ನೀತಿಯಲ್ಲಿ ಮಾರಕವಾದ ನಿಯಮಗಳನ್ನು ಕೈಬಿಡುವಂತೆ
ಕೋರಿ ಬುಧವಾರ ಮುಖ್ಯಮಂತ್ರಿ ಯವರಿಗೆ ಸಂಘದಿಂದ ಮನವಿ ಸಲ್ಲಿಕೆ.
ಕರುನಾಡು ಘರ್ಜುನೆ ಸುದ್ದಿ ಗದಗ: ರಾಜ್ಯ ಸರ್ಕಾರದ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014 ರ ಪ್ರಕಾರ ಇಲ್ಲಿಯವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ರಾಜ್ಯ ಮಟ್ಟದ , ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ 700ಕ್ಕೂ ಹೆಚ್ಚಿನ ಪತ್ರಿಕೆಗಳು ಸೇರ್ಪಡೆಯಾಗಿರುತ್ತವೆ.
*ರಾಜ್ಯ ಸರ್ಕಾರವು ಸುಮಾರು 11 ವರ್ಷ ಕಳೆದ ನಂತರ ” ಕರ್ನಾಟಕ ಜಾಹೀರಾತು ನೀತಿ-2026″ ನ್ನು ಜಾರಿಗೆ ತರಲು ದಿನಾಂಕ : 12-03-2026ರಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
*ಕರ್ನಾಟಕ ಜಾಹೀರಾತು ನೀತಿ-2026 ಇನ್ನೂ ಸರಕಾರದಿಂದ ಅದೇಶವಾಗಿ ಜಾರಿಗೆ ಬಂದಿಲ್ಲ. 2026-27ನೇ ಸಾಲಿನಿಂದ ಅನ್ವಯವಾಗುವಂತೆ ಈ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.
*ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಜಾಹೀರಾತು ನೀತಿ-2026 ಹರಿದಾಡುತ್ತಿದೆ. ಇದನ್ನು ಅವಲೋಕಿಸಿದಾಗ ಇದರಲ್ಲಿ ಹಾಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಕಡಿವಾಣ ಹಾಕುವಂತಹ ನಿಯಮಗಳನ್ನು ಅಳವಡಿಸಿರುವುದು ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ತಿಳಿಸಿದರು.
* ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸರಕಾರದ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014ರ ನಿಯಮಗಳನ್ವಯ ಇಲ್ಲಿಯವರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಮಾಧ್ಯಮ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಸರ್ಕಾರದ ಜನಪ್ರಿಯ ಯೋಜನೆಗಳು, ಜನಪರ ಕಾರ್ಯಕ್ರಮಗಳ ಕುರಿತು ಜಾಹೀರಾತುಗಳ ಮೂಲಕ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿದ್ದು, ಪತ್ರಿಕೆಗಳ ಬೆಳವಣಿಗೆಗೆ ರಾಜ್ಯ ಸರ್ಕಾರ ಕಾರಣವಾಗಿದೆ ಎಂದು ಹೇಳಿದರು.
ಈಗ ಕರ್ನಾಟಕ ಜಾಹೀರಾತು ನೀತಿ-2026ನ್ನು 2026-27ನೇ ಸಾಲಿನಿಂದ ಜಾರಿಗೆ ತರಲು ಹೊರಟಿರುವುದು ಸ್ವಾಗತವಾಗಿದ್ದರೂ ಸಹ ಈ ನೀತಿಯಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಮಾರಕವಾಗುವಂತಹ ಅಂಶಗಳನ್ನು ಸೇರ್ಪಡೆ ಮಾಡಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮುಚ್ಚುವ ಪರಿಸ್ಥಿತಿಗೆ ಸರಕಾರ ತಂದೊಡ್ಡುವಂತಹ ಕೃತ್ಯಕ್ಕೆ ಕೈ ಹಾಕಿರುವುದನ್ನು ಅವರು ಖಂಡಿಸಿದರು.
*ಸರ್ಕಾರದ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014ರ ನಿಯಮಗಳನ್ವಯ ಇಲ್ಲಿಯವರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಮಾಧ್ಯಮ ಪಟ್ಟಿಗೆ ಸೇರ್ಪಡೆ ಮಾಡಲಾಗಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಅವನತಿಗೆ
ಕಾರಣವಾದ ನಿಯಮಗಳನ್ನು ಕರ್ನಾಟಕ ಜಾಹೀರಾತು ನೀತಿ-2026ರಲ್ಲಿ ಅಳವಡಿಸಿರುವುದು ಕಾನೂನಾತ್ಮಕವಾಗಿ ಸರಿಯಾದ ಕ್ರಮವಲ್ಲ, ಇದನ್ನು ನಮ್ಮ ಸಂಘವು ಬಲವಾಗಿ ವಿರೋಧ ಮಾಡುತ್ತದೆ ಎಂದರು.
*ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿನ ಮಾರಕವಾದ ನಿಯಮಗಳ ವಿರೋಧಿಸಿ ಮಾರ್ಚ್ 25 ರ ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಯವರಿಗೆ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ, ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿನ ಪತ್ರಿಕೆಗಳಿಗೆ ಮಾರಕವಾಗಿರುವ ನಿಯಮಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಮನವಿ ಮಾಡಿಕೊಂಡರು.
ಕರ್ನಾಟಕ ಜಾಹೀರಾತು ನೀತಿ-2026ರಲ್ಲಿನ ಸ್ವಯಂಚಾಲಿತ ಮುಕ್ತಾಯದ ಷರತ್ತನ್ನು (Sunset Clause) ಕೈಬಿಡಬೇಕು.
*ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರತಿ 2 ವರ್ಷಕ್ಕೊಮ್ಮೆ ಗೊತ್ತುಪಡಿಸಿರುವ ದಾಖಲೆಗಳನ್ನು ಜಿಲ್ಲಾ ಮಾಧ್ಯಮ ಸಮಿತಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಸಲ್ಲಿಸಬೇಕು. ಜಿಲ್ಲಾ ಮಾಧ್ಯಮ ಸಮಿತಿಯು ಎಲ್ಲಾ ದಾಖಲೆಗಳನ್ನು ನವೆಂಬರ್/ಡಿಸೆಂಬರ್ ಮಾಹೆಯಲ್ಲಿ ಪರಿಶೀಲಿಸಿ ನೀಡುವ ವರದಿಯನ್ವಯ ಪತ್ರಿಕೆಗಳ ದರ ನವೀಕರಣ, ಪ್ರಸಾರ ಸಂಖ್ಯೆ ನಿಗಧೀಕರಣ ಮತ್ತು ಮಾಧ್ಯಮ ಪಟ್ಟಿಯಲ್ಲಿ ಮುಂದುವರೆಸುವುದು ಎನ್ನುವ ನಿಯಮವನ್ನು ಕೈಬಿಡಬೇಕು.
*ಸರಕಾರದ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014ರ ನಿಯಮಗಳನ್ವಯ ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಹಾಲಿ ಜಾಹೀರಾತು ದರಕ್ಕೆ ಶೇ.12ರಷ್ಟು ಜಾಹೀರಾತು ದರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಹೆಚ್ಚಳ ಮಾಡುವುದಕ್ಕೆ ಅಧಿಕಾರ ನೀಡಬೇಕು.
* ಕಳೆದ 5 ವರ್ಷಗಳಿಂದ ಪತ್ರಿಕೆಗಳಿಗೆ ಶೇ.12+12ರಂತೆ ಶೇ.24ರಷ್ಟು ಜಾಹೀರಾತು ದರ ಹೆಚ್ಚಳ ಮಾಡಿರುವುದಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ತಕ್ಷಣ ದರ ಹೆಚ್ಚಳ ಮಾಡಲು ಕ್ರಮವಹಿಸಬೇಕು.
* ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಮಾಡಿರುವ ಪ್ರಾದೇಶಿಕ ಪತ್ರಿಕೆಗಳನ್ನು ಪಂಗಡ ‘ಎ’ ಮತ್ತು ಪಂಗಡ ‘ಬಿ’ ಎಂದು ವಿಂಗಡಿಸಬಾರದು.
ಪತ್ರಿಕೆಯು ಸ್ವಂತ ಕಛೇರಿ ಮತ್ತು ಸ್ವಂತ ಮುದ್ರಣ ಯಂತ್ರವನ್ನು ಹೊಂದಿರಬೇಕು. ಕನಿಷ್ಠ 10 ಮತ್ತು 15 ಜನ ಖಾಯಂ ನೌಕರರನ್ನು ಹೊಂದಿರಬೇಕು ಮತ್ತು ಪತ್ರಿಕೆಯ ಖಾಯಂ ನೌಕರರಿಗೆ ಪಿ.ಎಫ್. (ಭವಿಷ್ಯ ನಿಧಿ) ವಂತಿಕೆ ಪಾವತಿಸಿರುವ ವಿವರ ಕಡ್ಡಾಯ. ಪತ್ರಿಕೆಯ ಖಾಯಂ ನೌಕರರಿಗೆ ಇ.ಎಸ್.ಐ. (ನೌಕರರ ರಾಜ್ಯ ವಿಮಾ) ವಂತಿಕೆ ಪಾವತಿಸಿರುವ ವಿವರ ಕಡ್ಡಾಯ ಎನ್ನುವುದನ್ನು ಕೈಬಿಡಬೇಕು. ಜಾಹೀರಾತುಗಳನ್ನು’ ಪ್ರಾದೇಶಿಕ ಪತ್ರಿಕೆಗಳಿಗೆ ಯಥಾ ರೀತಿ ಬಿಡುಗಡೆ ಮಾಡುವಂತೆ ನಿಯಮ ಅಳವಡಿಸಬೇಕು.
* ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಮಾಲೀಕತ್ವ ಬದಲಾವಣೆಯಾದಲ್ಲಿ ಅಂತಹ ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿಯೇ
ಮುಂದುವರೆಸಬೇಕು.
* ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಗೊತ್ತುಪಡಿಸಿರುವ ದಾಖಲೆಗಳನ್ನು ಜಿಲ್ಲಾ ಮಾಧ್ಯಮ ಸಮಿತಿಗೆ ಸೆಪ್ಟೆಂಬರ್/ಅಕ್ಟೋಬರ್ ಮಾಹೆಯಲ್ಲಿ ಸಲ್ಲಿಸುವುದು. ಜಿಲ್ಲಾ ಮಾಧ್ಯಮ ಸಮಿತಿಯು ಎಲ್ಲಾ ದಾಖಲೆಗಳನ್ನು ನವಂಬರ್/ಡಿಸೆಂಬರ್ ಮಾಹೆಯಲ್ಲಿ ಪರಿಶೀಲಿಸಿ ನೀಡುವ ವರದಿಯನ್ವಯ ಪ್ರತಿ 2 ವರ್ಷಕ್ಕೊಮ್ಮೆ ಪತ್ರಿಕೆಗಳ ದರ ಪರಿಷ್ಕರಿಸುವುದು ಎನ್ನುವ ಈ ನಿಯಮವು ಪತ್ರಿಕೆಗಳ ದರ ಹೆಚ್ಚಳಕ್ಕೆ ಮಾರಕವಾಗಿದೆ. ಈ ನಿಯಮವನ್ನು ಕೈಬಿಡಬೇಕು. ಜಿಲ್ಲಾ ಮಾಧ್ಯಮ ಸಮಿತಿ ವರದಿ ಇಲ್ಲದೆಯೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಪ್ರತಿ 2 ವರ್ಷಕ್ಕೊಮ್ಮೆ ಶೇ.12 ರಷ್ಟು ದರ ಹೆಚ್ಚಳ ಮಾಡುವುದಕ್ಕೆ ಸರಕಾರ ಅಧಿಕಾರ ನೀಡಬೇಕು.
* ಅಂಗೀಕೃತ ಜಾಹೀರಾತು ಏಜೆನ್ಸಿಗಳು ಪತ್ರಿಕೆಗಳ ಜಾಹೀರಾತು ಬಿಲ್ಗಳಲ್ಲಿ ಏಜೆನ್ಸಿಗಳು ಕಡಿತಗೊಳಿಸುತ್ತಿರುವ ಶೇ.15ರ ಕಮಿಷನ್ ಹಣವನ್ನು ಕೈಬಿಡಬೇಕು. ಕಮಿಷನ್ ಹಣವನ್ನು ಸರಕಾರದ ಇಲಾಖೆಗಳು ಮತ್ತು ಅಧೀನದ ನಿಗಮ ಮಂಡಳಿ ಪ್ರಾಧಿಕಾರ ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್ ಮತ್ತಿತರೆ ಇಲಾಖೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಎಲ್ಲ ಬಗೆಯ ಜಾಹೀರಾತು ಬಿಲ್ಗಳಲ್ಲಿ ಆ ಕಛೇರಿಗಳೇ ನೇರವಾಗಿ ಜಾಹೀರಾತು ಬಿಲ್ನಲ್ಲಿ ಶೇ.15ರ ಕಮಿಷನ್ ಹಣ ಪಾವತಿಸುವಂತೆ ಈ ಜಾಹೀರಾತು ನೀತಿಯಲ್ಲಿ ಸೇರ್ಪಡೆ ಮಾಡಬೇಕು.
* ಪರಿಶಿಷ್ಟ ಜಾತಿ/ಪಂಗಡದವರ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ನಿಯಮದ ಉಪನಿಯಮಗಳನ್ನು ಕೈಬಿಡಬೇಕು. ಹಾಲೀ ಜಾಹೀರಾತು ಬಿಡುಗಡೆ ಮಾಡುವಂತೆಯೇ ಎಸ್ ಸಿ/ಎಸ್ ಟಿ ಪತ್ರಿಕೆಗಳಿಗೆ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು.
* ಹಿಂದುಳಿದ ವರ್ಗಗಳ ಮತ್ತು ಬ್ರಾಹ್ಮಣ ಸಮುದಾಯದ ಮಾಲೀಕತ್ವ ಮತ್ತು ಸಂಪಾದಕತ್ವದ ಪತ್ರಿಕೆಗಳಿಗೆ ಕೆನೆಪದರ ಆದೇಶ ಅನ್ವಯಸಬಾರದು. ಯಥಾ ರೀತಿಯಲ್ಲಿಯೇ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು.
* ಈಗಾಗಲೇ ಪ್ರೋತ್ಸಾಹಕರ ಜಾಹೀರಾತು ರೂಪದಲ್ಲಿ ಆರ್ಥಿಕ ಬೆಂಬಲವನ್ನು ಪಡೆಯುತ್ತಿರುವ ಪತ್ರಿಕೆಗಳಿಗೆ ಸದರಿ ಬೆಂಬಲವನ್ನು ಗರಿಷ್ಠ 5 ವರ್ಷಗಳವರೆಗೆ ನೀಡಲು ಸ್ವಯಂಚಾಲಿತ ಮುಕ್ತಾಯದ (Sunset Clause) ಅವಧಿ ನಿಗದಿಪಡಿಸಿದೆ ಹಾಗೂ ಮುಂದೆ ಪ್ರೋತ್ಸಾಹಕರ ಜಾಹೀರಾತಿನ ಬೆಂಬಲಕ್ಕೆ ಮಾನದಂಡಗಳನ್ವಯ ಅರ್ಹವಾಗುವ ಪತ್ರಿಕೆಗಳಿಗೆ ಪ್ರೋತ್ಸಾಹಕರ ಜಾಹೀರಾತು ಬೆಂಬಲವನ್ನು ಗರಿಷ್ಠ 7 ವರ್ಷಗಳವರೆಗೆ ನೀಡಲು ಸ್ವಯಂಚಾಲಿತ ಮುಕ್ತಾಯದ (Sunset Clause) ಅವಧಿಯನ್ನು ನಿಗಧಿಪಡಿಸಿದೆ. ಈ ನಿಯಮವು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಮಾರಕವಾಗಿದೆ. ಪತ್ರಿಕೆಗಳ ಅಭಿವೃದ್ಧಿ ಏಳೆಗಾಗಿ ಸರಕಾರದ ಪ್ರೋತ್ಸಾಹ ರೂಪದ ಜಾಹೀರಾತುಗಳು ನಿರಂತರವಾಗಿ ರಾಜ್ಯ ಸರಕಾರ ಬಿಡುಗಡೆ ಮಾಡಬೇಕು.
* ಗಡಿಭಾಗದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ನಿಯಮ-1 ಟಿಪ್ಪಣಿ ii ರನ್ವಯ ಒಂದು ಪತ್ರಿಕೆಯು 2 ಬೇರೆ ಬೇರೆ ಪರಿವ್ಯಾಪ್ತಿಯಲ್ಲಿ (ಉದಾಹರಣೆ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸೌಲಭ್ಯ ಹಾಗೂ ಹಿಂದುಳಿದ ವರ್ಗದ ಮತ್ತು ಬ್ರಾಹ್ಮಣರ ಮಾಲೀಕತ್ವ ಹಾಗೂ ಗಡಿ ಸೌಲಭ್ಯದ ವಿಶೇಷ ಜಾಹೀರಾತು ಸೌಲಭ್ಯಕ್ಕೆ ಅರ್ಹವಾಗಿದ್ದರೆ ಯಾವುದಾದರೂ ಒಂದು ಸೌಲಭ್ಯವನ್ನು ಮಂಜೂರು ಮಾಡಬೇಕು). (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸೌಲಭ್ಯ ಪಡೆಯುವ ಪತ್ರಿಕೆಗಳು ಅದೇ ಸೌಲಭ್ಯದಲ್ಲಿ ಜಾಹೀರಾತು ನೀಡುವುದು), ಈ ನಿಯಮವನ್ನು ಸರಕಾರ ಕೈಬಿಡಬೇಕು. ಹಾಲಿ ಜಾಹೀರಾತು ನಿಯಮಗಳನ್ವಯ ಬಿಡುಗಡೆ ಮಾಡುವಂತೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಅನ್ವಯವಾಗುವ ಗಡಿ/ಎಸ್.ಸಿ./ಎಸ್.ಟಿ/ಓ.ಬಿ.ಸಿ/ಬ್ರಾಹ್ಮಣ ಸಮುದಾಯದ ಜಾಹೀರಾತುಗಳನ್ನು ಸರಕಾರ ಬಿಡುಗಡೆ ಮಾಡುವುದನ್ನು ಮುಂದುವರೆಸಬೇಕು.
* ಇದೇ ನಿಯಮದ ಷರಾದಲ್ಲಿ ಅನ್ವಯಿಸಿರುವ ನಿಯಮದಂತೆ ಒಂದು ಕುಟುಂಬದವರ ಹೆಸರಿನಲ್ಲಿ ಬೇರೆ ಬೇರೆ ಪತ್ರಿಕೆಗಳು ಪ್ರಕಟವಾಗುತ್ತಿದ್ದಲ್ಲಿ ಅಂತಹ ಪತ್ರಿಕೆಗಳಲ್ಲಿ ಒಂದು ಪತ್ರಿಕೆ ಮಾತ್ರ ಪ್ರೋತ್ಸಾಹ ರೂಪದ ಜಾಹೀರಾತು ಪಡೆಯಲು ಅರ್ಹತೆ ಇರುತ್ತದೆ ಎನ್ನುವದು ಪತ್ರಿಕೆಗಳಿಗೆ ಮಾರಕವಾಗಿರುವುದರಿಂದ ಇದನ್ನು ಕೈಬಿಡಬೇಕು. ಇದು ಸಂವಿಧಾನ ವಿರೋಧಿ ಕ್ರಮವಾಗಿದೆ.
* ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಅಭಿವೃದ್ಧಿಗೆ ಏಳೆಗೆ ಪೂರಕವಾದ ನಿಯಮಗಳನ್ನು ಕರ್ನಾಟಕ ಜಾಹೀರಾತು ನೀತಿ-2026ರಲ್ಲಿ ಅಳವಡಿಸುವಂತೆ ಸಂಘವು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
* ಹಾಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಸರಕಾರ ರಚಿಸಿದರೆ ಅದನ್ನು ಸಂಘವು ವಿರೋಧಿಸುತ್ತದೆ. ಪತ್ರಿಕೆಗಳ ಉಳಿವಿಗಾಗಿ ಅನಿವಾರ್ಯವಾಗಿ ಸರಕಾರದ ವಿರುದ್ಧ ಸಂಘವು ಪ್ರತಿಭಟನಾ ಹಾದಿಯನ್ನು ತುಳಿಯುತ್ತದೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು ಎಂದು ಸಂಘದ ರಾಜ್ಯಾಧ್ಯಕ್ಷರು
ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ
ಸಂಘದ ಉಪಾಧ್ಯಕ್ಷರಾದ
ಮಂಜುನಾಥ ಬಸಪ್ಪ ಅಬ್ಬಿಗೇರಿ,
ಭೀಮರಾಯ ಹದ್ದಿನಾಳ,
ಎಚ್.ಎಸ್. ಹರೀಶ್,ರಾಜ್ಯ ಪ್ರಧಾನ ಕಾರ್ಯದರ್ಶಿ
ಟಿ.ಎಸ್. ಕೃಷ್ಣಮೂರ್ತಿ, ಖಜಾಂಚಿ
ಎಸ್.ಟಿ. ವೇದಮೂರ್ತಿ, ಕಾರ್ಯದರ್ಶಿ ಬಿ.ದಿನೇಶ್ ಗೌಡಗೆರೆ, ಜಂಟಿ ಕಾರ್ಯದರ್ಶಿ ಹೆಚ್.ರಂಗಣ್ಣ , ಗದಗ ಜಿಲ್ಲಾ ಅಧ್ಯಕ್ಷ ಜಗದೀಶ ಎಸ್.ಪಿ ಸೇರಿದಂತೆ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಇದ್ದರು.