ಕರುನಾಡು ಘರ್ಜನೆ ಸುದ್ದಿ ಗದಗ ೧೫: ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದ ವತಿಯಿಂದ ೭೯ನೇ ಸ್ವಾತಂತ್ರೊö್ಯÃತ್ಸವ ಧ್ವಜಾರೋಹಣವನ್ನು ಗ್ರಾಮದ ಸ್ಪಂದನಾ ಸಂಸ್ಥೆಯ ಅಧ್ಯಕ್ಷರಾದ ಚನ್ನವೀರಪ್ಪ ಬ. ಪಲ್ಲೇದ ಇವರು ನೆರವೇರಿಸಿಕೊಟ್ಟರು ನಂತರ ರಾಷ್ಟçಗೀತೆ ಜರುಗಿತು.
ವೇದಿಕೆಯ ಮೇಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರ ಸಿಬ್ಬಂದಿ ಹಾಗೂ ಶಾಲೆಯ ಮಕ್ಕಳು ಪಥಸಂಚಲನದ ಜೊತೆಗೆ ಭಾರತ ಮಾತಕೀ ಜೈ, ಜೈ,ಜವಾನ್, ಜೈಕಿಶಾನ, ವಂದೇ ಮಾತರಂ ಎಂಬ ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಜನಮನಸೆಳೆದರು. ನಂತರ ವೇದಿಕೆಯ ಮೇಲೆ ಉಪಸ್ಥಿತರಿದ್ದ ಬಸವ ಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿ, ರಾಷ್ಟಾçಭಿಮಾನಿಗಳಾದ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಇಂದಿನ ಮಕ್ಕಳು ದೇಶಕ್ಕಾಗಿ, ಭಾವನಾತ್ಮಕವಾಗಿ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ನಮ್ಮ ನಾಡಿನ ಯೋಧರು, ವೈದ್ಯರು, ರೈತರು ದೇಶದ ಬೆನ್ನೆಲುಬಾಗಿ ತಮ್ಮ ಪ್ರಾಣವನ್ನು ಪಣಕಿಟ್ಟು ಕಾರ್ಯನಿರ್ವಹಿಸುತ್ತಾರೆ. ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳಾದ ವೀರರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಸರ್ಧಾರ ವಲ್ಲಭಾಯಿ ಪಟೇಲ್, ಬಾಲಗಂಗಾಧರ ತಿಲಕ್, ಸುಭಾಸಚಂದ್ರ ಭೋಸ್, ಮಹಾತ್ಮ ಗಾಂಧೀಜಿಯವರು, ಲಾಲಬಹದ್ದೂರ ಶಾಸ್ತಿçÃ, ಡಾ. ಬಿ.ಆರ್. ಅಂಬೇಡ್ಕರ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ಸ್ಮರಿಸುತ್ತಾ, ಇಂದಿನ ಪ್ರಜೆಗಳಾದ ನಾವು ಅವರು ಹಾಕಿಕೊಟ್ಟ ಮಾರ್ಗ ಹಾಗೂ ಹೋರಾಟದ ಮಾರ್ಗಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ದೇಶದ ನಾಡು, ನುಡಿ, ಅಭಿವೃದ್ಧಿಗಾಗಿ ಒಳ್ಳೆಯ ಪ್ರಜೆಗಳಾಗಿ ಹೋರಾಡೋಣವೆಂದು ಕರೆಯಿತ್ತರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳು, ಶಾಲೆಯ ಮುಖ್ಯೋಪಾಧ್ಯಾಪಕರು, ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು ಎಂದು ಬಸವ ಕೇಂದ್ರದ ಸಂಘಟನಾ ಕಾರ್ಯದರ್ಶಿ ಶಿವಾನಂದ ವಾಲಿಕರ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.