ಕರುನಾಡು ಘರ್ಜನೆ ಸುದ್ದಿ ಬೆಂಗಳೂರು: ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರು ಆಟೋ ಡ್ರೈವರ್, ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ. 
ಬೆಳ್ಳಂದೂರು ವೃತ್ತದಲ್ಲಿ ಆಟೋ ಚಾಲಕ ಹಾಗೂ ಹೊರ ರಾಜ್ಯದ ಮಹಿಳೆ ಪನ್ಪೂರಿ ಮಿಶ್ರಾ (28) ನಡುವೆ ಗಲಾಟೆ ನಡೆದಿತ್ತು. ಸದ್ಯ ಈಗ ಪನ್ಪೂರಿ ಮಿಶ್ರಾ, ಆಕೆಯ ಗಂಡ ಇಬ್ಬರೂ ಸೇರಿ ಆಟೋ ಚಾಲಕ ಹಾಗೂ ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ. ಕೈ ಮುಗಿದು ಇನ್ನೊಮ್ಮೆ ಈ ರೀತಿ ಆಗಲ್ಲ ಎಂದು ಗಂಡ ಕೇಳಿಕೊಂಡಿದ್ದಾನೆ. ಇನ್ನು ದರ್ಪ ತೋರಿದ ಮಹಿಳೆ ಮಾತನಾಡಿ, ಕನ್ನಡ, ಕನ್ನಡಿಗರನ್ನ ನಾವು ದ್ವೇಷ ಮಾಡಲ್ಲ. ಐ ಲವ್ ಬೆಂಗಳೂರು. ಇಲ್ಲಿನ ಸಂಸ್ಕೃತಿ ಇಷ್ಟ ಎಂದು ಮಹಿಳೆ ಹೇಳಿದ್ದಾರೆ.ನಾನು ಗರ್ಭಿಣಿ ಆಗಿದ್ದು ಬೈಕ್ನಲ್ಲಿ ಹೋಗುವಾಗ ಪಕ್ಕದಲ್ಲಿ ಸಡನ್ ಆಗಿ ಆಟೋ ಬಂದಾಗ ಭಯ ಆಯಿತು. ಆ ಗಾಬರಿಯಲ್ಲಿ ಚಾಲಕನಿಗೆ ಚಪ್ಪಲಿಯಿಂದ ಹೊಡೆದುಬಿಟ್ಟೆ ಅಂತ ಕ್ಷಮೆ ಕೇಳುವಾಗ ಹೇಳಿದ್ದಾಳೆ. ಸದ್ಯ ಸ್ನೇಹ ಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘದ ರಾಜ್ಯಾಧ್ಯಕ್ಷರಾದ ಸಂತೋಷ ಅವರ ಸಮ್ಮುಖದಲ್ಲಿ ಆಟೋ ರಿಕ್ಷಾ ಚಾಲಕನಿಗೆ ಆಟೋ ಡ್ರೈವರ್ಗೆ ಚಪ್ಪಲಿಯಿಂದ ಹೊಡೆದ ಗಂಡ ಹೆಂಡತಿ ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಗಂಡ ಹೆಂಡತಿ ಕೇಳಿದರು.
ಘಟನೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಠಾಣೆಯ ಪೊಲೀಸರು ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ವಿವರಣೆ ಪಡೆದಿದ್ದರು. ಈಗ ಅಂತಿಮವಾಗಿ ಹಲ್ಲೆಗೊಳಗಾಗಿದ್ದ ಚಾಲಕನ ಕಾಲು ಹಿಡಿದು ಮಹಿಳೆ ಕ್ಷಮೆ ಕೇಳಿದ್ದಾರೆ. ಘಟನೆ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.