ಕರುನಾಡು ಘರ್ಜನೆ ಸುದ್ದಿ ಗದಗ ೨೪: ನಗರದ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಡಾ. ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಾನಂದ ತಮ್ಮಣ್ಣವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಗೌಡ ಪಾಟೀಲರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. 
ಮನವಿ ಸಲ್ಲಿಸಿ ಶಿವಾನಂದ ತಮ್ಮಣ್ಣವರ ಮಾತನಾಡಿ ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತು ಮಾಡಲು ಅನೇಕ ಗುರುತರಗಳ ಆರೋಪಗಳಿದ್ದು ಸಂಸ್ಥೆಯನ್ನು ಆರ್ಥಿಕವಾಗಿ ಹಿಂದುಳಿಯಲು ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡುತ್ತಿರುವರು ಅಕ್ರಮ ನೇಮಕಾತಿ, ಭ್ರಷ್ಟಾಚಾರ, ಟೆಂಡರ್ ಪ್ರಕ್ರಿಯೆಯಲ್ಲಿ ಕಮಿಷನ್ ದಂಧೆ, ಸಿಬ್ಬಂದಿಗಳಿಗೆ ವಿನಾಕಾರಣ ಕಿರುಕುಳ ಮುಂದುವರೆದು ಹಿಟ್ಲರ್ ಆಡಳಿತ ನಡೆಸುತ್ತಿರುವರು
ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದಿರುವ ಅಕ್ರಮ ನೇಮಕಾತಿಗೆ ಸಂಬAಧಿಸಿದತೆ ಗುತ್ತಿಗೆ ನೌಕರನಿಗೆ ಲೆಕ್ಕ ಅಧೀಕ್ಷಕರೆಂದು ಕಾನೂನು ಬಾಹಿರವಾಗಿ ಆದೇಶ ನೀಡಿದ್ದಾರೆ. ಲೆಕ್ಕ ಅದಿಕ್ಷಕರ ಹುದ್ದೆ ಸರ್ಕಾರದ ಮಟ್ಟದಲ್ಲಿ ಆಯ್ಕೆಯಾಗುತ್ತದೆ ಇಲ್ಲಿನ ನಿರ್ದೇಶಕರು ನೇಮಕಾತಿಗೆ ಸಂಬAಧಿಸಿದತೆ ಯಾವುದೇ ಸರ್ಕಾರದ ನಿಯಮಗಳನ್ನು ಪಾಲಿಸಿದೆ ನೇರವಾಗಿ ಅರ್ಹತೆ ಇಲ್ಲದ ಗುತ್ತಿಗೆ ನೌಕರನಿಗೆ ಲೆಕ್ಕ ಅಧೀಕ್ಷಕರ ಹುದ್ದೆಯನ್ನು ನೀಡಿ ಕಾನೂನು ಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಹಾಗೂ ಇನ್ನಿತರ ಪ್ರಯಾಣ ಭತ್ಯೆಯನ್ನು ನೀಡುತ್ತಿರುವರು ನಿರ್ದೆಶಕರ ವಾಹನದಲ್ಲಿ ಓಡಾಟ ಮಾಡಿ ಬಸ್ಸಿನಲ್ಲಿ ಹೊದಂತೆ ಮಾಹಿತಿ ನೀಡಿ ವೇತನ ಹೋರತುಪಡಿಸಿ ಪ್ರತಿ ತಿಂಗಳಿಗೆ ೨೫ ರಿಂದ ೩೦ ಸಾವಿರ ಪ್ರಯಾಣ ಭತ್ಯೆ ತೆಗೆದುಕೊಳ್ಳುತ್ತಿರುವನು.
ಇವನನ್ನು ಕಳೆದ ೮-೧೦ ವರ್ಷಗಳಿಂದ ಲೆಕ್ಕಪತ್ರ ವಿಭಾಗದಲ್ಲಿ ಇಡಲು ಕಾರಣವೆನು ? ಹಿಂದಿನ ನಿರ್ದೇಶಕರು ಇವನ ಲಂಚಾವತಾರ ನೋಡಿ ಅನೇಕ ದೂರುಗಳು ಬಂದ ಕಾರಣ ಸೇವೆಯಿಂದ ೨ ವರ್ಷಗಳ ಕಾಲ ತೆಗೆದು ಹಾಕಲಾಗಿತ್ತು ಈಗಿನ ನಿರ್ದೇಶಕರು ಹಾಗೂ ಇಲ್ಲಿನ ಆರ್ಥಿಕ ಸಲಹೆಗಾರರು ಇವನನ್ನು ಅಕ್ರಮ ನೆಮಕ ಮಾಡಿಕೊಂಡು ಲೆಕ್ಕಪತ್ರ ವಿಭಾಗವನ್ನು ಇವನಿಗೆ ಕೋಡಲು ಕಾರಣ ಏನು? ಗುತ್ತಿಗೆ ನೌಕರನಿಗೆ ಪ್ರಯಾಣ ಭತ್ಯೆ ನೀಡುತ್ತಿರುವುದು ಏಕೆ ? ಇವನ ಮೇಲೆ ಸಾಕಷ್ಟು ಆರೋಪಗಳಿದ್ದರು ಇಲಾಖೆ ತನಿಖೆ ನಡೆಸುತ್ತಿಲ್ಲವೇಕೆ ? ಇವನ ಮೇಲೆ ಅನೇಕ ಗುರುತರ ಆರೋಪಗಳು ಇರುವುದರಿಂದ ವಿಚಾರಣೆಗೆ ಸೂಕ್ತ ಅಧಿಕಾರಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಅವನ ಆಸ್ತಿಗಳ ವಿವರಗಳ ಬಹಿರಂಗ ಪಡಿಸಬೇಕು.
ಮುಂದುವರೆದು ಕ್ಲೇಮ್ ಎಕ್ಸಿಕ್ಯೂಟಿವ್‌ಗಳ ನೇಮಕಾತಿ ಮಾಡಿಕೊಳ್ಳಲು ನಿರ್ದೇಶಕರಿಗೆ ಯಾವುದೇ ಅಧಿಕಾರ ಸರ್ಕಾರ ನೀಡಿರುವುದಿಲ್ಲ ಅರ್ಹತೆ ಇಲ್ಲದ ೩ ಸಿಬ್ಬಂದಿಗಳಿಗೆ ಕ್ಲೇಮ್ ಎಕ್ಸಿಕ್ಯೂಟಿವ್‌ಗಳೆಂದು ಆದೇಶ ಹೊರಡಿಸಿದ್ದಾರೆ ೨೦೧೯ ರಿಂದ ಇವರು -A ಕ್ಲೇಮ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಕೆಲಸ ಮಾಡದೆ ಪ್ರತಿ ತಿಂಗಳಿಗೆ ೨೫೦೦೦/- ವೇತನ ಪಡೆಯುತ್ತಿರುವರ ಈ ಎಲ್ಲ ಕರ್ಮಕಾಂಡಗಳನ್ನು ನಡೆಸುತ್ತಿರುವ ನಿರ್ದೇಶಕರನ್ನು ಸೇವೆಯಿಂದ ವಜಾ ಮಾಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಶಿವಾನಂದ ತಮ್ಮಣ್ಣವರ ಮಾನ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿಯಾದ ನಿತೀಶ್ ಘಟ್ಟೆಣ್ಣವರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.