ಕರುನಾಡು ಘರ್ಜನೆ ಸುದ್ದಿ : ಗದಗ ನಗರದ ತರಕಾರಿ ಮಾರುಕಟ್ಟೆಗೆ ಈಗ ಚೀನಾ ಬೆಳ್ಳುಳ್ಳಿ ಎಂಟ್ರಿಕೊಟ್ಟಿದೆ. ಈಗಾಗಲೇ ದೇಶಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಯ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಣಾಮವಾಗಿ ದೇಶಿ ಬೆಳ್ಳುಳ್ಳಿ ಮಾರಾಟಗಾರರಿಗೆ ತೊಂದರೆಯಾಗಿದೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಗೋಪಾಲ ಕೋಣೆಮನಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,
ಸದ್ಯ ಬೆಳ್ಳುಳ್ಳಿ ದರ 300 ರಿಂದ 350 ರೂ. ತಲುಪಿದೆ. ಇಷ್ಟೊಂದು ದುಬಾರಿಯಾಗಿರುವ ಬೆಳ್ಳುಳ್ಳಿ ಖರೀದಿ ಮಾಡುವುದೇ ಗ್ರಾಹಕರಿಗೆ ಕಷ್ಟವಾಗಿದೆ. ಇದೇ ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದನ್ನು ಗಮನಿಸಿದ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಈ ಚೀನಾದ ಬೆಳ್ಳುಳ್ಳಿಯ ಮಾರಾಟ ಗದಗ ಕಾಯಿಪಲ್ಯ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಗಪ್ ಚುಪ್ ಆಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಚೀನಾ ಬಳ್ಳೊಳ್ಳಿ ಆಹಾರ ಇಲಾಖೆಗೆ ತೆಗೆದುಕೊಂಡು ಹೋದಾಗ ಇದು ಬಿಹಾರದ ಬಳ್ಳೋಳ್ಳಿ. ಅರ್ಧ ಕೆಜಿ ತನ್ನಿ ಆಮೇಲೆ ಲ್ಯಾಬ್ ಟೆಸ್ಟಿಂಗ್ ಕಳಿಸಲಾಗಯವುದು ಎಂದು ಬೇಜವಾಬ್ದಾರಿ ಮಾತನಾಡುತ್ತಾರೆ. ಕೂಡಲೇ ಈ ಕುರಿತು ಸಮಗ್ರ ರೀತಿಯಲ್ಲಿ ತನಿಖೆ ಆಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.
10 ವರ್ಷಗಳ ಹಿಂದೆಯೇ ನಿಷೇಧ
ಈಗಾಗಲೇ ಸರಕಾರವು ಚೀನಾ ದೇಶ ಮತ್ತು ರಾಜ್ಯದಲ್ಲಿ ಚೀನಾ ಬೆಳ್ಳುಳ್ಳಿ ಬಳಕೆಗೆ ನಿಷೇಧ ಹೇರಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುತ್ತಾರೆ. ಬೆಳ್ಳುಳ್ಳಿ ಸಂಸ್ಕರಣೆಗೂ ಬಳಷ್ಟು ರಾಸಾಯನಿಕ ಉಪಯೋಗಿಸುತ್ತಾರೆ. ಅವುಗಳ ಸೇವನೆಯಿಂದ ಹೊಟ್ಟೆ ಹುಣ್ಣು, ಸೋಂಕು ಇತ್ಯಾದಿ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಮೂತ್ರಪಿಂಡಗಳ ಆರೋಗ್ಯದ ಮೇಲೂ ಚೀನಾ ಬೆಳ್ಳುಳ್ಳಿ ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದೆಯೇ ಚೀನಾ ಬೆಳ್ಳುಳ್ಳಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.