ಕರುನಾಡು ಘರ್ಜನೆ ಸುದ್ದಿ ಗದಗ ೧೪: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲೆ ಕಾರ್ಮಿಕ ಘಟಕದ ಹೋರಾಟವನ್ನು ಮೆಚ್ಚಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅಬ್ಬಿಗೇರಿ ಮತ್ತು ಕಾರ್ಮಿಕ್ ಘಟಕದ ಜಿಲ್ಲಾಧ್ಯಕ್ಷರಾದ ತೌಸೀಫ್ ಡಾಲಾಯತ್ ಇವರ ಸಮ್ಮುಖದಲ್ಲಿ
ಫಾರೂಕ್ ಹೆಬ್ಬಸೂರು, ಅಸ್ಲಾಂ ಹೆಬ್ಬಸೂರ್, ಅಸ್ಲಾಂ ದಂಡಿನ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕುಮಾರ ರೇವಣ್ಣವರ, ಮುಳಗುಂದ ನಗರ ಘಟಕದ ಅಧ್ಯಕ್ಷರಾದ ಹುಸೇನ್ ಅಕ್ಕಿ, ಇಸಾಕ್ ನದಾಫ್ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.