ಕರುನಾಡು ಘರ್ಜನೆ ಸುದ್ದಿ ಗದಗ-೦೭ : ಡಾ. ಬಿ ಆರ್ ಅಂಬೇಡ್ಕರ ದಲಿತ ಗದಗ ಸಮಿತಿ ಜಿಲ್ಲಾ ಘಟಕದ ವತಿಯಿಂದ ೨೦೨೫-೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಗದಗ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿಯ ಜೊತೆಗೆ ಜಾತಿ ಪ್ರಮಾಣಪತ್ರ, ಅಂಕಪಟ್ಟಿ ಹಾಗೂ ಎರಡು ಪಾಸ್‌ಪೋರ್ಟ್ಳತೆಯ ಪೋಟೋಗಳನ್ನು ದಿ. ೧೮-೦೫-೨೦೨೫ ಒಳಗಾಗಿ ಸಂಘದ ಕಾರ್ಯಾಲಯ : ಗಾನಯೋಗಿ ಪಂಡಿತ ಪುಟ್ಟರಾಜ ಬಸ್ ನಿಲ್ದಾಣ, ಮಳಿಗೆ ನಂ. ೫, ಗದಗ ಇಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಪ್ರತಿಭಾ ನೀಡುವ ಪುರಸ್ಕಾರ ಕಾರ್ಯಕ್ರಮವನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು. ಮಾಹಿತಿಗಾಗಿ ಹೆಚ್ಚಿನ ಮೊ-೮೦೭೩೯೦೯೨೬೨, ೭೬೧೯೪೫೪೫೮೩, ೮೯೫೧೫೩೭೦೧೯, ೮೭೪೬೦೧೪೧೧೫ ಸಂಪರ್ಕಿಸುವAತೆ ಜಿಲ್ಲಾಧ್ಯಕ್ಷ ಶಿವಾನಂದ ತಮ್ಮಣ್ಣವರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.