ಕರುನಾಡು ಘರ್ಜನೆ ಸುದ್ದಿ ಲಕ್ಕೋ: ಅರೆಬೆತ್ತಲೆ ಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯ ಮೃತದೇಹವೊಂದು ಮೆಕ್ಕೆ ಜೋಳದ ಗದ್ದೆಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಅಲಪುರ್ ನಲ್ಲಿ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಹಯಾತ್‌ನಗರ ಗ್ರಾಮದ ನಿವಾಸಿ ರಾಘವೇಂದ್ರ ಅವರ ಪತ್ನಿ ರಾಜ ಕುಮಾರಿ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಇಲ್ಲಿನ ಅಲಪುರ್ ನಲ್ಲಿರುವ ಮೆಕ್ಕೆ ಜೋಳದ ಗದ್ದೆಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದನ್ನು ಕಂಡ ಗ್ರಾಮದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಾಜಕುಮಾರಿ ಅವರು ಸೋಮವಾರ ಬೆಳಿಗ್ಗೆ ಲಸಿಕೆ ನೀಡಲು ಕುಂದನಂಗಲ ಗ್ರಾಮಕ್ಕೆ ಹೋಗಿದ್ದರು ಬಳಿಕ ಸಂಜೆ ಆಕೆ ತನ್ನ ಪರಿಚಯಸ್ಥನ ಜೊತೆಗೆ ಸ್ಕೂಟರ್‌ನಲ್ಲಿ ತಮ್ಮ ಹಳ್ಳಿಗೆ ಬಂದಿದ್ದಾರೆ ಅದಾದ ಬಳಿಕ ಆಕೆ ಕಾಣೆಯಾಗಿದ್ದಾಳೆ,ಬಳಿಕ ಅದೇ ದಿನ ರಾತ್ರಿ ಅರೆಬೆತ್ತಲೆ ಸ್ಥಿತಿಯಲ್ಲಿ ರಾಜಕುಮಾರಿ ಅವರ ಮೃತದೇಹ ಜೋಳದ ಗದ್ದೆಯಲ್ಲಿ ಕಂಡುಬಂದಿದೆ ಎಂದು ಹೇಳಿದ್ದಾರೆ.
ರಾಘವೇಂದ್ರ ಅವರು ತಮ್ಮ ಮೊದಲ ಪತ್ನಿ ರೀಟಾ ಅವರ ಮರಣದ ನಂತರ 2003 ರಲ್ಲಿ ರಾಜಕುಮಾರಿಯನ್ನು ಎರಡನೇ ವಿವಾಹವಾದ್ದು ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಇದ್ದಾರೆ. ಅಲ್ಲದೆ ಜಮೀನಿಗೆ ಸಂಬಂಧಿಸಿದಂತೆ ಕುಟುಂಬ ಮತ್ತು ಇತರ ಇಬ್ಬರು ಜನರ ನಡುವಿನ ವಿವಾದವೂ ಇದ್ದು ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರತಿಯೊಂದು ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.
ಬದೌನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಬ್ರಿಜೇಶ್ ಕುಮಾರ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.