ಕರುನಾಡು ಘರ್ಜನೆ ಸುದ್ದಿ ಗದಗ 25: ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧೀಕಾರಿಗಳು ಮತ್ತು ಗದಗ ಪಿ.ಎಸ್.ಐ
ಮಾರುತಿ ಜೋಗದಂಡ್ಕರ ಅವರು ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ರೂಡಿಸಿಕೊಂಡು ಬಂದಿದ್ದಾರೆ ಇವರು ಒಬ್ಬ ಸಮರ್ಥ ಪೊಲೀಸ್ ಅಧಿಕಾರಿ ಎಂದರೆ ತಪ್ಪಲಾಗಲಾರದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅಭೀಮಾನದಿಂದ ಮಾತನಾಡಿದರು
ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಗದಗ ಶಹರ ರಾಜೀವಗಾಂದಿ ನಗರ ಬಡಾವಣೆಯ ಪೋಲಿಸ್ ಸಬ್‌ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ರವರಿಗೆ ವಿ.ಡಿ.ಎಸ್.ಟಿ.ಸಿ. ಮೈಧಾನದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಸಮಾಜದ ಗೌರವ ಸನ್ಮಾನ ಸಲ್ಲಿಸಿ ಮಾತನಾಡಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಸಬ್‌ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ಇವರ ವೃತ್ತಿಕಾರ್ಯ ಪ್ರತಿಯೊಬ್ಬ ಪೊಲೀಸರಿಗೆ ಹಿಡಿದ ಕೈಗನ್ನಡಿಯಂತಿದೆ ಎಂದರಲ್ಲದೆ ಇಗಾಗಲೇ ಗದಗನಲ್ಲಿ ಪಿ.ಎಸ್.ಐ ಆಗಿ, ಅತ್ಯಂತ ಪ್ರಾಮಾಣಿಕತೆ, ದಕ್ಷತೆಯಿಂದ ಸೇವೆ ಸಲ್ಲಿಸುತ್ತಾ ಸ್ಥಳಿಯ ಸವಿತಾ ಸಮಾಜ ಸೇರಿದಂತೆ ಗದಗ ಜಿಲ್ಲೆಯ ಸಮಸ್ತ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಮತ್ತು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಕ್ಕೆ ಪೋಲಿಸ್ ಸಬ್‌ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ರವರಿಗೆ ಪನಸ್ಪೂರ್ವಕವಾಗಿ ಅಭೀನಂದನಾರ್ಹ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ತಿಳಿಸಿದರು
ಪಿ.ಎಸ್.ಐ. ಮಾರುತಿ ಜೋಗದಂಡ್ಕರ ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಲ್ಲಿಸಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ನಗರದ ಮಹಾಜನತೆಯ ಹಿತಕಾಯುವಂತಹ ಸೇವೆ ನಮ್ಮ ಆದ್ಯ ಕರ್ತವ್ಯ ಮತ್ತು ಪ್ರತಿಯೊಬ್ಬರಲ್ಲೂ ಪರೋಪಕಾರ, ತ್ಯಾಗ ಮನೋಭಾವನೆ. ಸೌಹಾರ್ದತೆಯಿಂದ ಬದುಕುವ ಗುಣಗಳ ಅಗತ್ಯವಿದೆ. ಅದೇ ರೀತಿ ಸವಿತಾ ಸಮಾಜ ಆರ್ಥಿಕವಾಗಿ, ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಪ್ರಗತಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಪೋಲಿಸ್ ಸಬ್‌ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ಅವರು ಹೇಳಿದರು
ಈ ಸದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ. ನಾಸೀರ ಮುಲ್ಲಾ. ಪರಶುರಾಮ (ಬಜ್ಜಣ್ಣ) ರಾಂಪೂರ. ಖಜಾಂಚಿ ಅರೂಣ ರಾಂಪೂರ. ಬಾಲರಾಜ ಕೊಟೇಕಲ್ಲ. ದೀಪಕ ಮಾನೆ.ಪಾಂಡು ಕಾಳೆ. ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ. ಸುಧೀರ ಮಾನೆ. ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ. ಉಪಾಧ್ಯಕ್ಷರಾದ ಜಂಮ್ಮಣ್ಣ ಕಡಮೂರ. ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ರಮೇಶ ರಾಂಪೂರ ಜಿಲ್ಲಾ ಫ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ. ಹಿರಿಯ ಪದಾಧಿಕಾರಿಗಳಾದ ತುಕಾರಾಮ ಮಾನೆ. ವಿಶಾಲ ಮಾನೆ. ಧಿನೇಶ ಕ್ಷೀರಸಾಗರ. ಹೇಮಂತ ವಡ್ಡೆಪಲ್ಲಿ. ಶ್ರೀನಿವಾಸ ಕೊಟೇಕಲ್ಲ. ಸುರೇಶ ಬುದೂರ. ಪರಶುರಾಮ ದಾವಣಗೇರಿ. ಯುವನಾಯಕರಾದ ವಿಕ್ರಮ ಕ್ಷೀರಸಾಗರ. ಗಣೇಶ ಕಡಮೂರ. ಪ್ರಕಾಶ ಬುದೂರ. ಸುನೀಲ ರಾಯಚೂರ. ಕೃಷ್ಣಾ ಬುದೂರ. ವೆಂಕಟೇಶ ಕೊಟೇಕಲ್ಲ. ವಿಜಯ ಬುದೂರ. ತುಕಾರಾಮ ವಡ್ಡೆಪಲ್ಲೆ. ರಾಹೂಲ ಕೊಟೊಕಲ್ಲ. ಆದರ್ಶ ಮಾನೆ. ರಾಹೂಲ ಮೋಮ್ಮಗ. ವಿನಾಯಕ ರಾಯಚೂರ. ಹಾಗೂ ಸಮಾಜದ ನೂರಾರು ಬಾಂಧವರು ಉಪಸ್ತಿತರಿದ್ದರು. ಕೃಷ್ಣಾ ಎಚ್ ಹಡಪದ