ಕರುನಾಡು ಘರ್ಜನೆ ಸುದ್ದಿ ಗದಗ ೦೩: ದಿ. ೦೨-೦೭-೨೦೨೪, ೦೩-೦೭-೨೦೨೪ ಈ ಎರಡು ದಿನಗಳ ಕೆಲವು ಗಂಟೆಗಳ ಮಾತ್ರ ಹೊಸ ರೇಷನ್ ಕಾರ್ಡಗೆ ಅರ್ಜಿ ಹಾಗೂ ತಿದ್ದುಪಡಿಗೆ ಸರ್ಕಾರದವರು ಅವಕಾಶ ಮಾಡಿಕೊಟ್ಟಿದ್ದು ಸಾರ್ವಜನಿಕರು ಬೆಳಿಗ್ಗೆ ೫ ಗಂಟೆಯಿAದ ತಮ್ಮ ಚಿಕ್ಕಮಕ್ಕಳನ್ನು ತೆಗೆದುಕೊಂಡು ಕರ್ನಾಟಕ ಓನ್, ಗ್ರಾಮ ಒನ್ ಕಡೆಗೆ ತಮ್ಮ ರೇಷನ್ ಕಾರ್ಡ ಹಾಕಿಸಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಬಂದು ಕುಳಿತುಕೊಂಡಿರುವುದು ಮತ್ತು ಬೆಳಿಗ್ಗೆ ಚಹಾ, ಉಪಹಾರ ಇಲ್ಲದೇ ಮಧ್ಯಾಹ್ನ ಊಟವಿಲ್ಲದೆ ಬಡಜನರು ತಮ್ಮ ದಿನನಿತ್ಯದ ಕೂಲಿ ತ್ಯಜಿಸಿ ಉಪವಾಸ ವನವಾಸ ಸ್ಥಿತಿಯಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಿ ನೆಪ ಮಾತ್ರಕ್ಕೆ ಅವಕಾಶ ಕಲ್ಪಿಸಿಕೊಟ್ಟು, ಒಂದು ದಿನಕ್ಕೆ ಕೇವಲ ಎರಡು ಮೂರು ಜನರ ಸಮಸ್ಯೆ ಮಾತ್ರ ಸರಿಯಾಗುತ್ತಿವೆ. ಉಳಿದ ಜನ ನಿರಾಶೆಯಾಗಿ ಸರ್ಕಾರಕ್ಕೆ ಹಿಡಿ ಶಾಪ್ ಹಾಕಿ ತಮ್ಮ ತಮ್ಮ ಮನೆಗೆ ಮರಳುತ್ತಿದ್ದಾರೆ. ಈ ಪರಿಸ್ಥಿತಿ ಕಳೆದ ೯-೧೦ ತಿಂಗಳುಗಳಿಂದ ನಡೆಯುತ್ತಿದೆ. ಕಾರಣ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ನೆಟ್‌ವರ್ಕ ಪೂರೈಸಿ ಒಂದು ತಿಂಗಳ ಕಾಲಾವಕಾಶ ಕಲ್ಪಿಸಿಕೊಡಬೇಕು. ರೇಷನ್ ಕಾರ್ಡ ಹೆಚ್ಚಿಗೆ ಆದಲ್ಲಿ ಸರ್ಕಾರಕ್ಕೆ ಹೊರೆ ಆಗುತ್ತದೆ ಎಂಬ ದುಷ್ಟ ವಿಚಾರದಿಂದ ಸಾರ್ವಜನಿಕರಿಗೆ ಮೂರ್ಖರನ್ನಾಗಿ ಮಾಡಲು ಮುಂದುವರೆದಿದ್ದೆ ಆದರೆ ಗದಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್. ಕೊಪ್ಪಳರವರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರೇಷನ್ ಕಾರ್ಡ ತಿದ್ದುಪಡಿಗೆ ಸರಿಯಾದ ನೆಟವರ್ಕ ಕಲ್ಪಿಸಿ : ಜಿಲ್ಲಾ ಜೆಡಿಎಸ್ ಆಗ್ರಹ
ಕರುನಾಡು ಘರ್ಜನೆ ಸುದ್ದಿ ಗದಗ ೦೩: ದಿ. ೦೨-೦೭-೨೦೨೪, ೦೩-೦೭-೨೦೨೪ ಈ ಎರಡು ದಿನಗಳ ಕೆಲವು ಗಂಟೆಗಳ ಮಾತ್ರ ಹೊಸ ರೇಷನ್ ಕಾರ್ಡಗೆ ಅರ್ಜಿ ಹಾಗೂ ತಿದ್ದುಪಡಿಗೆ ಸರ್ಕಾರದವರು ಅವಕಾಶ ಮಾಡಿಕೊಟ್ಟಿದ್ದು ಸಾರ್ವಜನಿಕರು ಬೆಳಿಗ್ಗೆ ೫ ಗಂಟೆಯಿAದ ತಮ್ಮ ಚಿಕ್ಕಮಕ್ಕಳನ್ನು ತೆಗೆದುಕೊಂಡು…