Saturday, 7 November 2026 Karunadu Gharjane — Edition

Karunadu Gharjane

News website

ಜಿಲ್ಲೆ ಬೆಂಗಳೂರು I ನೋಟು ಅಮಾನ್ಯೀಕರಣಕ್ಕೆ 10 ವರ್ಷ: ಕಪ್ಪುಹಣ ಎಲ್ಲಿ ಹೋಯಿತು? ಜನಸಾಮಾನ್ಯರಿಗೆ ಸಿಕ್ಕಿದ್ದೇನು? – ವೆಲ್ಫೇರ್ ಪಾರ್ಟಿ. ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಜಿಲ್ಲೆ ಬೆಂಗಳೂರು I ನೋಟು ಅಮಾನ್ಯೀಕರಣಕ್ಕೆ 10 ವರ್ಷ: ಕಪ್ಪುಹಣ ಎಲ್ಲಿ ಹೋಯಿತು? ಜನಸಾಮಾನ್ಯರಿಗೆ ಸಿಕ್ಕಿದ್ದೇನು? – ವೆಲ್ಫೇರ್ ಪಾರ್ಟಿ. ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ.
ಜಿಲ್ಲೆ

ಬೆಂಗಳೂರು I ನೋಟು ಅಮಾನ್ಯೀಕರಣಕ್ಕೆ 10 ವರ್ಷ: ಕಪ್ಪುಹಣ ಎಲ್ಲಿ ಹೋಯಿತು? ಜನಸಾಮಾನ್ಯರಿಗೆ ಸಿಕ್ಕಿದ್ದೇನು? – ವೆಲ್ಫೇರ್ ಪಾರ್ಟಿ.

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು :2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಏಕಾಏಕಿ ಅಮಾನ್ಯಗೊಳಿಸಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು. ಕಪ್ಪುಹಣ ನಿರ್ಮೂಲನೆ, ಭ್ರಷ್ಟಾಚಾರ ನಿಯಂತ್ರಣ,…

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು :2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಏಕಾಏಕಿ ಅಮಾನ್ಯಗೊಳಿಸಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು. ಕಪ್ಪುಹಣ ನಿರ್ಮೂಲನೆ, ಭ್ರಷ್ಟಾಚಾರ ನಿಯಂತ್ರಣ, ನಕಲಿ ನೋಟುಗಳ ತಡೆ ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಯುವ ಉದ್ದೇಶಗಳನ್ನು ಸರ್ಕಾರ ಘೋಷಿಸಿತ್ತು. ಆದರೆ ಇಂದು ಹತ್ತು ವರ್ಷಗಳ ನಂತರವೂ ಆ ಭರವಸೆಗಳ ಸಾಧನೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉಳಿದಿವೆ.

ವೆಲ್ಫೇರ್ ಪಾರ್ಟಿ ಕರ್ನಾಟಕದ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಅವರು ಪ್ರತಿಕ್ರಿಯಿಸಿ, ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕತೆ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಉಂಟಾದ ಪರಿಣಾಮಗಳನ್ನು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನೋಟು ಅಮಾನ್ಯೀಕರಣದ ಪ್ರಮುಖ ದುಷ್ಪರಿಣಾಮಗಳು:
1. ಕಪ್ಪುಹಣದ ಉದ್ದೇಶ ವಿಫಲ: RBI ವರದಿಯ ಪ್ರಕಾರ ಅಮಾನ್ಯಗೊಂಡ ₹15.44 ಲಕ್ಷ ಕೋಟಿ ಹಣದಲ್ಲಿ ಸುಮಾರು ₹15.31 ಲಕ್ಷ ಕೋಟಿ ಬ್ಯಾಂಕುಗಳಿಗೆ ಮರಳಿದೆ. ಅಂದರೆ ಶೇ.99.3ರಷ್ಟು ಹಣ ವಾಪಸ್ಸಾಗಿದೆ.
2. ಸಣ್ಣ ವ್ಯಾಪಾರಿಗಳಿಗೆ ಹೊಡೆತ: ನಗದು ಕೊರತೆಯಿಂದ ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳು ಭಾರೀ ನಷ್ಟ ಅನುಭವಿಸಿದವು
3. ಉದ್ಯೋಗ ನಷ್ಟ: ಅಸಂಘಟಿತ ವಲಯ, ಕಟ್ಟಡ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಉದ್ಯೋಗ ಹಾಗೂ ಆದಾಯದ ಸಮಸ್ಯೆ ಎದುರಿಸಿದರು.
4. ರೈತರಿಗೆ ಸಂಕಷ್ಟ: ಬಿತ್ತನೆ, ಗೊಬ್ಬರ ಖರೀದಿ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಗದು ಸಿಗದೆ ರೈತರು ತೊಂದರೆ ಅನುಭವಿಸಿದರು
5. ಆರ್ಥಿಕ ಬೆಳವಣಿಗೆಗೆ ಹಿನ್ನಡೆ: ಜನರ ಖರೀದಿ ಸಾಮರ್ಥ್ಯ ಕುಸಿದು ವ್ಯಾಪಾರ, ಉತ್ಪಾದನೆ ಮತ್ತು ಹೂಡಿಕೆ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
6. ಜನಸಾಮಾನ್ಯರ ಪರದಾಟ: ತಮ್ಮದೇ ಹಣವನ್ನು ಪಡೆಯಲು ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಬಡವರು ತೀವ್ರ ಸಂಕಷ್ಟ ಅನುಭವಿಸಿದರು
ನೋಟು ಅಮಾನ್ಯೀಕರಣದ ನಂತರ ಡಿಜಿಟಲ್ ಪಾವತಿಗಳು ಹೆಚ್ಚಾಗಿರುವುದು ನಿಜ. ಆದರೆ ಅದನ್ನೇ ಈ ನೀತಿಯ ಸಂಪೂರ್ಣ ಯಶಸ್ಸು ಎಂದು ಪರಿಗಣಿಸಲಾಗದು. ಉದ್ಯೋಗ ಸೃಷ್ಟಿ, ಜನರ ಆದಾಯ, ಸಣ್ಣ ಉದ್ಯಮಗಳ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯೂ ಅಭಿವೃದ್ಧಿಯ ಪ್ರಮುಖ ಮಾನದಂಡಗಳಾಗಿವೆ.
ನೋಟು ಅಮಾನ್ಯೀಕರಣವು ಕೇವಲ ಕರೆನ್ಸಿ ಬದಲಾವಣೆಯಾಗಿರಲಿಲ್ಲ; ಕೋಟ್ಯಂತರ ಜನರ ಬದುಕು ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ ನಿರ್ಧಾರವಾಗಿತ್ತು. ಹತ್ತು ವರ್ಷಗಳ ನಂತರವಾದರೂ ಸರ್ಕಾರ ತನ್ನ ನಿರ್ಧಾರದ ಸಾಧನೆ ಮತ್ತು ವೈಫಲ್ಯಗಳ ಬಗ್ಗೆ ಜನರಿಗೆ ಉತ್ತರ ನೀಡಬೇಕು.

Editor

Leave a comment