ಕರುನಾಡು ಘರ್ಜನೆ ಸುದ್ದಿ ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೂದಲ ಓವರ್ನಲ್ಲೇ ಆರ್ಸಿಬಿ ಆರಂಭಿಕ ಅಬ್ಬರ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ, ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಅದರಂತೆಯೇ ಮೊದಲ ಓವರ್ನಲ್ಲೇ 14 ರನ್ ಗಳಿಸಿತು. ಬಿಗ್ ಇನ್ನಿಂಗ್ಸ್ ಕಟ್ಟೋ ಲೆಕ್ಕಚಾರದಲ್ಲಿದ್ದ ಸೋಫಿ ಡಿವೈನ್, ಸ್ಮೃತಿ ಮಂದಾನ 10 ರನ್ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಬಂದ ದಿಶಾ ಕಸತ್ ಶೂನ್ಯಕ್ಕೆ ಔಟ್ ಆದರು. ಪರಿಣಾಮ 23 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಈ ವೇಳೆ ಪೆರ್ರಿ ಜೊತೆಯಾದ ರಿಚಾ ಘೋಷ್ 1 ಸಿಕ್ಸ್, 1 ಬೌಂಡರಿ ಗಳಿಸಿ ಉತ್ತಮ ಬ್ಯಾಟಿಂಗ್ ನಡೆಸ್ತಿದ್ರು. ಆದರೆ ಮ್ಯಾಥ್ಯು ಓವರ್ನಲ್ಲಿ ಬಾರಿ ಹೊಡತಕ್ಕೆ ಕೈಹಾಕಿದ ರಿಚಾ, 14 ರನ್ಗಳಿಗೆ ಆಟ ಮುಗಿಸಿದರು.ಎಲ್ಲಿಸ್ ಪೆರ್ರಿ ಏಕಾಂಗಿ ಹೋರಾಟಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳ್ತಿದ್ರು. ಏಕಾಂಗಿ ಹೋರಾಟ ನಡೆಸಿದ ಎಲ್ಲಿಸ್ ಪೆರ್ರಿ, ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ ತಂಡದ ಮೊತ್ತ ನೂರರ ಗಡಿ ದಾಟ್ತು. ಅರ್ಧಶತಕದ ಬಳಿಕ ಗೇರ್ ಬದಲಿಸಿದ ಪೆರ್ರಿ, 66 ರನ್ ಗಳಿಸಿದ್ದಾಗ ನಿರ್ಗಮಿಸಿದರು. ಕೊನೆಯಲ್ಲಿ ಜಾರ್ಜಿಯಾ 18 ಗಳ ನೆರವಿನಿಂದ ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ ಆರ್ಸಿಬಿ 135 ರನ್ ಪೇರಿಸಿತು.ಮುಂಬೈ ಆರಂಭಿಕರಿಂದ ಉತ್ತಮ ಅಡಿಪಾಯ136 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ್ದ ಮುಂಬೈ, ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿತ್ತು. 19 ರನ್ ಗಳಿಸಿ ಉತ್ತಮವಾಗಿ ಆಡ್ತಿದ್ದ ಹೇಲಿ ಮ್ಯಾಥ್ಯೂಸ್ಗೆ ಶ್ರೇಯಾಂಕಾ ಪೆವಿಲಿಯನ್ ಹಾದಿ ತೋರಿದ್ರೆ, 15 ರನ್ ಗಳಿಸಿದ್ದ ಭಾಟಿಯಾಗೆ ಎಲ್ಲಿಸ್ ಪೆರ್ರಿ ಕ್ಲೀನ್ ಬೋಲ್ಡ್ ಮಾಡಿದರು. ನಟಾಲಿ ಸೀವರ್ 23 ರನ್ಗಳಿಗೆ ಆಟ ಮುಗಿಸಿದರು.ಜವಾಬ್ದಾರಿಯುವ ಇನ್ನಿಂಗ್ಸ್ ಕಟ್ಟಿದ ಹರ್ಮನ್!4 ವಿಕೆಟ್ಗೆ ಜೊತೆಯಾದ ಹರ್ಮನ್‌ಪ್ರೀತ್ ಕೌರ್ ಹಾಗೂ ಅಮೆಲಿಯಾ ಕೆರ್, 52 ರನ್ ಗಳ ಜೊತೆಯಾಟ ಆಡಿದರು. 33 ರನ್ ಗಳಿಸಿದ್ದ ಹರ್ಮನ್, ಶ್ರೇಯಾಂಕ ಓವರ್ನಲ್ಲಿ ಬಿಗ್ ಶಾಟ್ಗೆ ಮುಂದಾಗಿ ಕೈ ಸುಟ್ಟುಕೊಂಡರು.
ಹರ್ಮನ್ ಔಟ್.. ಮ್ಯಾಚ್ಗೆ ಟ್ವಿಸ್ಟ್.. ಹೈಡ್ರಾಮಾ..!
ಹರ್ಮನ್ ಔಟಾಗಿದ್ದೇ ತಡ, ಸೋಲಿನ ಸುಳಿಯಲ್ಲಿದ್ದ ಆರ್ಸಿಬಿ ಕ್ಯಾಂಪ್ನಲ್ಲಿ ಗೆಲುವಿನ ಮಂದಹಾಸ ಬಂದಿದೆ. 2 ಓವರ್ಗೆ 16 ರನ್ ಗಳಿಸುವ ಚಾಲೆಂಜ್ ಮುಂಬೈ ಮುಂದಿತ್ತು. ಈ ವೇಳೆ 19ನೇ ಓವರ್ನಲ್ಲಿ ಕೇವಲ 2 ರನ್ ನೀಡಿದ ಸೋಫಿ ಮೊಲಿನೆಕ್ಸ್, ಆರ್ಸಿಬಿ ಗೆಲುವನ್ನು ಬಹುತೇಕ ಖಾತ್ರಿ ಮಾಡಿದರು. ಅಂತಿಮ ಓವರ್ ಎಸೆದ ಆಶಾ ಸೋಭಾನಾ, ಕೇವಲ 6 ರನ್ ನೀಡಿದರು. ಇದರೊಂದಿಗೆ 5 ರನ್ ಗಳ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ಗೆ ರಾಯಲ್ ಎಂಟ್ರಿ ನೀಡ್ತು.
ಒಟ್ಟಿನಲ್ಲಿ ಬಿಗ್ ಮ್ಯಾಚ್ನಲ್ಲಿ ಗೆದ್ದು ಬೀಗಿರುವ ಆರ್ಸಿಬಿ, ನಾಳೆ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಫೈನಲ್ನಲ್ಲೇ ವಿಜಯೋತ್ಸವ ಆಚರಿಸಲಿ. ಕಪ್ ಗೆಲ್ಲೋ ಕನಸು ನನಸಾಗಲಿ ಅನ್ನೋದೇ ಎಲ್ಲರ ಆಶಯ.