ಕರುನಾಡು ಘರ್ಜನೆ ಸುದ್ದಿ ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ‘ವೋಟ್ ಚೋರಿ’ ಆರೋಪದ ಅಡಿಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅವ್ಯವಾರ ಕೇಳಿ ಬಂದಿರುವುದರಿಂದ ಚುನಾವಣಾ ಆಯೋಗ ತಕ್ಷಣ ಈ ಲೋಕಸಭಾ ಕ್ಷೇತ್ರದಲ್ಲಿ 2024 ದಲ್ಲಿ ನಡೆದಿದ್ದ ಚುನಾವಣೆಯನ್ನು ಅಸಿಂಧು ಅಂತ ಘೋಷಿಸಿ ಮರುಚುನಾವಣೆ ನಡೆಸಬೇಕೆಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಅಡಿಯಲ್ಲಿ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಅವ್ಯವಾರ ನಡೆದಿದೆ ಎಂದು ಆರೋಪ ಕೇಳಿ ಬರುತ್ತಿದೆ, ಲಕ್ಷಕ್ಕೂ ಅಧಿಕ ನಕಲಿ ಮತದಾರರ ಪಟ್ಟಿಯನ್ನು ಸೃಷ್ಟಿ ಮಾಡಲಾಗಿದ್ದು, ಕೆಲವೊಂದು ಕಡೆ ಬೇರೆ ರಾಜ್ಯದ ಮತದಾರರು ಚುನಾವಣಾ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಮತದಾನ ಮಾಡಿರುವಂತದ್ದು ಕೂಡ ಆರೋಪವಿದೆ . ಅದೇ ರೀತಿ ಹಲವಾರು ಮನೆಗಳ ವಿಳಾಸವು ಕೂಡ ತಪ್ಪಾಗಿದ್ದು ಅದರ ಮನೆ ಸಂಖ್ಯೆ ಶೂನ್ಯ ಎಂದು ನಮೋದಿಸಲಾಗಿದೆ, ಒಂದೇ ಮನೆಯ ಸಂಖ್ಯೆಯಲ್ಲಿ ಹಲವಾರು ಮತದಾರರನ್ನು ನೋಂದಾಯಿಸಲಾಗಿದೆ ಹೀಗೆ ಸಾಕಷ್ಟು ಆರೋಪಗಳು ಈಗ ಸಾರ್ವಜನಿಕವಾಗಿದೆ.ಈ ಘಟನೆ ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿದೆ, ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಇದರ ಸಮಗ್ರ ತನಿಖೆ ನಡೆಸಬೇಕು ಮತ್ತು ತನಿಖೆ ಆಗುವವರೆಗೂ ಈ ಈ ಕ್ಷೇತ್ರಕ್ಕೆ ನಡೆದಿರುವಂತಹ 2024ರ ಚುನಾವಣೆಯನ್ನು ಅಸಿಂದು ಎಂದು ಘೋಷಿಸಬೇಕು ಇದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಸಂಭಂದ ಚುನಾವಣಾ ಆಯೋಗಕ್ಕೆ ಅವರು ಒಂದು ಮನವಿ ಪತ್ರವೂ ಕೂಡ ಕಳುಹಿಸಿದ್ದಾರೆ.