ಕರುನಾಡು ಘರ್ಜನೆ ಸುದ್ದಿ ಗದಗ 21: ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ. 24 ರಲ್ಲಿಯ ಮಕಾನಗಲ್ಲಿ, ಉಡಚಮ್ಮ ಓಣಿ, ಜೀರ ಓಣಿ, ನಾಲ್ವಾಡ ಗಲ್ಲಿ, ಗಾಳಪ್ಪನವರ ಓಣಿ ಸಾರ್ವಜನಿಕರಿಗೆ ಅಂಗನವಾಡಿ ಕೇಂದ್ರ ಸಂಖ್ಯೆ 196, 189 ಇಲ್ಲಿ ಬಡಾವಣೆಯ ನಾಗರಿಕರ ಹಿತದೃಷ್ಟಿಯಿಂದ ಪ್ರತಿಷ್ಠಿತ ಕೆ. ಎಚ್. ಪಾಟೀಲ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ 2. 6. m 3 ໖. 18-06-2025 ಮತ್ತು 19-06-2025 ರಂದು ಉಚಿತ ನೇತ್ರ ತಪಾಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಅಧ್ಯಕ್ಷರಾದ ಬಸವರಾಜ ಮೈಲಾರಪ್ಪ ಬೆಳಧಡಿರವರು ಉದ್ಘಾಟಿಸಿ ಮಾತನಾಡಿದ ಅವರು ಸದರಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಬೆಳಗ್ಗೆ 9 ಘಂಟೆಗೆ ಪ್ರಾರಂಭವಾದ ತಪಾಸಣಾ ಶಿಬಿರದಲ್ಲಿ ಸುಮಾರು 212 ಜನರು ತಮ್ಮ ದೃಷ್ಟಿ ತಪಾಸಣೆಯನ್ನು ಮಾಡಿಕೊಂಡರು. ಅದರಲ್ಲಿ ವಿಶೇಷವಾಗಿ ಗದಗ ತಾಲೂಕಿನಲ್ಲಿ ಕಣ್ಣಿನ ಪೂರೆ ತಪಾಸಣಾ ಕ್ರಿಯಾಯೋಜನೆ ಎಂಬ ವಿನೂತನ ಅಭಿಯಾನದಲ್ಲಿ ಒಟ್ಟು 36 ಜನರಿಗೆ ಕಣ್ಣಿನ ಪೋರೆ ಬಂದಿರುವುದು ಕಂಡು ಬಂದಿದ್ದು, ಒಟ್ಟು ಜನರರಿಗೆ ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆಗೆ ಕೆ. ಎಚ್. ಪಾಟೀಲ ಆಸ್ಪತ್ರೆಗೆ ರೇಫರ ಮಾಡಲಾಯಿತು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಎಸ್. ಟಿ. ಘಟಕದ ಅಧ್ಯಕ್ಷರಾದ ಶಿವಪ್ಪ ತಿಮ್ಮಪ್ಪ ಬಳ್ಳಾರಿ 3.ವಾರ್ಡಿನ ಹಿರಿಯರಾದ ದಾವಲಸಾಬ ತಹಶೀಲ್ದಾರ, ಶರ್ಫಿ ಮುಳಗುಂದ, ಇಬ್ರಾಹಿಂ ಕಾಟಾಪುರ, ಬಸವರಾಜ ಡಾವಣಗೇರಿ, ನಾಗರಾಜ ಕುರಗೋಡ, ದಾದಾಪೀರ ಮುಂಡರಗಿ. ಆನಂದ ಮಾನ್ಯ, ಮೆಹಬೂಬ ಅಣ್ಣಿಗೇರಿ, ಕುಮಾರ ಕಡದಳ್ಳಿಮಠ, ಮೆಹಬೂಬ ಢಾಲಾಯತ, ಅಂಗನವಾಡಿ ಶಿಕ್ಷಕರಾದ ಚನ್ನಮ್ಮ ಬಬಜಿ, ಸಾವಿತ್ರಿ ದೊಡ್ಡಣ್ಣವರ, ಅನುಶ್ರೀ ಬುಳ್ಳಾ, ಸಾವಿತ್ರಿ ಹೂಗಾರ, ಕಾರ್ಯಕರ್ತರಾದ ವನಜಾಕ್ಷಿ ಹೂಗಾರ, ಸಿಸ್ಟರಾದ ಆರ್. ಆರ್. ಕಲಾಲ, ವೈದ್ಯ ಸಹಾಯಕರಾದ ಅಂಬಿಗರ ಸಿಸ್ಟರ್, ಆಶಾ ಕಾರ್ಯಕರ್ತೆಯರಾದ ಅನು ಕಾಟವಾ, ಸವಿತಾ ಬಳಿಗೇರ, ಮಹಮ್ಮದ ರಫೀಕ ಕರಕಟ್ಟಿ, ಉಪಸ್ಥಿತರಿದ್ದರು.