ಕರುನಾಡು ಘರ್ಜನೆ ಸುದ್ದಿ: ಗದಗ 19 ಸುಮಾರು 50 ವರ್ಷ ಕಳೆದರೂ ರಾಜಕೀಯ ಅಧಿಕಾರಗಳು ಗದಗ ಸವಿತಾ ಸಮಾಜಕ್ಕೆ ದೊರೆತಿಲ್ಲ, ಪ್ರಾತಿನಿಧ್ಯ ಕೊರತೆಯಿಂದ ಗದಗ ಸವಿತಾ ಸಮಾಜದ ಅಭಿವೃದ್ಧಿಗೆ ಕುಂಠಿತವಾಗುತ್ತಿದೆ ಎಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಉಪಾಧ್ಶಕ್ಷರಾದ ಜಂಮಣ್ಣ ಕಡಮೂರ ಹೇಳಿದರು
ಅವರು ಪತ್ರಿಕಾ ಹೆಳಿಕೆಯಲ್ಲಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲು ಗದಗ ಸವಿತಾ ಸಮಾಜಕ್ಕೆ ಟಿಕೆಟ್ ನೀಡದೆ ಮತ್ತು ವಿವಿಧ ಇಲಾಖೆಗಳಿಗೆ ಹಾಗೂ ನಗರಸಭೆಗೆ ಸಂದಂದಿಸಿದ ಅಧೀಕಾರದ ನಾಮನಿರ್ದೆಶನ ಮಾಡದೆ ಇರುವುದರಿಂದ ಗದಗ ಸವಿತಾ ಸಮಾಜವು ರಾಜಕೀಯ ಕ್ಷೇತ್ರದಿಂದ ಬಹಳಷ್ಟು ಹಿಂದುಳಿದೆ.
ಮತದಾನ ಮಾಡುವುದಕ್ಕೆ ಮಾತ್ರ ಸವಿತಾ ಜನಾಂಗವು ಬೇಕು, ಆದರೆ ಯಾವುದೇ ಅಧಿಕಾರ ನೀಡದೆ ಇಲ್ಲದ ಪರಿಸ್ಥಿತಿ ಗದಗ ಸವಿತಾ ಸಮಾಜಕ್ಕೆ ಇದೆ.
ಗದಗ-ಬೆಟಗೇರಿ ನಗರಸಭೆಗೆ ಒಬ್ಬನೇ ಒಬ್ಬ ಸವಿತಾ ಸಮಾಜ ಜನಾಂಗದ ಚುನಾಯಿತ ಸದಸ್ಯರು ಅತವಾ ನಾಮನಿರ್ದೆಶನ ಸದಶ್ಶರು ಇಲ್ಲದೆ ಇರುವುದೂ ಸಹ ದುರ್ದೈವದ ಸಂಗತಿಯಾಗಿದೆ ಎಂದು ಜಂಮಣ್ಣ ಕಡಮೂರ ಅವರು ಬೇಸರ ವ್ಶಕ್ತ ಪಡಿಸಿ ಮಾತನಾಡಿದರು ಹಿರಿಯ ಸಚೀವ ಎಚ್ ಕೆ ಪಾಟೀಲರಲ್ಲಿ ಮನವಿ ಗದಗ ಸವಿತಾ ಸಮಾಜದವರಾದ ಕೃಷ್ಣಾ ಎಚ್ ಹಡಪದ ಅವರು ಸುಮಾರು 24 ವರ್ಷಗಳಿಂದ ಸವಿತಾ ಸಮಾಜದ ವತಿಯಿಂದ ಸಮಾಜ ಸೇವೆ ಹೋರಾಟಗಳು ಹಮ್ಮಿಕೊಳ್ಳುತ್ತಾ ಗದಗ ಬೆಟಗೇರಿ ಅಸ್ಟೆ ಅಲ್ಲ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಪ್ರವಾಸ ಮಾಡಿ ಸಮಾಜದ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಕುಲ ಬಾಂಧವರ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತಿರುವ ಉತ್ತರ ಕರ್ನಾಟಕ ಭಾಗದ ಸಮರ್ಥ ಸಂಘಟಿಕರಾಗಿ ಪ್ರಸ್ತುತ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ತಮ್ಮ ತನು ಮನ ಧನ ಸಹಾಯ ಸಹಕಾರದಿಂದ ನಿರಂತರವಾಗಿ ಸಮಾಜ ಸೇವೆ ಸಲ್ಲಿಸುತ್ತಿರುವ ಗದಗ ಕೃಷ್ಣಾ ಎಚ್ ಹಡಪದ ಅವರು ಸನ್ಮಾನ್ಶ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರ ಆಪ್ತರಲ್ಲಿ ಒಬ್ಬರಾಗಿದ್ದು ಸರ್ವ ಸಮುದಾಯದವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ವಿವಿಧ ಸಂಘಟನೆಗಳಲ್ಲೂ ಸಹ ಅಧ್ಶಕ್ಷರಾಗಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಸವಿತಾ ಸಮಾಜದಲ್ಲಿ ಹಾಗೂ ವಿವಿಧ ಸಂಘಟನೆಗಳಲ್ಲಿ ಸಹ ಸೈ ಎನಿಸಿಕೊಂಡ ಗದಗ ಸವಿತಾ ಸಮಾಜದ ಏಕೈಕ ಯುವ ಮುಖಂಡರಾದ ಗದಗ ಕೃಷ್ಣಾ ಎಚ್ ಹಡಪದ ಇವರಿಗೆ ಈ ಬಾರಿ ಕರ್ನಾಟಕ ರಾಜ್ಶ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನಾಗಲಿ ಅತವಾ ಗದಗ ಜಿಲ್ಲೆಯ ಬಗರ ಹುಕುಂ ಸಾಗವಳಿ ಅಧ್ಯಕ್ಷ ಸ್ಥಾನ ನವನ್ನಾಗಲಿ ಈ ಎರಡು ಉನ್ನತ ಸ್ಥಾನಗಳಲ್ಲಿ ಯಾವುದಾದರು ಒಂದು ಸ್ಥಾನವನ್ನು ನೀಡಬೇಕೆಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಉಪಾಧ್ಯಕ್ಷರಾದ ಜಂಬಣ್ಣ ಕಡಮೂರ ಖಜಾಂಚಿ ಅರೂಣ ರಾಂಪೂರ ಹಿರಿಯರಾದ ಪರಶುರಾಮ ರಾಂಪೂರ ಬಾಲರಾಜ ಕೊಟೇಕಲ್ಲ ಹೇಮಂತ ವಡ್ಡೆಪಲ್ಲಿ ಅವರು ಹಾಗೂ ಇತರರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲಜಿ ಅವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಹೇಬರಿಗೆ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವುಕುಮಾರ ಅವರಿಗೆ ಮತ್ತು ಸಚಿವರಾದ ಶೀವರಾಜ ತಂಗಡಗಿ ಅವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ.