ಕರುನಾಡು ಘರ್ಜನೆ ಸುದ್ದಿ ಗದಗ ೩: ಸಾರ್ವಜನಿಕರಿಗೆ ಉಪಯೋಗವಾಗಲು ಮತ್ತು ಬಡಜನರ ಹಸಿವು ನೀಗಿಸಲೆಂದು ಸ್ವತಂತ್ರö್ಯ ನಂತರ ಸರ್ಕಾರ ರೇಷನ್ ನೀಡುವ ಸಂಪ್ರದಾಯ ಮುಂದುವರೆಸುತ್ತಾ ಬಂದಿದ್ದು ಅನೇಕ ಬಡ ಕುಟುಂಬಗಳು, ರೈತ ಕುಟುಂಬಗಳು, ಕೃಷಿ ಕೂಲಿ ಕಾರ್ಮಿಕರು ಇದರ ಮೇಲೆ ಆಶ್ರಯ ಪಡೆಯುತ್ತಿದ್ದಾರೆ. ಆದರೆ ಈ ೯-೧೦ ತಿಂಗಳಿನಿAದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ರೇಷನ್ ಕಾರ್ಡ ಪಡೆಯುವುದೇ ಸಾರ್ವಜನಿಕರಿಗೆ ಗಗನ ಕುಸುಮವಾಗಿದೆ. ಸರ್ಕಾರ ಸಾರ್ವಜನಿಕರ ರೇಷನ್ ಕಾರ್ಡ ತಿದ್ದುಪಡಿ, ಹೊಸ ಅರ್ಜಿಗೆ ತಿಂಗಳಲ್ಲಿ ಕೇವಲ ೨ ದಿನಗಳ ಮಾತ್ರ ಅವಕಾಶ ಕಲ್ಪಿಸಿಕೊಡುತ್ತಿದ್ದೆ. ಆದರೆ ಆ ಎರಡು ದಿನ ಸಾರ್ವಜನಿಕರಿಗೆ ಸರದಿಯಲ್ಲಿ ನಿಲ್ಲಿಸಿ ಸರಿಯಾಗಿ ನೆಟ್‌ವರ್ಕ ನೀಡುತ್ತಿಲ್ಲ ಸಂಯೋಗ ಎನ್ನುವಂತೆ ಎರಡು ದಿನಗಳಲ್ಲಿ ವಿದ್ಯುತ್ ಆಗಾಗ ಹೋಗುವುದು ಬರುವುದು ಮಾಡುತ್ತಿರುವುದು ನೋಡಿದರೆ ಸರ್ಕಾರ ಸಾರ್ವಜನಿಕರಿಗೆ ಭರವಸೆ ಹುಟ್ಟಿಸಿ ಹಿಂಬಾಗಿಲಿನಿAದ ಸಾರ್ವಜನಿಕರ ರೇಷನ್ ಕಾರ್ಡ ಆಗದಂತೆ ತಂತ್ರಗಾರಿಕೆ ಹೂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ರೇಷನ್ ಕಾರ್ಡ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಮತ್ತು ತಮ್ಮ ಮಕ್ಕಳ ಶಿಕ್ಷಣ ಪಡೆಯಲು, ಇನ್ನಿತರ ಯಾವುದೇ ಕೆಲಸಕ್ಕಾಗಿ ರೇಷನ್ ಕಾರ್ಡ ಅವಶ್ಯವಾಗಿರುವುದರಿಂದ ಕಾರ್ಡುಗಳನ್ನು ನೆಟವರ್ಕ ನೀಡುತ್ತಿರುವುದ ಎದ್ದು ಕಾಣುತ್ತದೆ. ಈ ರೇಷನ್ ಕಾರ್ಡ ಸಾರ್ವಜನಿಕರು ಬಡವರು, ತಮ್ಮ ದಿನನಿತ್ಯ ಕೆಲಸಗಳನ್ನು ಮತ್ತು ಕೂಲಿಯನ್ನು ತ್ಯಜಿಸಿ ಹಾಗೂ ರೈತರು ಮಳೆಗಾಲದ ಈ ದಿನಗಳಲ್ಲಿ ಬಿತ್ತುವ ಕೆಲಸಗಳನ್ನು ಬಿಟ್ಟು ರೇಷನ್ ಕಾರ್ಡ ಪಡೆಯಲು ದಿನ ಕಳೆಯುತ್ತಿದ್ದಾರೆ. ಕಾರಣ ಮಕ್ಕಳಿಗೆ ಶಾಲೆಗೆ ಕಳುಹಿಸುವುದು, ಆಸ್ಪತ್ರೆಗೆ ಹೋಗುವುದು ತಪ್ಪುತ್ತಿರುವುದರಿಂದ ಸರ್ಕಾರದವರು ಆದಷ್ಟು ಬೇಗನೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆಟ್‌ವರ್ಕನ್ನು ಸರಿಪಡಿಸಿ ಸರಾಗವಾಗಿ ಬಡವರ ಕೆಲಸಗಳು ನೀಗುವಂತೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರೈತ ವಿಕಾಸ ಸಂಘ (ರಿ) ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಶಿರಾಜ ಲಕ್ಕುಂಡಿಯವರು ಆಗ್ರಹಿಸಿದ್ದಾರೆ.
ಗದಗ | ರೇಷನ್ ಕಾರ್ಡ ತಿದ್ದುಪಡಿ ಮುಗಿಯದ ಗೋಳು: ಸಿರಾಜ್ ಲಕ್ಕುಂಡಿ
ಕರುನಾಡು ಘರ್ಜನೆ ಸುದ್ದಿ ಗದಗ ೩: ಸಾರ್ವಜನಿಕರಿಗೆ ಉಪಯೋಗವಾಗಲು ಮತ್ತು ಬಡಜನರ ಹಸಿವು ನೀಗಿಸಲೆಂದು ಸ್ವತಂತ್ರö್ಯ ನಂತರ ಸರ್ಕಾರ ರೇಷನ್ ನೀಡುವ ಸಂಪ್ರದಾಯ ಮುಂದುವರೆಸುತ್ತಾ ಬಂದಿದ್ದು ಅನೇಕ ಬಡ ಕುಟುಂಬಗಳು, ರೈತ ಕುಟುಂಬಗಳು, ಕೃಷಿ ಕೂಲಿ ಕಾರ್ಮಿಕರು ಇದರ ಮೇಲೆ ಆಶ್ರಯ…