ಕರುನಾಡು ಘರ್ಜನೆ ಸುದ್ದಿ ಗದಗ 19: ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯ ಸ್ಲಮ್ ಪ್ರದೇಶದ ಸಮಸ್ತ ಬಡ ಜನಾಂಗದವರಾದ ‘ನಾವೂಗಳು ಮನುಷ್ಯರಲ್ಲವೇ? ನಮಗೆ ಬದುಕಲು ಹಕ್ಕಿಲ್ಲವೇ? ನಮ್ಮ ಓಣಿಯನ್ನೇಕೆ ನಿಕೃಷ್ಟವಾಗಿ ಕಾಣುತ್ತಿದ್ದೀರಿ? ದಯವಿಟ್ಟು ನಮಗೂ ಮೂಲಸೌಲಭ್ಯ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಗದಗ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಪತ್ರಿಕೆ ಮೂಲಕ ಗದಗ ಬೆಟಗೇರಿ ನಗರಸಭೆಗೆ ಮತ್ತು ಗದಗ ಜಿಲ್ಲಾಡಳಿತಕ್ಕೆ ತಮ್ಮ ಓಣಿಯ ನಾಗರಿಕರ ಅಳಲು ತೋಡಿಕೊಂಡರು
ಅವರು ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ನೂರಾರು ಬದ ಕುಟುಂಬಗಳು ಇವೆ ಇಲ್ಲಿ ಒಯಸ್ಸಾದ ಹಿರಿಯರು ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳು 40 ವರ್ಷಗಳಿಂದ ರಸ್ತೆ ಸಂಪರ್ಕ. ಸೌಚಾಲಯ. ಒಳ ಚರಂಡಿ ಕಲಕ್ಷನ್ ಮತ್ತು ಮೂಲಸೌಲಭ್ಯ ಇಲ್ಲದೆ ಅಡವಿಯಲ್ಲಿ ಪ್ರಾಣಿಗಳಂತೆ ಈ ಪ್ರದೇಶದಲ್ಲಿ ವಾಸವಾಗಿ ಜೀವನ ನಡೆಸುತ್ತಿದ್ದಾರೆ
ಹೊಂಬಳ ರೋಡ ಮುಖ್ಯ ರಸ್ತೆಗೆ ಹೊಂದಿದ ಹೊಂಬಳನಾಕಾ ಜನತಾ ಕಾಲೋನಿಯ ಮೂರು ಲೈನಗಳು ಹಾಗೂ ಮಸೀದಿ ಹತ್ತಿರದ ಲೈನಗಳಿಗೆ ಯಾವುದೇ ರೀತಿಯ ಒಂದಕ್ಕೊಂದು ರಸ್ತೆ ಸಂಪರ್ಕ ಇಲ್ಲ ಮತ್ತು ವರ್ಷಗಟ್ಟಲೆ ಅರ್ದಮುರ್ದವಾಗಿ ನೆನಗುದಿಗೆ ಬಿದ್ದ ರಾಜಾ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ ಮತ್ತು ಮೂಲಸೌಲಭ್ಯವಂತೂ ಇಲ್ಲವೇ ಇಲ್ಲ ಈ ಕುರಿತು ಅನೇಕಬಾರಿ ನಗರಸಭೆಗೆ ಹಾಗೂ ಜಿಲ್ಲಾಡಳಿತಕ್ಕೂ ಮನವಿ ಮಾಡಿದರೂ ಪ್ರಯೋಜನ ಆಗದೆ ಅನಿವಾರ್ಯ ಜೀವನ ಸಾಗಿಸುವ ಮೂಲಕ ಈ ಬಾಗದಲ್ಲಿ ವಾಸಿಸುತ್ತಿದ್ದೆವೆ ಎಂದು ಕೃಷ್ಣಾ ಎಚ್ ಹಡಪದ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಓಣಿಯಲ್ಲಿ ಸಾಕಸ್ಟು ಸಮಸ್ಯಗಳು ಇವೆ ಅವುಗಳನ್ನು ನಗರಸಭೆ ಹಾಗೂ ಜಿಲ್ಲಾಡಳಿತದ ಯಾವುದೇ ಅಭಿವದ್ಧಿ ಕಾಮಗಾರಿ ಭಾಗ್ಯ ಇಲ್ಲದೆ ಅನುಭವಿಸುತ್ತಿದ್ದೆವೆ ಆದರೆ ಕೆಲ ಹಿರಿಯರಲ್ಲಿ ಗರ್ಬಿಣಿ ಮಹಿಳೆಯರಲ್ಲಿ ಚಿಕ್ಕ ಮಕ್ಕಳಲ್ಲಿ ಅಕಸ್ಮಿಕ ಗಂಭೀರ ಆರೋಗ್ಯ ಸಮಸ್ಸೆ ಬಂದರೆ ಅಂತವರ ನೆರವಿಗೆ ಒಂದು ತುರ್ತು ಅಭ್ಯೂಲೆನ್ಸ ಗಾಡಿ ಸಹ ಬಂದು ಹೊಗಲು ರಸ್ತೆನೇ ಇಲ್ಲ ಸದ್ಯ ಈರುವ 14 ಪೂಟ ರಸ್ತೆ ಮದ್ಯದಲ್ಲಿ ಗೀಡ ಮರಗಳು ಬೆಳೆದಿವೆ ಆದ್ದರಿಂದ 14 ರ ಬದಲಾಗಿ 6 ರಿಂದ 7 ಪೂಟ ರಸ್ತೆ ಉಳಿದಿದೆ
ರಾತ್ರಿ ತುರ್ತು ಸಂದರ್ಭದಲ್ಲಿ ನಮ್ಮ ಓಣಿಯ ಹಣೆಬರಹಕ್ಕೆ ಕನೀಷ್ಠಪಕ್ಷ ಒಂದು ಅಟೋದವರ ಸಹಕಾರವು ಸಿಗದೇ ಇರುವಸ್ಟು ರಸ್ತೆಗಳು ಸಂಪೂರ್ಣವಾಗಿ ಅತಿಕ್ರಮಣವಾಗಿದೆ
ಬೆಸಿಗೆ ಸಮಯದಲ್ಲಿ ನೀರಿನ ಸಮಸ್ಯ ಬಂದಾಗ ಟ್ಯಾಂಕರ ನೀರಿನ ಗಾಡಿ ಬರಲ್ಲ ಹಸೆ ಕಸ ಒಣಾ ಕಸಾ ಪಡೆಯುವ ನಗರಸಭೆಯ ಘಂಟಿಗಾಡಿ ಬರಲ್ಲ ಎಂದ ಅವರು ನಗರಸಭೆಯವರ ಅತಿ ದೊಡ್ಡ ತಪ್ಪು ಮಾಹಿತಿ ಮತ್ತು ತಪ್ಪು ಅನುಮತಿಯಿಂದ ಒಳಚರಂಡಿ ಕನಕ್ಷನ್ ಮಾಡದೆ ಸರಕಾರದ 15000 ರೂ ಅನುಧಾನಧಡಿ ಗಟಾರಮೇಲೆ ಮನೆಗೊಂದು ಸೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದರಿಂದ ಗಟಾರಗಳು ಮತ್ತು ಕಳಫೆ ಕಾಮಗಾರಿ ಮೂಲಕ ನಿರ್ಮಿಸಿದ ಸೌಚಾಲಯಗಳು ಸಂಪೂರ್ಣವಾಗಿ ತುಂಬಿ ಜಾಮಾಗಿದ್ದು ಚರಂಡಿಯ ವಲಸು ನೀರು ರಸ್ತೆ ಪಾಲಾಗಿ ಓಣಿತುಂಬ ಹೊಲಸು ವಾಸನೆ ತುಂಬಿಕೊಂಡಿದೆ
ಶಾಲಾ ಚಿಕ್ಕ ಮಕ್ಕಳ ಆದಿಯಾಗಿ ಹಿರಿಯ ನಾಗರಿಕರು ಸಾರ್ವಜನಿಕರು ಅದೇ ರಸ್ತೆಯಲ್ಲಿ ಹರಿಯುತ್ತಿರುವ ಹೊಲಸು ನೀರನ್ನು ತುಳಿದು ಸಂಚರಿಸುವಂತಾಗಿದಲ್ಲದೆ ಓಣಿಯ ಹೆಣ್ಣು ಮಕ್ಕಳು ಶೌಚಾಲಯ ಇಲ್ಲದೆ ರಾತ್ರಿಯೇ ಮುಳ್ಳಿನ ಕಂಟಿಯ ಬಯಲು ಬಹಿರ್ದೆಸೆಯಲ್ಲಿ ಶೌಚ ಕ್ರಿಯೆ ಮುಗಿಸಿಕೊಳ್ಳುವ ಅನಿವಾರ್ಯತೆ ಇದೆ
ಒಟ್ಟಾರೆ ರಸ್ತೆ ಸಮಸ್ಯಯಿಂದ ನಗರಸಭೆಯವರು ಪೌರ ಕಾರ್ಮಿಕರಿಂದ ಸರಿಯಾಗಿ ಸ್ವಚ್ಚ ಮಾಡಿಸಲು ಅವಕಾಶ ಇಲ್ಲದಂತಾಗಿದೆ ಮತ್ತು ಒಳ ಚರಂಡಿಗಳ ಕನಕ್ಷನ್ ಇಲ್ಲದೆ ಗಟಾರುಗಳಲ್ಲಿ ಚರಂಡಿ ವ್ಯವಸ್ಥೆಯಲ್ಲಿ ಮತ್ತು ಅಲ್ಲಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ನಿಲ್ಲುವ ಕೊಳಚೆ, ನೀರು ತ್ಯಾಜ್ಯದಿಂದ ಸೊಳ್ಳೆ ಕಡಿತ, ಗಬ್ಬು ವಾಸನೆ, ರೋಗ ರುಜಿನಗಳೊಂದಿಗೆ ನರಕಯಾತನೆ ಅನುಭವಿಸುತ್ತಿದ್ದೇವೆ
ಪ್ರತಿ ವರ್ಷ ಮಳೆ ಬಂದರೆ ಸಾಕು ಅರ್ದಮುರ್ದ ಕಾಮಗಾರಿಗೊಂಡು ಸದ್ಯ ಸ್ಥಗಿತಗೊಂಡ ರಾಜಾ ಕಾಲುವೆಯ ಅಕ್ಕಪಕ್ಕದಲ್ಲಿರುವ ನೂರಾರು ಮನೆಗಳಿಗೆ ಅದೆ ಕಾಲುವೆಯ ಚರಂಡಿ ವಲಸು ನೀರು ತುಂಬುತ್ತದೆ
ಕಳೇದ ವರ್ಷ ಸತತವಾಗಿ ಸುರಿದ ಮಳೆಯಿಂದ ಬಡವರ ಮನೆಯಲ್ಲಿ ರಾಜಾ ಕಾಲುವೆಯ ವಲಸು ನೀರು ತುಂಬಿ ನೂರಾರು ಮನೆಗಳು ಜಕಂಗೊಂಡಿವೆ ಮತ್ತು ಕೆಲ ಮನೆಗಳತ್ತೂ ನೆಲಸಮವಾಗಿವೆ ಹಾಗೂ ಜೀವನೊಪಾಯಕ್ಕೆ ತಂದಿಟ್ಟ ಅಕ್ಕಿ ಜೋಳ ದಿನಸಿ ಹಾಗೂ ಪಾತ್ರೆಗಳು ಬಟ್ಟೆಗಳು ಸಂಪೂರ್ಣವಾಗಿ ಗಟಾರಿನ ವಲಸು ನೀರಿನ ಪಾಲಾಗಿ ನೂರಾರು ಬಡ ಕುಟುಂಭದವರು ಕಂಗಾಲಾಗಿದ್ದಾರೆ ಎಂದು ನೊಂದು ಮಾತನಾಡಿ ಈ ವರ್ಷವೂ ಮಳೆ ಬರುತ್ತೆ ಮತ್ತೆ ಎನು ಕಾದಿದೆಯೋ ಅಂತ ಆತಂಕದಲ್ಲಿರುವ ನಮ್ಮ ಓಣಿಯ ಬಡ ಜನತೆಗೆ ಜನಪ್ರತಿನಿಧಿಗಳು ಪರಿಹಾರ ನೀಡಲು ಅಧೀಕಾರಿಗಳಿಗೆ ಸೂಚಿಸಿದರೂ ಸಹ ನಗರಸಭೆ ಹಾಗೂ ಜಿಲ್ಲಾಡಳಿತ ಅಧೀಕಾರಿಗಳು ನಾಲ್ಕು ವರ್ಷ ಕಳೆದರು ಸೌಜನ್ಯಕ್ಕಾದರು ನಮ್ಮ ಓಣಿಗೆ ಬೇಟಿ ನಿಡಿಲ್ಲ ಮತ್ತು ಪರಿಹಾರ ಸಹ ಕೊಟ್ಟಿಲ್ಲ ಮತ್ತೇ ಇತ್ತ ಕಣ್ಣೆತ್ತಿಯೂ ನೋಡಿಲ್ಲ ಎಂದು ಕೃಷ್ಣಾ ಎಚ್ ಹಡಪದ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ ಇಗಲಾದರೂ ಬಡವರ ಪರವಾಗಿ ಹಗಲಿರುಳು ಸೇವೆ ಮಾಡುತ್ತಿರುವ ನಗರಸಭೆಯ ಜನಪ್ರೀಯ ಹಿರಿಯ ಸದಶ್ಯರಾದ ಕೃಷ್ಣಾ ಪರಾಪೂರ ಸಾಹೇಬರ ಮುಂದಾಳತ್ವದಲ್ಲಿ ಜನಪ್ರೀಯ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರ ಮದ್ಯಸ್ತಿಕೆಯಲ್ಲಿ ಗದಗ ಬೆಟಗೇರಿ ನಗರಸಭೆ ಹಾಗೂ ಗದಗ ಜಿಲ್ಲಾಡಳಿತವು ಜಂಟಿಯಾಗಿ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಗೆ ಮತ್ತು ಈ ಭಾಗದಲ್ಲಿ ವಾಸಿಸುತ್ತಿರುವ ಅತ್ಯತ ಕಡುಬಡ ಜನತೆಗೆ ಯಲ್ಲರಂತೆ ಗೌರವ ಮತ್ತು ಹೆಮ್ಮೇಯಿಂದ ಬದುಕಲು ಹಾಗೂ ಸೂಗಮವಾಗಿ ಸಂಚರಿಸಲು ರಸ್ತೆ ಸಂಪರ್ಕ ಕಲ್ಪಿಸಿ 40 ವರ್ಷದ ವನವಾಸ ಅಂತ್ಯವಾಗಿಸಬೇಕು ಮತ್ತು ನಮ್ಮ ಓಣಿಯ ಸಾವಿರಾರು ಜನಸಂಖ್ಯೆ ಆದಾರದಂತೆ ಹೈಟಕ್ ಸೌಚಾಲಯ ಮತ್ತು ಮೂಲಸೌಲಭ್ಯ ಭಾಗ್ಯ ಕಲ್ಪಿಸಲು ಈ ಕೂಡಲೇ ಮುಂದಾಗಬೆಕೆಂದು ಅಭಿವೃದ್ಧಿಯ ಹರಿಕಾರರಾದ ನಗರಸಭೆಯ ಹಿರಿಯ ಸದಶ್ಯರು ದಯಾಳುಗಳಾದ ಸನ್ಮಾನ್ಯ ಕೃಷ್ಣಾ ಪರಾಪೂರ. ಜನಪ್ರೀಯ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಹಾಗೂ ನಗರಸಭೆ ಅಧೀಕಾರಿಗಳು ಹಾಗೂ ಗದಗ ಜಿಲ್ಲಾಧಿಕಾರಿಗಳಿಗೆ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯ ಸಮಸ್ತ ಮಹಾ ಜನತೆ ಪರವಾಗಿ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಕಾರ್ಯಾಧ್ಯಕ್ಷರಾದ ಪರಶುರಾಮ ಅಣ್ಣಿಗೇರಿ ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳು ಪ್ರಕಟಣೆ ಮೂಲಕ ಮನವಿ ಮಾಡಿ ಒತ್ತಾಯಿಸಿ ಆಗ್ರಹಿಸಿದ್ದಾರೆ
ಇಡೀ ದೇಶವೇ ಬಯಲು ಬಹಿರ್ದೆಸೆ ಮುಕ್ತ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿವೆ. ವಿಪರ್ಯಾಸವೆಂದರೆ,ನಮ್ಮ ವಾರ್ಡ ನಂ 16 ರ ಹೊಂಬಳನಕಾ ಜನತಾ ಕಾಲೋನಿಯಲ್ಲಿ ಇಂದಿಗೂ ಬಯಲು ಬಹಿರ್ದೆಸೆ ಮುಕ್ತ ಆಗದೆ ಜೀವಂತವಾಗಿದೆ ಬೆಸರ ತಂದಿದೆ
ದೇಶ ಮತ್ತು ರಾಜ್ಯ ಸರಕಾರಗಳು ಘೋಷಿಸಿದಂತೆ ನಮ್ಮ ಹೊಂಬಳನಕಾ ಜನತಾ ಕಾಲೋನಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಆಗಲಿ ಎಂದು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮೂಲಕ ಒತ್ತಾಯಿಸಿ ಆಗ್ರಹಹಿಸಿದ್ದಾರೆ ಕೃಷ್ಣಾ ಎಚ್ ಹಡಪದ ಅಧ್ಯಕ್ಷರು – ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘ ಗದಗ