ಕರುನಾಡು ಘರ್ಜನೆ ಸುದ್ದಿ : ದಿನಾಂಕ:01.08.2024 ರಿಂದ 31.07.2025 ರವರೆಗೆ ಗದಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ, ಸ್ವತ್ತಿನ ಅಪರಾಧ,ಮೋಸ ವ ವಂಚನೆ ಹಾಗೂ ಇತರೆ ಒಟ್ಟು 61 ಪ್ರಕರಣಗಳಲ್ಲಿ 95 ಆರೋಪಿತರನ್ನು ದಸ್ತಗೀರಿ ಮಾಡುವ ಮೂಲಕ 1,22,63,535/- ರೂ ಮೊತ್ತದ ಬಂಗಾರ ವ ಬೆಳ್ಳಿ ಆಭರಣಗಳು ,ನಗದು ಹಣ, ಇತರೆ ವಸ್ತುಗಳು ಹಾಗೂ ಕಳ್ಳತನವಾದ 37 ವಾಹನಗಳು ಮತ್ತು 277 ಮೊಬೈಲ್ಗಳನ್ನು ವಶಪಡಿಸಿಕೊಂಡು ಫಿರ್ಯಾದಿದಾರರಿಗೆ ಮರಳಿಸಲಾಗಿರುತ್ತದೆ.
ಈ ಕರ್ತವ್ಯದಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿರವರ ಕಾರ್ಯಕ್ಷಮತೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ