ಕರುನಾಡು ಘರ್ಜನೆ ಸುದ್ದಿ ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ.ಎನ್.ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.ಕಾರ್ಕಳ, ಹೆಬ್ರಿ ಪರಿಸರದಲ್ಲಿ ಕೆಲದಿನಗಳಿಂದ ನಕ್ಸಲ್ ಓಡಾಟ ಪತ್ರೆಯಾಗಿತ್ತು. ಈ ಹಿನ್ನಲೆಯಲ್ಲಿ ಎ.ಎನ್.ಎಫ್ ಕೂಂಬಿಂಗ್ ಬಿಗಿಗೊಳಿಸಿತ್ತು. ಸೋಮವಾರ ರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎ.ಎನ್.ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ದಾಳಿಗೆ ಸಿಲುಕಿ ವಿಕ್ರಂ ಗೌಡ ಬಲಿಯಾಗಿದ್ದಾನೆ.ಇನ್ನು ವಿಕ್ರಮ್ ಗೌಡ ಜೊತೆಗಿದ್ದ ವನಜಾಕ್ಷಿ, ಸುಂದರಿ, ಲತಾ ಎಸ್ಕೇಪ್ ಆಗಿರೋ ಶಂಕೆ ವ್ಯಕ್ತವಾಗಿದೆ. ಇನ್ನುಳಿದವರು, ಬೆಳ್ತಂಗಡಿಯ ಕೂತ್ಲೂರಿನಲ್ಲಿ ಓಡಾಡಿರೋ ಮಾಹಿತಿ ಮೇರೆಗೆ ANF ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಈಗಾಗಲೇ ಎನ್ಕೌಂಟರ್ ಸ್ಥಳಕ್ಕೆ FSL ಟೀಂ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸ್ಥಳಕ್ಕೆ ಆಂತರಿಕ ಭದ್ರತೆ IGP ಡಿ.ರೂಪಾ ಭೇಟಿ ನೀಡಿ, ಎನ್ಕೌಂಟರ್ ಬಗ್ಗೆ ANF ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಹೆಬ್ರಿಯಲ್ಲಿ ಮಾತನಾಡಿದ ಆಂತರಿಕ ಭದ್ರತಾ IGP ಡಿ. ರೂಪಾ ಅವರು, ರಾಜ್ಯದಲ್ಲಿ ಇನ್ನೂ ನಾಲ್ಕೈದು ಆ್ಯಕ್ಟಿವ್ ನಕ್ಸಲ್ ಇದ್ದಾರೆ. ANF ಆಪರೇಷನ್ ಸತತವಾಗಿ ಜಾರಿಯಲ್ಲಿದೆ.
ನಕ್ಸಲರು ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಕಾದು ನೋಡಬೇಕು. ಬೆಂಗಳೂರು KSISF 75 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಶಿವಮೊಗ್ಗದಿಂದ ಸಿಬ್ಬಂದಿ ಕರೆಸಿಕೊಂಡಿದ್ದೇವೆ. ತನಿಖೆ ಹಿನ್ನೆಲೆ ವಿಕ್ರಂಗೌಡ ಎನ್ಕೌಂಟರ್ ಆಪರೇಷನ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ವಿಕ್ರಂಗೌಡ @ ಶ್ರೀಕಾಂತ್ ಮೋಸ್ಟ್ ವಾಂಟೆಡ್ ನಕ್ಸಲ್. ಕಳೆದ ರಾತ್ರಿ ANF ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ಆಗಿತ್ತು. ಪ್ರಕರಣದ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ.
ವಿಕ್ರಂಗೌಡ @ ಶ್ರೀಕಾಂತ್ ಮೇಲೆ 61 ಕೇಸ್ ಇದೆ. ಪಿಟ್ಟಿಕೇಸ್, ಮರ್ಡರ್, ಸೇರಿದಂತೆ ಹಲವು ಕೇಸ್ ಇವೆ. ಕೇರಳದಲ್ಲಿ 19 ಕೇಸ್ ದಾಖಲಾಗಿದ್ದವು. ಈ ಕಾರ್ಯಾಚರಣೆ ಮುಖ್ಯ ರೂವಾರಿ ಜಿತೇಂದ್ರದಯಾಂ . ಒಟ್ಟು 10 ದಿನದ ಸತತ ಕಾರ್ಯಾಚರಣೆ ಮಾಡಿದ್ದೇವೆ. ಕಾಡಿನಲ್ಲಿ ನವೆಂಬರ್ 10ರಿಂದ ಕೂಂಬಿಂಗ್ ಮಾಡುತ್ತಿದ್ದೇವೆ. ISD ಡಿಜಿಪಿ ಪ್ರಣಬ್ ಮೋಹನ್ ಕಾರ್ಯಾಚರಣೆ ಭಾಗವಾಗಿದ್ದರು ಎಂದು ಹೆಬ್ರಿಯಲ್ಲಿ ಆಂತರಿಕ ಭದ್ರತಾ IGP ಡಿ. ರೂಪಾ ತಿಳಿಸಿದ್ದಾರೆ.