ಕರುನಾಡು ಘರ್ಜನೆ ಸುದ್ದಿ ಗದಗ 07: 25 ವರ್ಷಗಳಿಂದ ಸವಿತಾ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಹಾಗೂ ಉತ್ತರ ಕರ್ನಾಟಕ ಭಾಗದ ಸಮರ್ಥ ಯುವ ಸೇವಕ ಹಾಗೂ ಸವಿತಾ ಸಮಾಜದ ಏಕೈಕ ಯುವ ಮುಖಂಡರಾದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರಿಗೆ ಈ ಬಾರಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಗದಗ ಬೆಟಗೇರಿಯ ಸವಿತಾ ಸಮಾಜ ಮತ್ತು ಮರಾಠ ಕ್ಷೌರಿಕ ಸಮಾಜಗಳ ಐದು ದೈವದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು ಜತೆಗೂಡಿಕೊಂಡು ಕಾಂಗ್ರೇಸ್ ಪಕ್ಷದ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರ ಮುಖಾಂತರ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು
ಉತ್ತರ ಕರ್ನಾಟಕ ಭಾಗದ ಸವಿತಾ ಸಮಾಜದ ಮುಖಂಡರಿಗೆ ಇಲ್ಲಿವರೆಗೂ ಯಾವುದೇ ರೀತಿಯ ರಾಜಕೀಯ ಪಕ್ಷಗಳು ಸ್ಥಾನಮಾನ ನೀಡದೆ ಕಡೆಗಣಿಸುತ್ತಾ ಬಂದಿವೆ. ಹಾಗಾಗಿ ಕಾಂಗ್ರೆಸ್ ಸರಕಾರ ಅವಧಿಯಲ್ಲಿ ಸವಿತಾ ಸಮಾಜದ ಬಗ್ಗೆ ಹಾಗೂ ಕಾಂಗ್ರೇಸ್ ಪಕ್ಷದ ಬಗ್ಗೆ ಅತ್ಯಂತ ಕಾಳಜಿ ಈರೂವ ಹುಟ್ಟು ಹೋರಾಟಗಾರ, ಕ್ಷೌರಿಕರ ಹಿತಕ್ಕಾಗಿ ಸರಕಾರದ ಗಮನ ಸೆಳೆಯುವಂತಹ ಅನೇಕ ರೀತಿಯಲ್ಲಿ ಸಭೆ ಸಮಾರಂಭ ಸೇರಿದಂತೆ ಹಲವು ಹೋರಾಟಗಳನ್ನು ಮಾಡುತ್ತಾ ಸಮಾಜ ಹಾಗೂ ಜನಪರವಾದ ಕೆಲಸಗಳನ್ನು ಮಾಡುತ್ತಿರುವ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಲು ನಮ್ಮ ಸಮಾಜದ ಪರವಾಗಿ ತಮ್ಮ ತಂದೆಯವರ ಗಮನಕ್ಕೆ ತಂದು ಗದಗ ಸವಿತಾ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಲು ಮುಂದಾಗಬೆಕೇಂದು ಕಾಂಗ್ರೇಸ್ ಪಕ್ಷದ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಮನವಿ ಮಾಡಿ ಅವರ ಮೂಲಕ ಸಚೀವರಿಗೆ ಒತ್ತಾಯಿಸಿದರು
ಅನೇಕ ವರ್ಷಗಳಿಂದ ಸವಿತಾ ಸಮಾಜದ ವತಿಯಿಂದ ಸಮಾಜ ಸೇವೆ, ಹೋರಾಟಗಳು ಮಾಡುವ ಜತೆಗೆ ಅವರಿವರೇನ್ನದೆ ಸಮಾಜ ಬಾಂಧವರ ಕಷ್ಟ ಸುಖಗಳಲ್ಲಿ ಭಾಗವಹಿಸಿದಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿರುವ ಸವಿತಾ ಕ್ಷೌರಿಕ ಸಮಾಜ ಬಾಂಧವರ ಅತ್ಯಂತ ಕಡು ಬಡತನ ಹಾಗು ಹಿನಾಯ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅನುಭವ ಹೊಂದಿರುವುದರಿಂದ ಸವಿತಾ ನಿಗಮ ಅಧ್ಯಕ್ಷ ಸ್ಥಾನಕ್ಕೆ ಗದಗ ಕೃಷ್ಣಾ ಎಚ್ ಹಡಪದ ಅರ್ಹ ವ್ಯಕ್ತಿ’ ಹನಮಂತಪ್ಪ ರಾಂಪೂರಸವಿತಾ ಸಮಾಜದ ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಗದಗ ಬೆಟಗೇರಿಯ ಸವಿತಾ ಸಮಾಜ ಮತ್ತು ಮರಾಠ ಕ್ಷೌರಿಕ ಸಮಾಜದ ಒಟ್ಟು ಐದು ದೈವದ ಪಧ್ಯಕ್ಷರುಗಳು ಪದಾಧಿಕಾರಿಗಳು ಗುರು ಹಿರಿಯರು ಹಾಗೂ ಸಮಾಜದ ಯುವ ನಾಯಕರುಗಳು ಉಪಸ್ತಿತರಿದ್ದರು