Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

 ಗದಗ ಜಿಲ್ಲಾ ಯುವ ಕಾಂಗ್ರೇಸ್ ನೂತನ ಅಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರಿಗೆ ಸನ್ಮಾನ ಹಾಗೂ ಸವಿತಾ ಕ್ಷೌರಿಕ ಸಮಾಜದ ಕ್ರಿಕೇಟ್ ಟೂರ್ನಾಮಿಂಟ ಅಪರೂಪದ ಜನ ಸೇವಕ ಮನಗೆದ್ದ ಯುವನಾಯಕ : ಕೃಷ್ಣಗೌಡ್ರ ಪಾಟೀಲ

ಕರುನಾಡು ಘರ್ಜನೆ ಸುದ್ದಿ ಗದಗ 11: ಸುಮಾರು ವರ್ಷಗಳ ರಾಜಕೀಯ ಅನುಭವ, ಚುರುಕಿನ ನಡೆ, ಪಾದರಸದಂತಹ ಓಡಾಟದೊಂದಿಗೆ ಜನರೊಂದಿಗೆ ಸದಾ ಬೆರೆಯುತ್ತಾ ಜನರ ನೋವು ನಲಿವುಗಳಿಗೆ ಸ್ಪಂದಿಸುವ ವಿಶಿಷ್ಟ ಗುಣಗಳಿಂದ ಆಕರ್ಷಕ ವ್ಯಕ್ತಿತ್ವದೊಂದಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಮಾನವೀಯ ಸಹಾಯ…

ಕರುನಾಡು ಘರ್ಜನೆ ಸುದ್ದಿ ಗದಗ 11: ಸುಮಾರು ವರ್ಷಗಳ ರಾಜಕೀಯ ಅನುಭವ, ಚುರುಕಿನ ನಡೆ, ಪಾದರಸದಂತಹ ಓಡಾಟದೊಂದಿಗೆ ಜನರೊಂದಿಗೆ ಸದಾ ಬೆರೆಯುತ್ತಾ ಜನರ ನೋವು ನಲಿವುಗಳಿಗೆ ಸ್ಪಂದಿಸುವ ವಿಶಿಷ್ಟ ಗುಣಗಳಿಂದ ಆಕರ್ಷಕ ವ್ಯಕ್ತಿತ್ವದೊಂದಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಮಾನವೀಯ ಸಹಾಯ ಸಹಕಾರ ಸೇವೆ ಮಾಡುತ್ತಾ. ಜನಮನ್ನಣೆ ಪಡೆಯುತ್ತಿರುವ, ಕೃಷ್ಣಗೌಡ್ರ ಪಾಟೀಲರು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು

ಪತ್ರಿಕಾ ಲೇಖನದಲ್ಲಿ ಹೆಳಿಕೆ ನೀಡಿರುವ ಅವರು ಗದಗ ಜಿಲ್ಲಾ ಯುವ ಕಾಂಗ್ರೇಸ್ ಗೆ ಚುನಾಯಿತ ಕ್ರಿಯಾಶೀಲ ಜಿಲ್ಲಾಧ್ಯಕ್ಷರಾಗಿ ಅಶಕ್ತರ,ಬಡವರ ಸಹಾಯಕ್ಕೆ ಧಾವಿಸುತ್ತಿರುವುದು ಗದಗ ಮತಕ್ಷೇತ್ರ ಹಾಗೂ ಗದಗ ಜಿಲ್ಲೆಯ ಜನರ ಗಮನ ಸೆಳೆದಿದೆ. ಮುಖ್ಯವಾಗಿ ತೊಂದರೆಗೊಳಗಾದ ಹಿಂದುಳಿದ ಶೋಷೀತ ಹಾಗೂ ಬಡ ಸವಿತಾ ಸಮಾಜದ ಕ್ಷೌರಿಕ ವೃತ್ತಿ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಸಮಸ್ತ ಬಡ ಸಮುಧಾಯಗಳ ಕೈವೃತ್ತಿ ಕಾರ್ಮಿಕರುಗಳ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೃಷ್ಣಗೌಡ್ರ ಪಾಟೀಲರು ತಮ್ಮ ತಂದೆಯವರಾದ ಎಚ್ ಕೆ ಪಾಟೀಲಜಿ ಅವರು ಹಾಗೂ ಅವರ ದೊಡ್ಡಪ್ಪನವರಾದ ಡಿ. ಆರ್ ಪಾಟೀಲಜಿ ಅವರಂತೆ ಜಾತಿ ಬೇಧಗಳಿಲ್ಲದೆ ಎಲ್ಲ ಜಾತಿ ಜನಾಂಗವನ್ನು ಪ್ರೀತಿಸುತ್ತಾ ಮತ್ತು ಎಲ್ಲ ಸಮುದಾಯವನ್ನು ಗೌರವಿಸುತ್ತಾ ಮತ್ತು ಸಮಸ್ತ ಸಮುದಾಯಗಳ ಏಳಿಗೆಗಾಗಿ ಸಲ್ಲಿಸುವ ಸಮರ್ಥ ಯುವ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಜಾತ್ಯಾತೀತ ನಾಯಕರಾಗಿ ಅಪರೂಪದ ಜನ ಸೇವಕ ಮನಗೆದ್ದ ಯುವನಾಯಕ ಅಂದರೆ ಇವರೇ ನಮ್ಮೇಲ್ಲರ ನೆಚ್ಚಿನ ಯುವ ನಾಯಕರಾದ ಕೃಷ್ಣಗೌಡ್ರ ಎಚ್ ಪಾಟೀಲರು ಎಂದು ಹೇಳಿದರೆ ತಪ್ಪಾಗಲಾರದು ಎಂದ ಅವರು ರಾಜಕಾರಣದಲ್ಲಿ ಪ್ರತಿಕ್ಷಣ ಜಾತಿ ವಿಷಬೀಜ ಬಿತ್ತಿ ಅಭಿವೃದ್ಧಿಯನ್ನು ಹಾಳು ಮಾಡುವವರ ಸಂಖ್ಯೆ ಇಂದು ಬೇರ ಸಮೇತ ಕಿತ್ತಾಕಬೆಕಾಗಿದೆ ಎಂದರಲ್ಲದೆ ಕೃಷ್ಣಗೌಡ್ರ ಎಚ್. ಪಾಟೀಲ ರಂತಹ ಪ್ರಾಮಾಣಿಕ ಕೈಗಳ ಅವಶ್ಯಕತೆ ನಮ್ಮೇಲ್ಲರಿಗೆ ಬಹಳ ಅವಶ್ಯಕವಾಗಿ ಇದೆ ಎಂದು ಕೃಷ್ಣಾ ಎಚ್ ಹಡಪದ ಅವರು ಮುಂದುವರಿದು ಮಾತನಾಡುತ್ತಾ ದಿ.12-8-2025 ಮಂಗಳವಾರ ರಂದು ಸ್ಥಳ ವಿ.ಡಿ.ಎಸ್.ಟಿ.ಸಿ.ಮೈದಾನದಲ್ಲಿ ಬೆಳಿಗ್ಗೆ 11 ಘಂಟೆಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಕಮಿಟಿಗೆ ನೂತನವಾಗಿ ಚುನಾಯಿತ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಕೃಷ್ಣಗೌಡ್ರ ಪಾಟೀಲರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ತನ್ನಿಮಿತ್ಯವಾಗಿ ಅವಳಿ ನಗರದ ಸವಿತಾ. ಮರಾಠ. ಹಡಪದ. ಕ್ಷೌರಿಕ ಬಾಂಧವರ ಒಂದು ದಿನದ ಕ್ರಿಕೇಟ್ ಟೂರ್ನಾಮಿಂಟ ಹಮ್ಮಿಕೊಳ್ಳಲಾಗಿದೆ ಈ ಒಂದು ಮಹತ್ವದ ಸಮಾರಂಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಗೌರವ ಸನ್ಮಾನ ಸ್ವೀಕರಿಸುತ್ತಿರುವ ಯುವಕರ ಆಶಾಕಿರಣ ಹಾಗೂ ಯುವಕರ ಕಣ್ಮಣಿಗಳು ಪ್ರಾಮಾಣಿಕರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರಿಗೆ ಮುಂದಿನ ಶಾಸಕರಾಗಿ ಸಚಿವರಾಗಿ ಸರ್ವ ಜನಾಂಗದ ಸಮಗ್ರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಭಾಗ್ಯ ಮತ್ತು ಅವಕಾಶಗಳು ಅವರಿಗೆ ಸಿಗಲಿ ಎಂದು ಸಮಸ್ತ ಸವಿತಾ ಸಮಾಜದ ಸಕಲ ಬಂಧುಗಳ ಶುಭ ಹಾರೈಕೆಗಳನ್ನು ಗದಗ ಜಿಲ್ಲಾ ಸವಿತಾ ಸಮಾಜ ಪರವಾಗಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಹಿರಿಯರಾದ ವೆಂಕಟೇಶ ರಾಂಪೂರ. ಹನಮಂತಪ್ಪ ರಾಂಪೂರ. ರಾಜು ಗೌೌಡರ. ಬಾಲರಾಜ ಕೊಟೇಕಲ್ಲ. ಪರಶುರಾಮ ಕೊಟೇಕಲ್ಲ. ಸಂತಸೇನಾ ಮಹಾರಾಜ ನಾಭೀಕ (ಸವಿತಾ) ಮರಾಠ ಕ್ಷೌರಿಕ ಸಮಾಜದ ಜಿಲ್ಲಾಧ್ಯಕ್ಷರಾದ ರಾಜು ಮಾನೆ ನಗರ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಪ್ರಮುಖ ನಾಯಕರಾದ ರಮೇಶ ರಾಂಪೂರ ಜಂಮ್ಮಣ್ಣ ಕಡಮೂರ ಹೇಮಂತ ವಡ್ಡೆಪಲ್ಲೆ ಪಾಂಡು ಕಾಳೆ ದೀಪಕ ಮಾನೆ ದತ್ತು ಮಾನೆ ಮಂಜು ಮಾನೆ ಹಾಗೂ ಜಿಲ್ಲಾ ಪದಾಧಿಕಾರಿಗಳು ಸಲ್ಲಿಸಿದ್ದಾರೆ.

Editor

Leave a comment