ಕರುನಾಡು ಘರ್ಜನೆ ಸುದ್ದಿ ಗದಗ-೦೩ : ಡಾ. ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಪ್ರತಿಶತ ಶೇ. ೭೦% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸಾದ ಗದಗ ಜಿಲ್ಲೆಯ ಎಲ್ಲ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸ್ವೀಕರಿಸುವ ದಿನಾಂಕ ೨೯-೦೬-೨೦೨೪ ರೊಳಗೆ ನೀಡಲು ಸೂಚಿಸಲಾಗಿತ್ತು, ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅರ್ಜಿ ಸ್ವೀಕರಿಸುವ ದಿನಾಂಕವನ್ನು ೧೦-೦೭-೨೦೨೪ ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿಯ ಜೊತೆಗೆ ತಮ್ಮ ಶಾಲೆ, ಕಾಲೇಜುಗಳಲ್ಲಿ ನೀಡಿರುವ ಅಧಿಕೃತ ಅಂಕಪಟ್ಟಿಯ ಝರಾಕ್ಸ ಪ್ರತಿ, ಎರಡು ಪಾಸಪೋರ್ಟ ಸೈಜ್ ಭಾವಚಿತ್ರ, ಆಧಾರ ಕಾರ್ಡ್ ಝರಾಕ್ಸ್ ಪ್ರತಿ ಮತ್ತು ತಮ್ಮ ಮೊಬೈಲ್ ನಂಬರ ಜೊತೆ ತಮ್ಮ ವಿಳಾಸದ ಜೊತೆಗೆ ಅರ್ಜಿಗಳನ್ನು ಗದಗ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿರುವ ಅಂಗಡಿ ನಂ. ೫ ರ ಶಿರಸಂಗಿ ಮೊಬೈಲ್ ಅಂಗಡಿಯಲ್ಲಿ ದಿನಾಂಕ ೧೦-೦೭-೨೦೨೪ ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.
ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಪ್ರತಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಡಾ. ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ತಮ್ಮಣ್ಣವರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: ೮೦೭೩೯೦೯೨೬೨, ೭೬೧೯೪೫೪೫೮೩, ೮೯೫೧೫೩೭೦೧೯, ೮೭೪೬೦೧೪೧೧೫ ಈ ನಂಬರಿಗೆ ಸಂಪರ್ಕಿಸಬಹುದಾಗಿದೆ .