ಕರುನಾಡು ಘರ್ಜನೆ ಸುದ್ದಿ ಗದಗ ದಿ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಉರ್ದು ಮಾಧ್ಯಮದ ಶಿರಸಿಯ ವಿದ್ಯಾರ್ಥಿನಿ ಶಗುಪ್ತಾ ಅಂಜುಮ್ ಇವರಿಗೆ ಶಿರಸಿ ನಗರಕ್ಕೆ ತೆರಳಿ ಅವರ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ನಾಗರಕಟ್ಟಿ ಶಗುಪ್ತಾ ಅಂಜುಮ್ ಅವರ ಸಾಧನೆ ಅವರ ಮನೆಯಲ್ಲಿರುವ ಪ್ರಶಸ್ತಿಗಳು ಹೂವಿನ ಹಾರಗಳನ್ನು ನೋಡಿದರೆ ಗೊತ್ತಾಗುತ್ತದೆ. ಎಲ್ಲ ಧರ್ಮದ ಜನರು ಶಗುಪ್ತಾ ಅಂಜುಮ್ ಅವರಿಗೆ ಅವರ ಈ ಸಾಧನೆಗಾಗಿ ಸನ್ಮಾನಿಸಿ ಗೌರವಿಸಿದ್ದಾರೆ. ಇದರಿಂದ ನಮಗೆ ಗೊತ್ತಾಗುತ್ತದೆ ನಮ್ಮ ಭಾರತೀಯ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದು.ಇವರಿಗೆ ದೊರಕಿರುವ ಪ್ರೀತಿಯ ಪ್ರಶಸ್ತಿಗಳು ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಶಗುಪ್ತಾ ಅಂಜುಮ್ ಮೂಲತಃ ಬಿಹಾರ ರಾಜ್ಯದಲ್ಲಿ 8ನೇ ತರಗತಿವರೆಗೂ ಉರ್ದು ಮಾಧ್ಯಮದಲ್ಲಿ ಕಲಿತಿರುವ ಶಗುಪ್ತಾ ಅಂಜುಮ್ ಒಂಬತ್ತನೇ ತರಗತಿಯಲ್ಲಿ ಶಿರಸಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ದಾಖಲೆಯನ್ನು ಪಡೆದು ಕೇವಲ ಎರಡೇ ವರ್ಷಗಳಲ್ಲಿ ಕನ್ನಡದ ಒಂದು ಪದ ಸಹ ಗೊತ್ತಿರದ ಶಗುಪ್ತಾ ಅಂಜುಮ್ ಕನ್ನಡ ಭಾಷೆಯನ್ನು ಓದುವುದನ್ನು ಬರೆಯುವುದನ್ನು ಕಲಿತು, ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿರುವುದು ನಂಬಲು ಅಸಾಧ್ಯವಾದ ವಿಷಯವಾಗಿದೆ. ಇದಕ್ಕೆ ಅವರ ಪ್ರಯತ್ನವನ್ನು ನಾವು ಮೆಚ್ಚಲೇಬೇಕು. ಅದರ ಜೊತೆಗೆ ಈ ವಿದ್ಯಾರ್ಥಿನಿಗೆ ಸರಿಯಾದ ಮಾರ್ಗದರ್ಶನ ನೀಡಿ ಎರಡು ವರ್ಷಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಿದ ಗುರುಗಳಿಗೆ ಈ ಸಾಧನೆಯ ಶ್ರೇಯಸ್ಸು ಸಲ್ಲುತ್ತದೆ. ಗುರು ಇದ್ದರೆ ಏನಾದರೂ ಸಾಧಿಸಬಹುದೆಂಬದಕ್ಕೆ ಶಿರಸಿಯ ಉರ್ದು ಪ್ರೌಢಶಾಲೆಯ ಶಿಕ್ಷಕರು ಉದಾಹರಣೆಯಾಗಿದ್ದಾರೆ. ಭವಿಷ್ಯದಲ್ಲಿ ಶಗುಪ್ತಾ ಅಂಜುಮ್ ತಾವು ಬಯಸಿದಂತೆ ಎಂಬಿಬಿಎಸ್ ಪದವಿಯನ್ನು ಪಡೆದು ಐಎಎಸ್ ಆಗುವ ಕನಸು ಕಾಣುತ್ತಿದ್ದೀರಿ ನಿಮ್ಮ ಈ ಕನಸು ನನಸಾಗಲಿ ಹಾಗೂ ನೀವು ಉನ್ನತ ಸ್ಥಾನಮಾನವನ್ನು ಪಡೆಯಬೇಕೆಂದು ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರಸಿಯ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಗುರುಗಳಾದ ಅನಂತ ಕೊರವರ ಶಗುಪ್ತಾ ಅಂಜುಮ್ ಕೇವಲ ಎರಡು ವರ್ಷಗಳಲ್ಲಿ ನಮ್ಮ ಶಾಲೆಗೆ ದಾಖಲೆಯನ್ನು ಪಡೆದು ಅಗಾಧವಾದ ಸಾಧನೆ ಮಾಡಿದ್ದಾರೆ, ಆಕೆಯಲ್ಲಿ ಒಂದು ಅಭೂತಪೂರ್ವ ಶಕ್ತಿ ಅಡಗಿದೆ. ಅದನ್ನು ಅರಿತಿದ್ದ ನಾವು ಆಕೆಗೆ ವಿಶೇಷ ತರಬೇತಿ ಹಾಗು ಮಾರ್ಗದರ್ಶನ ನೀಡಿದರ ಪರಿಣಾಮವಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಶಿರಸಿಯ ವಿದ್ಯಾರ್ಥಿನಿ ರಾಜಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಇದು ಕೇವಲ ನಮ್ಮ ಶಾಲೆಗೆ ಅಲ್ಲ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಮತ್ತು ನಮ್ಮ ಶಿರಸಿ ನಗರಕ್ಕೆ ಕ್ರೀತಿ ತಂದುಕೊಟ್ಟಿದ್ದಾಳೆ. ವಿಶೇಷವಾಗಿ ನಾನು ಇಲ್ಲಿ ಹೇಳಬೇಕಾಗಿದ್ದು ಉರ್ದು ಮಾಧ್ಯಮದ ವಿದ್ಯಾರ್ಥಿನಿ ಹಾಗೂ ಎಂಟನೇ ತರಗತಿವರೆಗೂ ಕನ್ನಡದ ಒಂದು ಅಕ್ಷರ ಸಹ ಗೊತ್ತಿರದ, ಈ ವಿದ್ಯಾರ್ಥಿನಿ ಕೇವಲ ಎರಡು ವರ್ಷಗಳಲ್ಲಿ ಕನ್ನಡ ಭಾಷೆ ಕಲೆತು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುವುದಂದರೆ ಅದು ಸುಲಭದ ಮಾತಲ್ಲ. ಆದರೆ ಈ ಸಾಧನೆಯನ್ನು ಶಗುಪ್ತಾ ಅಂಜುಮ್ ಮಾಡಿ ತೋರಿಸಿದ್ದಾಳೆಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಮಾತನಾಡಿದ ಸಲೀಂ ನರಗುಂದ ಇದೊಂದು ವಿಶೇಷ ಸಾಧನೆ ಕೇವಲ ಎರಡು ವರ್ಷಗಳಲ್ಲಿ ಕನ್ನಡದ ಕಲಿತು ನೂರಕ್ಕೆ ನೂರು ಅಂಕ ಪಡೆದಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆ ವಿಷಯವಾಗಿದೆ ಎಂದರು. ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಯಾಸಿನ್ ಮುಲ್ಲಾ ಶಗುಪ್ತಾ ಅಂಜುಮ್ ಕನ್ನಡದಲ್ಲಿ ವಿಷಯದಲ್ಲಿ ಮಾಡಿದ ಸಾಧನೆಗಾಗಿ ಐದು ಸಾವಿರ ರೂಪಾಯಿಗಳ ಕಾಣಿಕೆಯನ್ನು ನೀಡಿ ಗೌರವಿಸಿದರು. ಗದಗ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿಗಳಾದ ಎಂ ಡಿ ಜಾಫರ್ ಡಾಲಾಯತ್ ಈ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸ್ವಾಗತಿಸಿದರು ಹಾಗೂ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಾಸಭಾ ಸದಸ್ಯರಗಳಾದ ಮುನ್ನಾ ಕಲ್ಮನಿ, ಇಲಿಯಾಸ ಶಿರಹಟ್ಟಿ, ಹನೀಫ್ ಇರಕಲ್ಲ, ಯೂನಸ ಖಾಜಿ, ಇಸಾಕ್ ಇರಕಲ್ಲ, ಮುಜಂಮಿಲ್ ಬಳ್ಳಾರಿ, ಎಸ್ ಎಸ್ ಖಾದ್ರಿ , ನೂರ್ ಅಹ್ಮದ್ ಕಟ್ಟಿಮನಿ, ಇಮ್ತಿಯಾಜ್ ಜಮಾದಾರ, ಇಬ್ರಾಹಿಂ ಅತ್ತಾರ, ಹಾಗೂ ವಿದ್ಯಾರ್ಥಿನಿಯ ಪಾಲಕರು ಮತ್ತು ಸರಕಾರಿ ಉರ್ದು ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.