Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ”ದಲಿತ ಚಳುವಳಿ 50: ಅವಲೋಕನ ಮತ್ತು ಮುನ್ನೊಟ” ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಗದಗನಲ್ಲಿ ನಡೆಸಲು ನಿರ್ಧಾರ  

ಕರುನಾಡು ಘರ್ಜನೆ ಸುದ್ದಿ ಗದಗ: ದಲಿತ ಚಳವಳಿ 50 : ಅವಲೋಕನ-ಮುನ್ನೋಟ ಹಾಗೂ ದಲಿತ ಚಳವಳಿಗೆ ಪ್ರೊ ಬಿ ಕೃಷ್ಣಪ್ಪ ನೀಡಿದ ಕೊಡುಗೆ ಅವರ ನೆನಪಿನಲ್ಲಿ ದಲಿತ ಚಳವಳಿ 50: ಅವಲೋಕನ-ಮುನ್ನೋಟ ಹೆಸರಿನಡಿ ರಾಷ್ಟ್ರೀಯ ಸಮಾವೇಶವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲು…

ಕರುನಾಡು ಘರ್ಜನೆ ಸುದ್ದಿ ಗದಗ: ದಲಿತ ಚಳವಳಿ 50 : ಅವಲೋಕನ-ಮುನ್ನೋಟ ಹಾಗೂ ದಲಿತ ಚಳವಳಿಗೆ ಪ್ರೊ ಬಿ ಕೃಷ್ಣಪ್ಪ ನೀಡಿದ ಕೊಡುಗೆ ಅವರ ನೆನಪಿನಲ್ಲಿ ದಲಿತ ಚಳವಳಿ 50: ಅವಲೋಕನ-ಮುನ್ನೋಟ ಹೆಸರಿನಡಿ ರಾಷ್ಟ್ರೀಯ ಸಮಾವೇಶವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲು ಇಂದಿಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

 

ಗದಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಪ್ರಗತಿಪರ ಚಿಂತಕ ಬಸವರಾಜ್ ಸೂಳಿಭಾವಿ ಮಾತನಾಡಿ, ” ರಾಜ್ಯವು ಯಜಮಾನಿಕ ಶಕ್ತಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿದ ಎಪ್ಪತ್ತರ ದಶಕದಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿ ಮತ್ತು ಅಂಬೇಡ್ಕರ್ ತತ್ವಗಳಿಂದ ಪ್ರೇರಣೆ ಪಡೆದು ಹುಟ್ಟಿದ ದಲಿತ ಚಳವಳಿಗೆ ಪ್ರಸಕ್ತ ಸಾಲಿನಲ್ಲಿ ಐವತ್ತು ವರುಷ ತುಂಬುತ್ತಿದೆ. ಈ ಚಳವಳಿ ಕರ್ನಾಟಕದಲ್ಲಿ ಮಹತ್ತರವಾದ ಬದಲಾವಣೆಗಳಿಗೆ ಕಾರಣವಾಯಿತು. ಈ ಚಳವಳಿಯಿಂದಾಗಿಯೇ ರಾಜ್ಯದ ದಲಿತ ಮತ್ತು ನಿಮ್ನ ವರ್ಗಗಳು ಚಾರಿತ್ರಿಕವಾಗಿ ಹಲವಾರು ಹೆಜ್ಜೆ ಮುನ್ನೆಗೆತ ಕಂಡವು. ಇಂಥ ಪರಿವರ್ತನೆಗೆ

ಡಿ ಎಸ್ ಎಸ್ ಹೋರಾಟವೇ ಕಾರಣ. ಇಂದು ಡಿ ಎಸ್ ಎಸ್ ಬೇರೆ ಬೇರೆ ಕಾರಣಗಳಿಂದ ಒಡೆದು ಹೋಗಿದೆ. ಇಂಥ ಒಡಕು ವೈಯಕ್ತಿಕ ನೆಲೆಯಲ್ಲದ್ದು. ಮತ್ತೆ ಈ ಎಲ್ಲ ಸಂಘಟನೆಗಳನ್ನು ವಿಶಾಲ ವೇದಿಕೆಯಡಿಯಲ್ಲಿ ಒಂದುಗೂಡಬೇಕಿದೆ. ಅದಕ್ಕೊಂದು ಪ್ರೆರಣೆ ಸಿಗಲಿ ಎಂದು ಸಂಘಟನೆಗಳ ಒಂದಾಗಲು ಒಂದು ವೇದಿಕೆಯಾಗಿ ಈ ಸಮಾವೇಶ ನಡೆಯಲಿ ಎಂದರು.

 

ಅಂಬೇಡ್ಕರ್ ಅವರ ವಿಚಾರಗಳನ್ನು ಯಾರು ಓದುತ್ತಿಲ್ಲ, ಎದೆಗೆ ಇಳಿಸಿಕೊಳ್ಳಲು ಆಗಿಲ್ಲ. ಅವರ ವಿಚಾರಗಳನ್ನು ಯುವ ಜನತೆಯ ಎದೆಗಳಿಗೆ ತಲುಪಿಸುವ ಕೆಲಸಗಳು ಇಂದು ಹೆಚ್ಚು ನಡೆಯಬೇಕಿವೆ. ಈ ಸಮಾವೇಶದ ಸಂಘಟನೆಯಲ್ಲಿ ಎಲ್ಲರೂ ಕಾರ್ಯಕರ್ತರೆ, ಎಲ್ಲರೂ ನಾಯಕರೇ. ಸಿದ್ದಾಂತ ಪ್ರದಾನವಾಗಿ ಹೊಸ ತಲೆಮಾರುಗಳನ್ನು ಸೃಷ್ಟಿಸಬೇಕೆಂದರೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಹೊಸ ನಾಯಕತ್ವ ಬೆಳೆಸಲು ಅವಕಾಶ ಕೊಡಬೇಕು. ಸ್ವಾಭಿಮಾನದ ಚಳುವಳಿ ಮತ್ತೆ ಕಟ್ಟಬೇಕು. ಬಿ ಕೃಷ್ಣಪ್ಪ, ಬಿ ಬಸವಲಿಂಗಪ್ಪ ಅವರು ಒಳದಾನಿಯಾಗ ನಮ್ಮೊಳಗಿದ್ದಾರೆ. ಅವರ ವಿಚಾರಗಳು ಈ ಕಾಲ ಘಟ್ಟದಲ್ಲಿ ನಮ್ಮೊಳಗೆ ಹೊಸ ಶಕ್ತಿಯಾಗಿ ಹುಟ್ಟಬೇಕು ಎಂದರು.

 

ದಲಿತ ಮುಖಂಡರಾದ ಕೊಪ್ಪಳದ ಟಿ ರತ್ನಾಕರ ಅವರು ಮಾತಾಡಿ ಇಷ್ಟು ದಿನದ ದಲಿತ ಚಳವಳಿಯ ಅವಲೋಕನ ಈ ಸಮಾವೇಶದಲ್ಲಿ ಆಗಬೇಕು. ಮುಂದೆ ಕಟ್ಟಬೇಕಾದ ಚಳವಳಿಯ ಮುನ್ನೋಟದ ಚರ್ಚೆಗಳು ನಡೆಯಬೇಕು. ಸಮಾವೇಶಕ್ಕೆ ಮಾನವ ಬಂಧುತ್ವ ವೇದಿಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದರು.

 

ಬಿ. ಕೃಷ್ಣಪ್ಪ ಅವರ ಕನಸುಗಳನ್ನು ಸಾಕಾರ ಮಾಡಲು ನಾವು ಮುಂದಾಗಬೇಕು. ಅವರು ಕೊನೆಯುಸಿರೆಳೆದ ಗದಗ ನೆಲದಲ್ಲಿ ದಲಿತ ಚಳವಳಿಗೆ ಹೊಸಶಕ್ತಿ ತುಂಬುವ ಕೆಲಸವಾಗಲಿ ಎಂದು ರಾಯಚೂರಿನ ಎಂ ಆರ್ ಬೇರಿ ಮಾತನಾಡಿದರು.

 

ದಲಿತ ಚಳವಳಿಗೆ ಖಚಿತ ರಾಜಕೀಯ ದೃಷ್ಟಿಕೋನವಿದೆ. ಅದನ್ನು ಪ್ರಖರವಾಗಿ ಮುಂದುವರೆಸುವ ಕೆಲಸ ಈ ಸಮಾವೇಶದಿಂದ ಆಗಬೇಕು ಎಂದು ಸಿಂಧನೂರಿನ ಎಂ ಗಂಗಾಧರ ಅವರು ಹೇಳಿದರು.

 

ಗದಗ ದಲಿತ ಮುಖಂಡರಾದ ಮುತ್ತು ಬಿಳಿಯಲಿ ಮಾತನಾಡಿ, ” ಹರಿಹರ ಹಾಗೂ ಭದ್ರಾವತಿಯಲ್ಲಿ ಪ್ರೊ ಬಿ ಕೃಷ್ಣಪ್ಪ ಅವರ ನೆನಪಿನ ಸ್ಮಾರಕಗಳಿವೆ. ಬಿ ಕೃಷ್ಣಪ್ಪ ಅವರು ಕೊನೆಯ ಉಸಿರೆಳೆದ ಗದಗಿನ ನೆಲದಲ್ಲಿ ಅಂಥ ಸ್ಮಾರಕ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಈ ಸಮಾವೇಶದ ಮೂಲಕ ಅದು ನೇರವೇರಲಿ ಎಂದರು

 

ಬಸವರಾಜ್ ಕಡೆಮನಿ ಅವರು ಮಾತನಾಡಿ, ” ಜಿಲ್ಲೆಯಲ್ಲಿ ಡಿ ಎಸ್ ಎಸ್ ಸಂಘಟನೆಗಳು ಬೇರೆಯಾಗಿ ಮನಸ್ಸುಗಳು ಒಡೆದು ಹೋಗಿವೆ. ಈ ಮನಸುಗಳನ್ನು ಒಂದುಗೂಡಿಸುವ ಕೆಲಸ ಆಗಬೇಕಿದೆ. ಎಲ್ಲರೂ ಸೇರಿ ಗದಗ ನಲ್ಲಿಯೇ ಸೇರಿ ಈ ಸಮಾವೇಶ ಮಾಡೋಣ ಎಂದರು.

 

ಪ್ರೊ ಕೆ ಎಚ್ ಬೇಲೂರು ಮಾತನಾಡಿ, “ನಾವು ಇಂದು ಜಾಗೃತರಾಗದಿದ್ದರೆ, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಎಂದರು.

 

ಎಚ್ ಡಿ ಪೂಜಾರ್ ಮಾತನಾಡಿ, ಹಿಂದೆ ಚಳುವಳಿಗಳು ಸೈದ್ದಂತಿಕ ವಿಚಾರಗಳ ಮೇಲೆ ನಿಂತಿದ್ದವು. ಕಾರ್ಯಕರ್ತರರಲ್ಲಿ, ಪದಾಧಿಕಾರಿಗಳಲ್ಲಿ ಸಿದ್ದಾಂತವೇ ಪ್ರದಾನ ಸಂಗತಿಯಾಗಿತ್ತು. ಈಗ ಸೈದ್ದಾಂತಿಕ ವಿಚಾರಗಳು ಅವನತಿಯಾಗಿವೆ ಎನಿಸುತ್ತದೆ. ಸಮಾನತೆ, ಸ್ವಾತಂತ್ರ್ಯ ಪಡೆದುಕೊಂಡು ಮತ್ತೆ ತಲೆ ಎತ್ತಿ ನಿಲ್ಲಲು ಡಿ ಎಸ್ ಎಸ್ ಸಂಘಟನೆಗೆ ಮತ್ತು ಚಳವಳಿಗೆ ಸೈದ್ದಾಂತಿಕ ಬದ್ದತೆಯುಳ್ಳ ಹೊಸ ತಲೆಮಾರು ಬರಬೇಕಿದೆ ಎಂದರು. ಹಿರಿಯ ನಾಯಕರಾದ ವೆಂಕಟೇಶಯ್ಯ, ಶುಕ್ರರಾಜ ತಾಳಕೇರಿ, ಬಸವರಾಜ ಈಳಿಗನೂರ, ವಿಜಯ ಮುಳಗುಂದ, ಬಾಲರಾಜ ಅರಬರ, ಶರಣು ಪೂಜಾರ, ಆನಂದ ಶಿಂಗಾಡಿ , ಭೀಮಣ್ಣ ಹವಳಿ, ಸಂಜಯದಾಸ ಮೊದಲಾದವರು ಮಾತನಾಡಿದರು.

 

ಈ ಕಾರ್ಯಕ್ರಮದಲ್ಲಿ ಗದಗ, ಕೊಪ್ಪಳ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಾಪುರ ಜಿಲ್ಲೆಗಳ ದಲಿತ ಮುಖಂಡರು ಪಾಲ್ಗೊಂಡು ಸಮಾವೇಶ ತಮ್ಮ ಬೆಂಬಲ ವ್ಯಕ್ತಪಡಿಸಿದರು

Editor

Leave a comment