ಕರುನಾಡು ಘರ್ಜನೆ ಸುದ್ದಿ ಗದಗ: ರಾಜ ರಾಜಕಾರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟಿತರಾದ ಮೇಲೆ ಮಾಸಿಕ ಖಿನ್ನತೆಗೆ ಒಳಗಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಿಲ್ಲಿಸಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾ ಸಭಾ ಕೇಂದ್ರ ಕಚೇರಿಯಲ್ಲಿ ನಡೆದ ಖಂಡನಾ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ಎಸ್ ನಾಗರಕಟ್ಟಿ ಹೇಳಿದರು.
ಖಂಡನಾ ಸಭೆಯಲ್ಲಿ ಮಾತನಾಡಿದ ಮಹ್ಮದಶಫಿ ಎಸ್ ನಾಗರಕಟ್ಟಿ ಬಸನಗೌಡ ಪಾಟೀಲ್ ಯತ್ನಾಳರವರು ಬಿಜೆಪಿ ಪಕ್ಷದಿಂದ ಉಚ್ಚಾಟಿತರಾದ ಮೇಲೆ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳಿನಕಾರಿ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು. ಬಸನಗೌಡ ಪಾಟೀಲ್ ಯತ್ನಾಳ್ ತಾವು ಮಾಡಿದ ಕಾರ್ಯದ ಮೇಲೆ ಜನಪ್ರಿಯತೆಗಳಿಸಬೇಕು. ಬಸವನಗೌಡ ಪಾಟೀಲ್ ಯತ್ನಾಳರವರ ಸಾಧನೆ ಶೂನ್ಯ ಇರುವ ಕಾರಣ ಒಂದು ಸಮುದಾಯವನ್ನು ಟೀಕಿಸಿ ಪ್ರಚಾರ ಪಡೆದು ಬಿಜೆಪಿ ಪಕ್ಷವನ್ನು ಮಣಿಸುವ ಹುನ್ನಾರ್ ಅಡಗಿದೆ. ಮುಸ್ಲಿಂ ಸಮುದಾಯದಲ್ಲಿ ಪ್ರವಾದಿಗಳು ಅತ್ಯಂತ ಗೌರವ ಸ್ಥಾನದಲ್ಲಿ ಇರುತ್ತಾರೆ. ಅವರ ಅವಹೇಳನವನ್ನು ಸಮುದಾಯ ಸಹಿಸುವುದಿಲ್ಲ. ಸಮುದಾಯ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತದೆ. ಕರ್ನಾಟಕವು ಬಸವಾದಿ ಶರಣರು, ಸಂತರು ನಡೆದಾಡಿದ ಭೂಮಿಯಾಗಿದೆ ಇಲ್ಲಿ ಎಲ್ಲರೂ ಕೋಮ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಅದರಲ್ಲಿಯೂ ವಿಜಯಪುರ ಬಸವಣ್ಣವರ ತವರಾಗಿದೆ ಅಂತಹ ಜಿಲ್ಲೆಯಲ್ಲಿ ಬಸವನಗೌಡ ಪಾಟೀಲರಂತಹ ನೀಚ ಪ್ರವೃತ್ತಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯವನ್ನು ಯತ್ನಾಳ ಮಾಡುತ್ತಿದ್ದಾರೆ ಇದು ವಿಜಯಪುರ ಜಿಲ್ಲೆಗೂ ಮತ್ತು ನಾಡಿಗೆ ಮಾಡಿದಂತ ದ್ರೋಹವಾಗುತ್ತದೆ. ಸರಕಾರವು ಬಸನಗೌಡ ಯತ್ನಾಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಯತ್ನಾಳ್ ಇಪತ್ತುನಾಲ್ಕು ಗಂಟೆ ಅಲ್ಪಸಂಖ್ಯಾತ ಸಮುದಾಯ ವಿರುದ್ಧ ಮಾತನಾಡುವುದು ಕಾಯಕ ಮಾಡಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಅವರ ಅಸ್ತಿತ್ವ ಉಳಿದುಕೊಂಡಿದೆ. ವೈಯಕ್ತಿಕವಾಗಿ ಯಾವುದೇ ಯೋಗ್ಯತೆ ಇಲ್ಲದ ಯತ್ನಾಳರು ಮುಸ್ಲಿಂ ಸಮುದಾಯವನ್ನು ಟೀಕಿಸುವ ಮುಖಾಂತರ ಬೆಳೆಯಬೇಕೆಂಬ ಆಕಾಂಕ್ಷಿಯನ್ನು ಹೊಂದಿದ್ದಾರೆ. ಹೀಗಾಗಿ ಬಸವನಗೌಡ ಯತ್ನಾಳರು ಇನ್ಮುಂದೆ ಮುಸ್ಲಿಂ ಸಮುದಾಯದ ವಿರುದ್ಧ ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಅವರೊಬ್ಬ ಜನಪ್ರತಿನಿಧಿ ಎಂಬುವುದನ್ನು ಮರೆಯಬಾರದು ಆ ಸ್ಥಾನಕ್ಕಾದರೂ ಗೌರವ ನೀಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆ ಹಾಗೂ ಗದಗ ಜಿಲ್ಲೆ ಉಸ್ತುವಾರಿಗಳು ಮತ್ತು ಗದಗ ಜಿಲ್ಲಾಧ್ಯಕ್ಷರಾದ ಜಾಫರ ಡಾಲಾಯತ, ರಹೀಂಸಾಬ ದೊಡ್ಡಮನಿ, ಮುನ್ನಾ ಕಲ್ಮನಿ, ಇರ್ಫಾನ್ ನದಾಫ್, ಇಬ್ರಾಹಿಂ ಮುಲ್ಲಾ, ಅನಿಸ್ ಬಾಗವಾನ್, ಯಾಸಿನ್ ಮುಲ್ಲಾ, ಯೂನಿಸ್ ಮುಲ್ಲಾದರವೇಸ್, ಅಫ್ಜಲ್ ಮನಿಯಾರ, ಯಾಸಿನ್ ಖವಾಸ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.