ಕರುನಾಡು ಘರ್ಜನೆ ಸುದ್ದಿ ಗದಗ ನಾಳೆ ಬೆಟಗೇರಿ ಬಡಾವಣ್ಣೆ ವಿದ್ಯುತ್ ವ್ಯತ್ಯಯ 110 ಕೆಟ್ಟ ಸಂಭಾಪೂರ ರಸ್ತೆ ಗದಗ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ
ಸೆ.17.ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸದರಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ವಿವೇಕಾನಂದ ನಗರ , ಹೊಸ ಬಸ್ ನಿಲ್ದಾಣ , ಪಂಚಾಕ್ಷರಿ ನಗರ , ರಾಜೀವಗಾಂಧಿ ನಗರ , ಬುರುಬುರೆ ಪ್ಲಾಟ್ , ಆನಂದಾಶ್ರಮ ರಸ್ತೆ , ಜೆ.ಟಿ ಕಾಲೇಜ್ ರಸ್ತೆ , ಹಾತಲಗೇರಿ ಎನ್.ಜೆ.ವೈ ಹಾಗೂ ಇ.ಐ.ಪಿ ಫೀಡರ್ಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು , ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕಾಗಿ ಹೆಸ್ಕಾಂ ಪ್ರಕಟಣೆ ತಿಳಿಸಿದೆ.