ಕರುನಾಡು ಘರ್ಜನೆ ಸುದ್ದಿ ಗದಗ ಗೂಡ್ಸಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲಕರ ಸಂಘದ ವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಾರಿ ಮಾಲೀಕರು ಕುಂದುಕೊರತೆ ಬಗ್ಗೆ ಗದಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯ, ಜಿಲ್ಲಾ ವರ್ತಕರ ಸಂಘದವರು ಸ್ಪಂದಸದೇ ಕಾರಣ ದಿನಾಂಕ 19-08-2024 ರಿಂದ ಲಾರಿ ಮಾಲೀಕರು ತಮ್ಮ ಸ್ವಇಚ್ಛೆಯಿಂದ ಲಾರಿ ಮುಷ್ಕರವನ್ನು ಹಮ್ಮಿಕೊಂಡಿರುವ ಬಗ್ಗೆ ಮನವಿ ಸಲ್ಲಿಸಿದರು.
ಈ ಮನವಿ ಸಲ್ಲಿಸಿ ಸಂಘದ ಉಪಾಧ್ಯಕ್ಷರಾದ ಮಹಮ್ಮದಆಶೀಫ ಆರ್. ಡಂಬಳ ಮಾತನಾಡಿ ದಿನದಿಂದ ದಿನಕ್ಕೆ ಡಿಸೇಲ್, ಟೋಲ್ ಮತ್ತು ವಾಹನಗಳ ಬಿಡಿ ಭಾಗಗಳು, ಇನ್ಸೂರೆನ್ಸ್, ವಾಹನ ತೆರಿಗೆ ಏರುತ್ತಿವೆ. ಆದರೆ ನಮ್ಮ ಲಾರಿಗಳ ಭಾಡಿಗೆಯು ಯಾವುದೇ ಏರಿಕೆಯನ್ನು ಕಾಣದೆ ಯಥಾಸ್ಥಿತಿಯಲ್ಲಯೇ ಮುಂದುವರೆಯುತ್ತಿವೆ. ಈ ವಿಷಯದ ಕುರಿತು ಗದಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮತ್ತು ಗದಗ ಜಿಲ್ಲಾ ವರ್ತಕರ ಸಂಘದೊಂದಿಗೆ ಹಲವಾರು ಬಾರಿ ಚರ್ಚಿಸಿದರೂ ಕೂಡಾ ಯಾವುದೇ ತರಹದ ಪರಿಹಾರ ಕಂಡುಬಂದಿರುವುದಿಲ್ಲ. ಲಾರಿ ಮಾಲೀಕರಿಗೆ ಸರಿಯಾಗಿ ಬಾಡಿಗೆ ನಿಗದಿ ಮತ್ತು ದುಡಿಮೆ ತಕ್ಕ ಪ್ರತಿಫಲ ಸಿಗುವವರೆಗೆ ನಮ್ಮ ಸಂಘದಿಂದ ದಿನಾಂಕ 19-08-2024 ರಿಂದ ಲಾರಿ ಮುಷ್ಕರವನ್ನು ಲಾರಿ ಮಾಲೀಕರು ಸ್ವಇಚ್ಛೆಯಿಂದ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹುಲಕೋಟಿ, ಸದಸ್ಯರಾದ ಇಮ್ರಾನ್ ಸೊಲ್ಲಾಪುರಿ, ತನ್ವೀರ ರೋಣ, ಶಿವು ಮಂಟೂರ, ಶರಣಪ್ಪ ಹಳ್ಳಿಕೇರಿ, ರುದ್ರಪ್ಪ, ಅನಿಲ ಲಕ್ಕುಂಡಿ, ರಜಾಕಸಾಬ ಬೆಟಗೇರಿ, ಮಕ್ತೂಮಸಾಬ ಪಾಪಣ್ಣವರ ಸೇರಿದಂತೆ ಅನೇಕ ಲಾರಿ ಮಾಲೀಕರು ಉಪಸ್ಥಿತರಿದ್ದರು.