ಕರುನಾಡು ಘರ್ಜನೆ ಸುದ್ದಿ ಗದಗ ೬: ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೮ನೇ ಪುಣ್ಯತಿಥಿ. ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನಿಟ್ಟುಸಿರು ಬಿಡುತ್ತಿದ್ದಾರೆ. ನೆಮ್ಮದಿಯ ೧೮೯೧ರ ಏಪ್ರಿಲ್ ೧೪ರಂದು ಜನಿಸಿದ ಬಾಬಾ ಸಾಹೇಬರು ಅಸಮಾನತೆ ಮೇಲೈಸುತ್ತಿದ್ದ ಕಾಲದಲ್ಲಿ ತಾನು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಆಗಬಾರದು ಅನ್ನುವ ದೃಷ್ಟಿಯಿಂದ ನಿರಂತರವಾಗಿ ಅಧ್ಯಯನ ಮಾಡಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಮಂಡನೆ ಮಾಡಿದವರು. ಈ ನೆಲದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಸ್ಪಷ್ಟವಾದ ಅರಿವಿದ್ದ ಪರಿಣಾಮ ದೇಶಕ್ಕೆ ಬಲಿಷ್ಟ ಮತ್ತು ಶ್ರೇಷ್ಟ ಸಂವಿಧಾನವನ್ನು ಜೀವನಪರ್ಯಂತ ನೀಡಿದರು. ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಬಾಬಾಸಾಹೇಬರು ಡಿಸೆಂಬರ್ ೬, ೧೯೫೬ ರಂದು ದೇಹತ್ಯಾಗ ಮಾಡಿದರು.
ಮಹಾಪರಿನಿರ್ವಾಣ ಎಂದರೆ ಮಹಾಪರಿನಿರ್ವಾಣವು ಬೌದ್ಧಧರ್ಮದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಇದರ ಅರ್ಥ “ಸಾವಿನ ನಂತರ ನಿರ್ವಾಣ”. ಪರಿನಿರ್ವಾಣ ಅನ್ನು ಪಾಲಿಯಲ್ಲಿ ಪರಿನಿಬ್ಬನ ಎಂದು ಬರೆಯಲಾಗಿದೆ. ಪಾಲಿ ಭಾಷೆಯು ಭಾರತೀಯ ಖಂಡಕ್ಕೆ ಸ್ಥಳೀಯವಾಗಿದೆ. ಬೌದ್ಧ “ಮಹಾಪರಿನಿಬ್ಬನ ಸುತ್ತ ವಯಸ್ಸಿನಲ್ಲಿ ಭಗವಾನ್ ಮರಣವನ್ನು ಮಹಾಪರಿನಿರ್ವಾಣವೆಂದು ಪರಿಗಣಿಸುತ್ತದೆ.
ಈ ಸಂದರ್ಭದಲ್ಲಿ ಹಾಜರಿದ್ದವರು ಚಂದ್ರಕಾAತ ಚವ್ಹಾಣ, ರಮೇಶ್ ರಾಥೋಡ, ಶಿವಣ್ಣ ವಾಲ್ಮೀಕಿ, ವಿಠ್ಠಲ್ ಬೆಂತೂರ, ಮೇಘರಾಜ್ ಮೇಲ್ಮನಿ, ರಾಜು ತಳವಾರ್, ಸಂತೋಷ್ ಇಮಾಮಸಾಬ ಮಜ್ಜೂರ, ದಾದು ಮುಂಡರಗಿ, ಮೈಲಾರಿ ಹಾಗೂ ಇತರರು ಉಪಸ್ಥಿತರಿದ್ದರು.