ಕರುನಾಡು ಘರ್ಜನೆ ಸುದ್ದಿ ಗದಗ: ರಸ್ತೆ ದಾಟುವಾಗ ಪೊಲೀಸ್ ಜೀಪ್ ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮವಾಗಿ ಕತ್ತೆ ಕಿರುಬ ಸಾವನ್ನಪ್ಪಿದ್ದಲ್ಲದೆ, ಪೊಲೀಸ್ ಜೀಪ್ ನಲ್ಲಿದ್ದ ಬೆಟಗೇರಿ ಠಾಣಾ ASI ಗಂಭೀರವಾಗಿ ಗಾಯಗೊಂಡಿದರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎನ್ನಲಾಗಿದೆ. ಘಟನೆ ಗದಗ ತಾಲೂಕಿನ ಸೊರಟೂರು ಗ್ರಾಮದ ಬಳಿ ನಡೆದಿರುತ್ತದೆ
ಬೆಟಗೇರಿ ಠಾಣೆ ASI ಕಾಶಿಮ್ ಸಾಬ್ ಹರಿವಾಣ ಗೆ ಗಂಭೀರವಾಗಿ ಗಾಯ ಗಳಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಇಂದು ಬೆಳಗ್ಗೆನ ಜಾವಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಜೀಪ್ ನಲ್ಲಿದ್ದ ವೈರ್ ಲೆಸ್ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ಗೌಡ, ಚಾಲಕ ಓಂ ನಾಥ್ ಗೆ ಗದಗ ಜಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತು.
ಲಕ್ಷ್ಮೇಶ್ವರ ಗಣಪತಿ ವಿಸರ್ಜನೆ ಬಂದೋಬಸ್ತ್ ಮುಗಿಸಿಕೊಂಡು ಬೆಳಗಿನ ಜಾವ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆ ಬರುತ್ತಿರುವಾಗ ಸೊರಟೂರು ಬಳಿ ಈ ಘಟನೆ ನಡೆದಿದೆ