ಕರುನಾಡು ಘರ್ಜನೆ ಸುದ್ದಿ ಗದಗ್ . ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಗದಗ್ ಜಿಲ್ಲೆಗೆ ಸುಮಾರು ಒಂದು ವರ್ಷದಲ್ಲಿ ಎರಡು ನೂರು ಟ್ಯಾಕ್ಸಿ ವಾಹನಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಸಚಿವ ಎಚ್ ಕೆ ಪಾಟೀಲರು ನೀಡಿ ಜಿಲ್ಲೆಯ ಹಲವಾರು ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ನೀಡಿ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದರು. 
ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಉದ್ಯೋಗ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಯುವಕರಿಗೆ ಮೋಸ ಮಾಡಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬಡವರಿಗೆ ನಿರುದ್ಯೋಗಿಗಳಿಗೆ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ಕಾನೂನು ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಅವರು ಜಿಲ್ಲೆಯಲ್ಲಿ ಹಲವಾರು ಯುವಕರಿಗೆ ಉದ್ಯೋಗ ನೀಡಲು ಉದ್ಯೋಗ ಮೇಳ ಹಾಗೂ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಹಾಗೂ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ನೀಡಿದ್ದಾರೆ. ಜಿಲ್ಲೆಯ ಯುವಕರ ಪರವಾಗಿ ಸಚಿವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಯುವ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ರವರು ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದರು.