ಕರುನಾಡು ಘರ್ಜನೆ ಸುದ್ದಿ ಗದಗ 01: ಅಭಿವೃದ್ಧಿಗೆ ಕಾರಣವಾಗಬೇಕಾಗಿದ್ದ ರೈಲ್ವೆ ಮೇಲ್ವೇತುವೆ ಎಳೆಂಟು ವರ್ಷ ಕಳೆದರೂ ಪೂರ್ಣಗೊಳ್ಳದೆ ಇರುವುದರಿಂದ ಹೊಂಬಳ ಎಸ್.ಎಂ.ಕೃಷ್ಣ ನಗರ ಹಾಗೂ ಗಂಗಾಪುರ ಪೇಟೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ನಿತ್ಯ ಬದುಕು ಕಟ್ಟಿಕೊಳ್ಳಬೇಕಾದ ಸಾವಿರಾರು ಜನರು, ಗಂಗಾಪೂರ ಪೇಟೆಯ ಅಂಗಡಿಕಾರರು ಅನ್ನ ನೀಡುವ ರೈತರು, ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು, ಜವಾಬ್ದಾರಿ ಹೊತ್ತ ಆಟೋ ಚಾಲಕರು, ಸೇರಿದಂತೆ ನೂರಾರು ಕುಟುಂಬಗಳು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೋಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸಂಸದರಾದ ಬಸವರಾಜ ಭೊಮ್ಮಾಯಿ ಅವರಿಗೆ ಗದಗ ಹೋಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದಿಂದ ಮನವಿ ಪತ್ರ ಸಲ್ಲಿಸಿ ಮಾತನಾಡಿದರು
ಗದಗ ನಗರದ ಗಂಗಾಪುರ ಪೇಟೆ ಮಾರ್ಗವಾಗಿ ಹೊಂಬಳ ರೋಡ ಮಧ್ಯದಲ್ಲಿ ಮಾನವ ಚಾಲಿತ ರೈಲ್ವೆ ಗೇಟ್ ಸಂಖ್ಯೆ 32.ಗೆ ಸುಮಾರು 8 ವರ್ಷಗಳ ಹಿಂದೆ ಮೇಲ್ವೇತುವೆ ಕಾಮಗಾರಿಯು ಆರಂಭಗೊಂಡಿದ್ದರಿಂದ ಎಲ್ಲರೂ ಸಂಭ್ರಮ ಪಟ್ಟಿದ್ದರು. ಆದರೆ, ದಿನ ಕಳೆದಂತೆ ಆಮೇಗತಿಯಲ್ಲಿ ಸಾಗುತ್ತ ಸಧ್ಶ ಸಂಪೂರ್ಣವಾಗಿ ಸ್ಥಗಿತಗೊಂಡ ಕಾಮಗಾರಿಯಿಂದಾಗಿ ಗಂಗಾಪುರ ಪೇಟೆ, ಅಂಬೇಡ್ಕರ್ ನಗರ, ಆಂಜನೇಯ ದೇವಸ್ಥಾನ ಹೊಂಬಳ ಜನತಾ ಕಾಲೋನಿ ಆಧಿಜಾಂಭವ ನಗರದ ಹಾಗೂ ಎಸ್.ಎಂಕೃಷ್ಣ ನಗರದ ಜನರು ಸುಮಾರು 5-6 ಕಿಮೀ. ಸುತ್ತುವರೆದು ಹೋಗಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ, ಈ ಭಾಗದಲ್ಲಿ ಶಾಲೆ, ಸ್ಮಶಾನ ಮತ್ತು ಜಮೀನುಗಳು ಇರುವುದರಿಂದ ಎಸ್.ಎಂ.ಕೃಷ್ಣ ನಗರ, ಬಳಗಾನೂರ ಮತ್ತು ಹೊಂಬಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಈ ಮಾರ್ಗದಿಂದ ಬಹಳಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ರೈತರು ಓಡಾಡುತ್ತಾರೆ. ಬೆಳಗಿನ ವೇಳೆ ಈ ರಸ್ತೆ ಕಾಮಗಾರಿಯು ಅಪೂರ್ಣ ಗೊಂಡಿರುವುದರಿಂದ ಗಂಗಾಪೂರ ಪೇಟೆ ಸೇರಿದಂತೆ ಎರಡು ಕಡೆ ವ್ಯಾಪಾರ-ವಹಿವಾಟು ಸಂಪೂರ್ಣ ತಟಸ್ಥಗೊಂಡಿದೆ ಎಂದ ಅವರು
ಸಾಮಾನ್ಯ ಜನರಿಗೆ, ವೃದ್ಧರಿಗೆ ಶಾಲಾ-ಮಕ್ಕಳಿಗೆ ಸಂಚರಿಸಲು ರಸ್ತೆ ಅನುಕೂಲ ವಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಜೀವ ಕೈಯಲ್ಲಿಟ್ಟಿಕೊಂಡು ರೈಲ್ವೆ ಹಳಿಗಳನ್ನು ದಾಟುತ್ತದ್ದಾರೆ. ಇದು ಅಪಾಯದ ಕೆಲಸವಾಗಿದ್ದರೂ ಸಹ ಈ ಕುರುತು ನಮ್ಮ ಹೋಂಬಳನಾಕಾ ಸಂಘದಿಂದ ಹಾಗೂ ರೈತ ಸಂಘದ ಜತೆಗೆ ಹಲವು ಸಂಘಟನೆಗಳಿಂದ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸಹ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದಿರುವುದು ವಿಷಾದನೀಯವಾಗಿದೆ. ಎಂದು ಜನರು ಪಡುತ್ತಿರುವ ಪರದಾಟದ ಅಳಲನ್ನು ತೊಡಿಕೊಂಡು ಸಂಸದರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಶಕ್ಷರಾದ ಪರಶುರಾಮ ಅಣ್ಣಿಗೇರಿ ಪ್ರಮುಖ ಪದಾಧಿಕಾರಿಗಳಾದ ಗಂಗಾಧರ ಬ್ಶಾಗೋಟಿ ಉಮೇಶ ಬೆಳಧಡಿ ರಾಜು ತಹಶೀಲ್ದಾರ ಮೋಹನ ಚಲವಾದಿ ಹಾಗೂ ಓಣಿಯ ಗುರು ಹಿರಿಯರು ಯುವ ಬಾಂಧವರು ಹಾಜರಿದ್ದರು
ಬಾಕ್ಷ ಹೇಳಿಕೆ
——————
ಎಳೆಂಟು ವರ್ಷದಿಂದ ರೈಲ್ವೆ ಬ್ರಿಜ್ ಕಾಮಗಾರಿಯಿಂದ ಗಂಗಾಪುರ ಪೇಟೆ- ಎಸ್.ಎಂ.ಕೃಷ್ಣನಗರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ. ವ್ಯಾಪಾರ ಇಲ್ಲದಂತಾಗಿದೆ. ಲಿಂಗದಾಳ, ಹೊಂಬಳ ಗ್ರಾಮಸ್ಥರು ನಗರಕ್ಕೆ ಬಂದು ಹೋಗುವ ಮುಖ್ಯ ರಸ್ತೆ ಇದಾಗಿದ್ದರಿಂದ ವ್ಯಾಪಾರ ಚೆನ್ನಾಗಿತ್ತು ಈಗ ಎಲ್ಲ ಸಂಪರ್ಕ ಕಡಿತಗೊಂಡಿದ್ದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಈ ಬಗ್ಗೆ ಬಡವರ ಪರವಾಗಿರುವ ನೂತನ ಸಂಸದರಾದ ಬಸವರಾಜ ಭೊಮ್ಮಾಯಿ ಅವರು ಸುಗಮ ಸಂಚಾರಕ್ಕಾಗಿ ವ್ಶಾಪಾರಸ್ಥರಿಗಾಗಿ ಮತ್ತು ಸಮಸ್ಥ ಜನಸಾಮಾನ್ಶರ ಅನಕೂಲಕ್ಕಾಗಿ ಈ ಕೂಡಲೆ ಕಾಮಗಾರಿ ಪೂರ್ಣಗೊಳಿಸಲು ಸಂಬಂದ ಪಟ್ಟವರಿಗೆ ಕಡಕ್ ಆದೇಶ ನೀಡುವ ಜತೆಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು