ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲಾ ಕಾಂಗ್ರೆಸ್ಸಿನ ವರಿಷ್ಠರು ಈ ಸಾರಿ ಗದಗ ಜಿಲ್ಲಾ ವಕ್ಫ್ ಅಧ್ಯಕ್ಷ ಸ್ಥಾನವನ್ನು ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೆ ನೀಡಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ತಳಹದಿ ಮೇಲೆ ನಿಂತಿದೆ ಎಂದು ಗದಗ ಜಿಲ್ಲೆಯ ಜನತೆಗೆ ಮನವರಿಕೆ ಮಾಡಿಕೊಡಬೇಕೆಂದು ಕಾಂಗ್ರೆಸ್ಸಿನ ಮುಖಂಡರಾದ ಎಂ ಡಿ ಜಾಫರ್ ಡಾಲಾಯತ ವರಿಷ್ಠರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆ ಇಲ್ಲ. ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ಕೇವಲ ಪಕ್ಷ ನಿಷ್ಠೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುತ್ತಾರೆ.ನಿಜ ಹೇಳಬೇಕೆಂದರೆ ವರಿಷ್ಠರ ಆಜ್ಞೆಗಳನ್ನು ಪಾಲಿಸುವರು ಸಾಮಾನ್ಯ ಕಾರ್ಯಕರ್ತರು. ಸಾಮಾನ್ಯ ಕಾರ್ಯಕರ್ತರು ತಾವಾಗಲೇ ಯಾವುದೇ ಸ್ಥಾನಮಾನವನ್ನು ಬಯಸುವುದಿಲ್ಲ ಅವರನ್ನು ಗುರುತಿಸಿ ಅವರಿಗೂ ಸ್ಥಾನವನ್ನು ನೀಡಿ ಹೆಚ್ಚಿನ ಸೇವೆ ಮಾಡಲು ಜಿಲ್ಲೆಯ ನಾಯಕರು ಅನುಕೂಲ ಮಾಡಿಕೊಡುಬೇಕು.ಇತ್ತೀಚಿನ ದಿನಗಳಲ್ಲಿ ಕೇವಲ ಕೆಲವೇ ಜನರು ಅಧಿಕಾರ ಮತ್ತು ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾರೆ. ಒಂದಕ್ಕಿಂತ ಹೆಚ್ಚು ಸ್ಥಾನಮಾನಗಳು ಇವರ ಕೈಗಳಲ್ಲಿವೆ. ಇದು ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದಲ್ಲ ಉಳಿದ ಸಮುದಾಯದಲ್ಲೂ ಇದೇ ಪರಿಸ್ಥಿತಿ ಇದೆ. ಸಾಮಾನ್ಯ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತರಾಗಿ ಉಳಿದಿದ್ದಾರೆ. ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದೆ ಕೇವಲ ಜೀತದ ಆಳದಂತೆ ಇವರನ್ನು ಇಡಲಾಗಿದೆ. ಚುನಾವಣೆ ಸಂದರ್ಭಗಳಲ್ಲಿ, ಬೀದಿಗಳಲ್ಲಿ ಹೋರಾಟ ಮಾಡುವ ಸಂದರ್ಭಗಳಲ್ಲಿ ಇವರನ್ನು ಉಪಯೋಗಿಸಿಕೊಳ್ಳಲಾಗುತ್ತದೆ.ಹೊರತು ಯಾವುದೇ ಸ್ಥಾನಮಾನ ನೀಡಿರುವುದಿಲ್ಲ. ಪಕ್ಷವು ಸೋತಂತ ಸಂದರ್ಭದಲ್ಲಿ ಜೊತೆಗೆ ಇರದ ಕಾರ್ಯಕರ್ತರು ಇಂದು ಅಧಿಕಾರ ಅಲಂಕರಿಸುತ್ತಿದ್ದಾರೆ.ಸೋತ ಸಂದರ್ಭದಲ್ಲಿ ಪಕ್ಷವನ್ನು ಬಿಡದೆ ಕಷ್ಟಪಟ್ಟು ಪಕ್ಷವನ್ನು ಗೆಲ್ಲಿಸಿದ ಕಾರ್ಯಕರ್ತರು ಮನೆಯಲ್ಲಿ ಕುಳಿತಿದ್ದಾರೆ. ಸನ್ಮಾನ್ಯ ರಾಹುಲ್ ಗಾಂಧಿ ಹೇಳುವಂತೆ ಸರ್ವಾಧಿಕಾರಿಗಳಿಗೆ ಅವಕಾಶವಿಲ್ಲ ಮತ್ತು ಅವಕಾಶವಾದಿ ಕಾರ್ಯಕರ್ತರನ್ನು ಹೊರಗಡೆ ಹಾಕಬೇಕು. ಪಕ್ಷದ ಕೆಟ್ಟ ಸಮಯದಲ್ಲಿ ಯಾರು ಪಕ್ಷ ಜೊತೆ ನಿಲ್ಲುತ್ತಾರೆ ಅಂತವರನ್ನು ಬೆಳೆಸಬೇಕು. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ತಳಹದಿ ಮೇಲೆ ನಿಂತಿದೆ ಅದನ್ನು ಕಾಪಾಡುವುದು ವರಿಷ್ಠರ ಮಹತ್ವರ ಜವಾಬ್ದಾರಿಯಾಗುತ್ತದೆ ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.