Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ: ದಲಿತ ಚಳುವಳಿ ೫೦: ಗದಗದಲ್ಲಿ ನವೆಂಬರ್ 23 , 24 ಸಮಾವೇಶ ಮಾಡಲು ನಿರ್ಧಾರ

ಕರುನಾಡು ಘರ್ಜನೆ ಸುದ್ದಿ ಗದಗ: ರಾಜ್ಯದಲ್ಲಿ ನಡೆದ ದಲಿತ ಚಳುವಳಿ- ಹೋರಾಟ ನಡೆದು ಬಂದ ದಾರಿಯ ಐತಿಹಾಸಿಕ ಮಹತ್ವದ ಹೆಜ್ಜೆಗಳ ಕುರಿತು ಅವಲೋಕನ ಮಾಡುವ ಮತ್ತು ಚಳವಳಿಯ ಮುನ್ನೋಟವನ್ನು ಚರ್ಚೆಗೆ ಒಡ್ಡಿಕೊಳ್ಳುತ್ತ ಈ ಕಾಲದ ಶೋಷಿತ ಸಮುದಾಯಗಳ ಸಮಸ್ಯೆ ಸಂಕಟಗಳ ಆಧಾರದ…

ಕರುನಾಡು ಘರ್ಜನೆ ಸುದ್ದಿ ಗದಗ: ರಾಜ್ಯದಲ್ಲಿ ನಡೆದ ದಲಿತ ಚಳುವಳಿ- ಹೋರಾಟ ನಡೆದು ಬಂದ ದಾರಿಯ ಐತಿಹಾಸಿಕ ಮಹತ್ವದ ಹೆಜ್ಜೆಗಳ ಕುರಿತು ಅವಲೋಕನ ಮಾಡುವ ಮತ್ತು ಚಳವಳಿಯ ಮುನ್ನೋಟವನ್ನು ಚರ್ಚೆಗೆ ಒಡ್ಡಿಕೊಳ್ಳುತ್ತ ಈ ಕಾಲದ ಶೋಷಿತ ಸಮುದಾಯಗಳ ಸಮಸ್ಯೆ ಸಂಕಟಗಳ ಆಧಾರದ ಮೇಲೆ ಸಾಗಬೇಕಾದ ಚಳವಳಿಯ ದಾರಿಯ ಸ್ವರೂಪದ ಬಗ್ಗೆ ಚರ್ಚಿಸುವ ಅಗತ್ಯವಿದೆ.

 

ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಅಂಬೇಡ್ಕರ ತಾತ್ತ್ವಿಕತೆಯಿಂದ ಪ್ರೇರಣೆ ಪಡೆದು ದಲಿತ ಚಳುವಳಿಗಳು ನಡೆದಿವೆ. ಅದೇ ಅವಧಿಯಲ್ಲಿ ರೈತ, ಮಹಿಳಾ, ಎಡವಾದಿ ಚಳವಳಿಗಳು ಕರ್ನಾಟಕದಲ್ಲಿ ನಡೆದಿವೆ. ಇಂಥಹ ಚಳುವಳಿಗಳ ನಡುವಿದ್ದ ಸಾಮರಸ್ಯ ಮತ್ತು ಭಿನ್ನತೆಗೆ ಕಾರಣವಾದ ಸಂಗತಿಗಳನ್ನು ಅವಲೋಕಿಸಿಕೊಳ್ಳುವ ಅಗತ್ಯ ಕಾಣುತ್ತದೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು

 

ಅವರಿಂದು ದಲಿತ ಚಳವಳಿ 50 ಅವಲೋಕನ ಮತ್ತು ಮುನ್ನೋಟ ಸಮಾವೇಶದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

೧೯೭೧ರಲ್ಲಿ ಜಾತಿ ವಿನಾಶ ಚಳುವಳಿ ಸಮಾವೇಶ ನಡೆಯಿತು, ಧರ್ಮಲಿಂಗಂ, ನಂಜುಂಡಸ್ವಾಮಿ, ತೇಜಸ್ವಿ ಇದರಲ್ಲಿದ್ದರು. ಈ ಸಮಾವೇಶದ ನಂತರ ನಡೆದ ಬೂಸಾ ಚಳುವಳಿ ರಾಜ್ಯದಲ್ಲಿ ದಲಿತ ಚಳವಳಿಯ ಪ್ರಜ್ಞೆ ಗಟ್ಟಿಗೊಳ್ಳಲು ಕಾರಣವಾಯಿತು. 1973-74ರಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿಯ ಪ್ರೇರಣೆ ಬೆಳಗಾವಿ ಭಾಗದಲ್ಲಿ ಆಗಿ ದಲಿತ ಪ್ಯಾಂಥರ್ಸ್ ಚಟುವಟಿಕೆಗಳು ಆರಂಭಗೊಂಡಿದ್ದು ಇತಿಹಾಸ. ಆ ವರ್ಷವೇ ದಲಿತ ಸಂಘರ್ಷ ಸಮಿತಿ ನೋಂದಣಿಗೊಂಡಿತು. 76ರಲ್ಲಿ ದಲೇಕ ಯುವ ಪಡೆ ಸಮಾವೇಶ, 77ರಲ್ಲಿ ದಲಿತ ಚಿಂತಕರ ಸಭೆಯಿಂದ ಸಂಘಟನಾತ್ಮಕ ರೂಪ ಪಡೆದ ದಲಿತ ಸಂಘರ್ಷ ಸಮಿತಿಯಿಂದ ದಲಿತ ಚಳವಳಿಗೆ ಬಂದ ವೇಗ ಕರ್ನಾಟಕದ ಜನಜೀವನದಲ್ಲಿ ದೊಡ್ಡ ಪಲ್ಲಟ ಮಾಡಿದ ಸಂಗತಿಗಳನ್ನು ಈ ಸಮಾವೇಶದಲ್ಲಿ ಹೊಸ ತಲೆಮಾರಿನ ದೃಷ್ಟಿಯಿಂದ ಮನನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಅವರು ಹೇಳಿದರು

 

ನಮ್ಮ ಚರಿತ್ರೆಯನ್ನು ನಾವೇ ಕಟ್ಟಿಕೊಳ್ಳಬೇಕಿದೆ. ನಮ್ಮ ಕರ್ನಾಟಕದಲ್ಲಿಯೇ ಈ ಚರಿತ್ರೆಯನ್ನು ನೋಡಬೇಕು. ರಾಜ್ಯದಲ್ಲಿ ಈ ೫೦ ವರ್ಷಗಳಲ್ಲಿ ಯಾವ ಯಾವ ಚಳುವಳಿಗಳು ಎಲ್ಲಿಲ್ಲಿ ನಡೆದವು, ಅವುಗಳನ್ನು ಕಟ್ಟಿದವರಾರು? ಯಾವ ಕಾರಣಗಳಿಗೆ ಈ ಚಳವಳಿ ನಡೆದವು. ಅವುಗಳ ಪರಿಣಾಮ ಎಷ್ಟಾಯಿತು. ಈ ಸಂಗತಿಗಳ ಮೂಲಕವೇ ಚರಿತ್ರೆ ಕಟ್ಟುವ ಕೆಲಸ ಆಗಬೇಕಾಗಿದೆ. ಹಾಗೆ ಗದಗಿಗೂ ಕೂಡ ದಲಿತ ಚಳುವಳಿಯ ಚರಿತ್ರೆ ಅಂಬೇಡ್ಕರ್ ಅವರ ಕಾಲದಿಂದಲೂ ಇದೆ. ಅದನ್ನು ಸರಿಯಾಗಿ ದಾಖಲಿಸುವ ಕೆಲಸಗಳು ಆಗಿಲ್ಲ. ಅವೆಲ್ಲ ಸಂಗತಿ ಶೋಧಿಸಿ, ರೂಪಿಸುವ ಮೂಲಕ

ನಾವು ಚರಿತ್ರೆ ಕಟ್ಟುವ ಕೆಲಸ ಮಾಡಬೇಕಿದೆ ಎಂದೂ ಅವರು ಹೇಳಿದರು. ಈ ಸಮಾವೇಶದಿಂದ ಆ ಕೆಲಸಕ್ಕೊಂದು ಚಾಲನೆ ಕೊಡುವ ಕೆಲಸ ಆಗಬೇಕು ಎಂದರು.

 

ಹೋರಾಟಗಾರ ಷರೀಫ್ ಬಿಲಿಯಲಿ ಮಾತನಾಡಿ, “ಹಿಂದೆಯೂ ಕೂಡ ಶೋಷಿತರ ಪರವಾಗಿ ಅನೇಕ ಹೋರಾಟಗಳು ನಡೆದಿದ್ದವು. ೭೪ರ ನಂತರ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿತು. ಆ ಹಿನ್ನಲೆಯಲ್ಲಿ ಗದಗದಲ್ಲಿ ಅಂಬೇಡ್ಕರ ನಗರ ತಲೆ ಎತ್ತಿವೆ. ಹಾಗಾಗಿ ಈ ಸಮಾವೇಶದ ಮೇನ್ ಥೀಮು ದಲಿತ ಚಳುವಳಿ ಅವಲೋಕನ ಮುನ್ನೋಟ ಇರಲಿ ಎಂದರು.

 

ಹಿರಿಯ ಸಾಹಿತಿ ಅರ್ಜುನ್ ಗೊಳಸಂಗಿ ಮಾತನಾಡಿ, ಹಂಪಿ ವಿ ವಿಯು ದಲಿತ ಚಳುವಳಿಗಳ ಕುರಿತು ಅಧ್ಯಯನ ನಡೆಸುತ್ತಿದೆ. ಹಾಗೆ ಮಹಾ ಪ್ರಬಂಧಗಳು ಬಂದಿವೆ. ಪ್ರತಿ ಜಿಲ್ಲೆಯಲ್ಲಿ ದಲಿತ ಚಳುವಳಿಯ ಕುರಿತು, ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಬೇಕು. ಡಿಎಸ್ಎಸ್ ಅವರನ್ನು ಕರೆದುಕೊಂಡು ಮಾಡಬೇಕೋ, ಅಥವಾ ಸಾಹಿತಿಗಳನ್ನು ಕರೆದುಕೊಂಡು ಮಾಡಬೇಕೋ ಚರ್ಚಿಸೋಣ. ಹೊಸದಾಗಿ ಡಿಎಸ್ಎಸ್ ಕಟ್ಟುವ ಯುವಕರು ಯಾವುದೇ ಬಣವಿರಲಿ ಎಲ್ಲರು ಸೇರಬೇಕು. ದಲಿತ ಚಳುವಳಿಗಳು ಕರ್ನಾಟಕಕ್ಕೆ ಸಂಬಂಧಿಸಿದ್ದು, ಹಿನ್ನಲೆಯಲ್ಲಿ ವಿಭಾಗ ಮಟ್ಟದಲ್ಲಿ ಸಭೆಗಳನ್ನು ಮಾಡಿ ಚರ್ಚಿಸಬೇಕು. ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸುವದಾಗಬೇಕು ಆಗ ಈ ಸಮಾವೇಶ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

 

ಹೋರಾಟಗಾರ ರತ್ನಾಕರ ಮಾತನಾಡಿ, ” ಬಿ. ಕೃಷ್ಣಪ್ಪ ಅವರು ಗದಗದಲ್ಲಿ ಕೊನೆ ಉಸಿರೆಳೆದರು. ಆಗ ಅವರು ವೈಯಕ್ತಿಕ ಕೆಲಸಕ್ಕಾಗಿ ಬಂದಿರಲಿಲ್ಲ. ಚಳುವಳಿಯಾಗಿಯೇ ಬಂದು ಇಲ್ಲಿ ಬಂದು ಕೊನೆ ಉಸಿರೇಳದವರು. ಹಾಗಾಗಿ ಕೃಷ್ಣಪ್ಪ ಅವರ ಚಳುವಳಿಯ ನೆನಪಿನ ಭಾಗವಾಗಿ ಈ ಸಮಾವೇಶ ನಡೆದು ಚಳವಳಿಗೆ ಹೊಸ ರೂಪ ಬರುವಂತಾಗಲಿ. ಯುವಕರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಜೊತೆಯಾಗಿಸಬೇಕು. ಈ ಮೂಲಕ ಅವರನ್ನು ಚಳುವಳಿ ಕಟ್ಟೋಕೆ, ಹಾಗೂ ಸಮಾವೇಶಕ್ಕೆ ಹೇಗೆ ಒಗ್ಗೂಡಿಸಬೇಕು ಎಂದು ಚರ್ಚಿಸಬೇಕು ಎಂದು ಹೇಳಿದರು.

 

ಮಾನವ ಬಂದುತ್ವ ವೇದಿಕೆ ಮುಖಂಡ ಭೀಮಣ್ಣ ಹವಲಿ ಮಾತನಾಡಿ, “ಎಲ್ಲರನ್ನೂ ಸೇರಿಸಿ ಮಾಡಬೇಕು. ದಲಿತ ಚಳುವಳಿಗಳ ಆದಿ- ಸವಾಲುಗಳು ಇಟ್ಟುಕೊಂಡು ಈ ಸಮಾವೇಶ ಮಾಡಿದರೆ ಸೂಕ್ತ ಎಂದರು.

 

ಕವಿ ವೀರಪ್ಪ ತಾಳದವರ ಮಾತನಾಡಿ, ದಲಿತ ಚಳುವಳಿ ೫೦ ಎಂದೇ ಮಾಡಿ, ಡಿಎಸ್ಎಸ್ ನ ಹೋರಾಟದ ಚರಿತ್ರೆಯನ್ನು ದೊಡ್ಡದಾಗಿ ಚರ್ಚಿಸಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

 

ಡಿಎಸ್ಎಸ್ ಮುಖಂಡ ಸಂಜೀವ್ ಕಾಂಬಳೆ ಮಾತನಾಡಿ, “ದಲಿತ ಚಳುವಳಿ ೫೦ ಎಂದು ಮಾಡದೆ, ದಲಿತ ಚಳುವಳಿಯ ಮುನ್ನೋಟ, ಅವಲೋಕನ ಎಂದು ಮಾಡಿ ಎಂದು ಸಲಹೆ ನೀಡಿದರು.

 

ಡಿಎಸ್ಎಸ್ ರಾಜ್ಯ ಸಂಚಾಲಕರಾದ ಸಿದ್ದಾರ್ಥ ಸಿಂಘೆ ಈ ಸಮಾವೇಶಕ್ಕೆ ರಾಜಕೀಯ ಸ್ಪಷ್ಟ ತಿಳುವಳಿಕೆ ಇರುವದರಿಂದ ಸೈದ್ಧಾಂತಿಕ ವಿರೋಧಿಗಳನ್ನು ಹೊರಗಿಟ್ಟೆ ಸಮಾವೇಶ ನಡೆಸಬೇಕು ಎಂದರು.

 

ಚಿಂತಕ ಹರಿನಾಥ್ ಬಾಬು ಮಾತನಾಡಿ, “ನಾವೆಲ್ಲರೂ ಮಾಡುವ ಕೆಲಸಗಳು ಸಂವಿಧಾನವನ್ನು ಗಟ್ಟಿಗೊಳಿಸುವುದೇ ಆಗಿದೆ. ಯಾರೋ ವ್ಯಕ್ತಿಗಳನ್ನು ಮುನ್ನಡೆಸೋಕೆ ಅಲ್ಲ. ನಮ್ಮ ಬದುಕನ್ನು ಕಟ್ಟಿಕೊಳ್ಳೋಕೆ, ಅದು ಚಳುವಳಿಗಳ ಮೂಲಕ. ಇಲ್ಲಿ ಕೃಷ್ಣಪ್ಪನವರು ಒಂದು ನೆಪ ಮಾತ್ರ, ನೆಪದಿಂದಲೇ ನಾವೆಲ್ಲರೂ ಸೇರುತ್ತಿರುವುದು. ದಲಿತ ಚಳುವಳಿಗಳು ಕೇವಲ ದಲಿತರಿಗಲ್ಲ ದಲಿತೇತರ ಶೋಷಿತ ಸಮುದಾಯಗಳನ್ನು ಒಳಗೊಂಡಿದೆ. ನಾವೆಲ್ಲರೂ ಒಗ್ಗೂಡಿ, ಚಳುವಳಿ ಕಟ್ಟುವ ಕೆಲಸ ದೊಡ್ಡಮಟ್ಟದಲ್ಲಿ ಆಗಬೇಕಿದೆ ಎಂದು ಹೇಳಿದರು.

 

ಸಭೆಯಲ್ಲಿ ಅನೇಕ ಸಂಗತಿಗಳನ್ನು ಚರ್ಚಿಸಿದ ನಂತರದಲ್ಲಿ ದಲಿತ ಚಳುವಳಿ ೫೦ ರ ಸಮಾವೇಶವನ್ನು ಗದಗ ನಗರದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನವಂಬರ್ ತಿಂಗಳು 23/24 ರಂದು ಮಾಡಲು ನಿರ್ಧರಿಸಲಾಯಿತು.

ಪ್ರಕಾಶ್ ಅಂಬೇಡ್ಕರ್, ದೇವನೂರು ಮಹಾದೇವ, ಕಂಚ ಐಲಯ್ಯ, ಸುಖದೇವ ಥೋರಾಟ, ಜಿಗ್ನೇಶ ಮೇವಾನಿ, ಗೋಪಾಲ ಗುರು, ಚಂದ್ರಶೇಖರ ರಾವಣ, ಇಂದಿರಾ ಕೃಷ್ಣಪ್ಪ, ರಮಾಬಾಯಿ ಆಂಬೇಡ್ಕರ್, ಹಗನವಾಡಿ ರುದ್ರಪ್ಪ, ಜ್ಞಾನ ಪ್ರಕಾಶ ಸ್ವಾಮಿ ಚೆನ್ನ ಬಸವ ಪ್ರಭು ಸ್ವಾಮಿ, ನಿಜಗುಣನಂದ ಸ್ವಾಮಿ, ಡಿ ಎಸ್ ಎಸ್ ಸಂಘಟನೆಗಳ ರಾಜ್ಯ ಸಂಚಾಲಕರು ದಲಿತ ಚಳುವಳಿ 50: ಸಮಾವೇಶದಲ್ಲಿ ಉದ್ಘಾಟನಾ ಗೋಷ್ಠಿಗೆ ಕರೆಯಲು ಮೇಲಿನ ಹೆಸರುಗಳು ಕೇಳಿ ಬಂದವು

 

ದಲಿತ ಚಳುವಳಿ ೫೦: ಸಮಾವೇಶದ ಕಾರ್ಯಕ್ರಮ ರೂಪಿಸಲು ರಚಿಸಲಾದ ಕೋರ್ ಕಮಿಟಿಯಲ್ಲಿ : ಇಂದಿರಾ ಕೃಷ್ಣಪ್ಪ, ಬಿ ಎಮ್ ಪುಟ್ಟಯ್ಯ, ಆರ್ ಮಾನಸಯ್ಯ, ಹುಲಿಕುಂಟೆಮೂರ್ತಿ, ಅನಸೂಯ ಕಾಂಬಳೆ, ಗುರು ಪ್ರಸಾದ್ ಕೆರೆಗೋಡ, ಇಂದೂಧರ್ ಹೊನ್ನಾಪುರ, ಬಿ. ಶ್ರೀನಿವಾಸ, ಅನಿಲ ಹೊಸಮನಿ, ಮಾವಳ್ಳಿ ಶಂಕರ, ಕೆ ರಾಮಯ್ಯ ಅವರ ಒಪ್ಪಿಗೆ ಪಡೆದು ಸೇರಿಸಬೇಕು ಎಂದಾಯಿತು..

 

ಸಭೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಾಗೂ ಬಾಗಲಕೋಟೆಯಿಂದ ಸದಾಶಿವ ಸಿಂಗೆ,ರೋಣ ತಾಲೂಕಿನ ದಲಿತ ಮುಖಂಡರಾದ ಜೋಗಣ್ಣವರ,ಪ್ರಕಾಶ ಹೊಸಳ್ಳಿ,ವೀರಪ್ಪ ತೆಗ್ಗಿನಮನಿ, ಬಂದಿದ್ದರು ಬಾಲರಾಜ್ ಅರಬರ ಹನುಮಂತ ಕಿನ್ನಾಳ, ರಾಮಚಂದ್ರ ಹಂಸನೂರ, ಆನಂದ ಶಿಂಗಾಡಿ, ಯಲ್ಲಪ್ಪ ರಾಮಗಿರಿ, ರಾಮಕೃಷ್ಣ ,ಕೊರವರ,ಮುತ್ತು ಚವಡಣ್ಣವರ,ಮೈಲಾರಪ್ಪ ಚಳ್ಳಮರದ ನಾಗರಾಜ್ ಗೋಕಾವಿ,ಎಚ್.ಎಸ್.ರಾಮನಗೌಡ, ವಾಸಂತಿ ಮಲ್ಲಾಪುರ,ನಾಗಮ್ಮ ಹಾಲಿನವರ,ರಮೇಶ ಕೋಳೂರ, ಮಂಜುನಾಥ ಮುಳಗುಂದ,ದೇವರಾಜ್ ಕಟ್ಟಿಮನಿ,ಹುಚ್ಚಪ್ಪ ಚಲವಾದಿ, ಸತೀಶ್ ಸತ್ಯಮ್ಮನವರ,ರವಿ ಚಲವಾದಿ, ಶಿವಾನಂದ ತಮ್ಮಣ್ಣವರ , ಅನಿಲ್ ಕಾಳೆ, ಪರಶು ಕಾಳೆ, ಮಂಜುನಾಥ ಹಗೆದಾಳ, ರವಿ ಕಾಳೆ….. ಉಪಸ್ಥಿತರಿದ್ದು ಉಪಯುಕ್ತ ಸಲಹೆ ನೀಡಿದರು..

Editor

Leave a comment