಟ್ಟಿದ್ದಕ್ಕೆ ನಮಗೆ ವಿರೋಧ ಇಲ್ಲ ಆದರೆ ದೇವಸ್ಥಾನದ ಪಕ್ಕದಲ್ಲಿ ಕಟ್ಟುತ್ತಿರುವುದು ನಮ್ಮ ವಿರೋಧ ಇದೆ ಎಂದು ಹೇಳಿದರು ಶ್ರೀಮತಿ ರಾಣಿ ಚಂದಾವರ ಮಾತನಾಡಿ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರಿಗೆ ಧನ್ಯವಾದಗಳು ಸಲ್ಲಿಸಿದರು ಮುಂದಿನ ಹೋರಾಟಕ್ಕೆ ನಾವೆಲ್ಲರೂ ಮತ್ತೆ ಒಂದಾಗಿ ಹೊರಡೋಣ ಎಂದು ಕರೆ ನೀಡಿದರು ಕ್ರಾಂತಿ ಸೇನಾ ಗದಗ್ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಕ್ರಾಂತಿ ಸೇನಾ ಮಹಿಳಾ ಅಧ್ಯಕ್ಷರು ಶ್ರೀಮತಿ ರಾಣಿ ಚಂದಾವರಿ ಉಪಾಧ್ಯಕ್ಷರು ಪದ್ಮಾ ಗುಜಲ್, ಗೌರವ ಕಾರ್ಯದರ್ಶಿ ಶ್ರೀಮತಿ ರೇಣುಕಾ ಕಬಾಡಿ, ಬಿಜೆಪಿ ಯುವ ಮುಖಂಡರು ಸುಧೀರ್ ಕಾಟಿಗರ್. ಕ್ರಾಂತಿ ಸೇನಾ ಉಪಾಧ್ಯಕ್ಷರು ಭೀಮಾ ಕಾಟಿಗರ್, ತಾಲೂಕ ಅಧ್ಯಕ್ಷ ಭರತ್ ಮಾರಿಯಪ್ಪನವರ್, ಗೌರವ ಕಾರ್ಯದರ್ಶಿ ಪ್ರವೀಣ್ ಹಬೀಬ್, ಗಣ ವ್ಯಾಪಾರಸ್ಥರು ಪರಶುರಾಮ್ ಖಟವಟೆ, ವಿನೋದ್ ಬಾಂಡಗೆ, ಆನಂದ್ ಸರೋದೆ, ಶ್ರೀಕಾಂತ್ ಬಾಕಳೆ, ಸತೀಶ್ ಪೂಜಾರಿ, ರಾಮು, ಪವನ್ ಪುರದ. ಶಿವು ಕಂಬಾರ್ ಹಾಗೂ ಇನ್ನೂ ಅನೇಕ ಮಹಿಳೆಯರು ಮುಖಂಡರು ಹಿರಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.