Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರದ ಕಾರ್ಮೋಡ ಆವರಿಸಿದೆ..? ಉತ್ತರ ಕರ್ನಾಟಕ ಪದವೀಧರ ಒಕ್ಕೂಟ ಆರೋಪ.

ಕರುನಾಡು ಘರ್ಜನೆ ಸುದ್ದಿ ವಿಜಯಪುರ :ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯ ಶಿಕ್ಷಣಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯದ ಶರಣಿ ಮಾತೆ ಅಕ್ಕಮಹಾದೇವಿ ಹೆಸರಿನಲ್ಲಿ 2003 ರಲ್ಲಿ ಸ್ಥಾಪನೆ ಆಯಿತು ಹಾಗೂ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಮೊದಲ…
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

ಕರುನಾಡು ಘರ್ಜನೆ ಸುದ್ದಿ ವಿಜಯಪುರ :ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯ ಶಿಕ್ಷಣಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯದ ಶರಣಿ ಮಾತೆ ಅಕ್ಕಮಹಾದೇವಿ ಹೆಸರಿನಲ್ಲಿ 2003 ರಲ್ಲಿ ಸ್ಥಾಪನೆ ಆಯಿತು ಹಾಗೂ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಮೊದಲ ವಿಶ್ವವಿದ್ಯಾಲಯ ಎಂದು ಹೆಗ್ಗಳಿಕೆಗೆ ಪಾತ್ರವಾಯಿತು. ಇಷ್ಟು ವರ್ಷ ಯಾವುದೇ ಎಡವಟ್ಟು ಮಾಡಿಕೊಳ್ಳದೆ ತನ್ನದೇ ಆದ ಒಂದು ಘನತೆಯಲ್ಲಿ ಈ ವಿಶ್ವವಿದ್ಯಾಲಯ ಶೈಕ್ಷಣಿಕ, ಆಡಳಿತ ಸುಗಮವಾಗಿ ಸಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮೇಲ್ನೋಟಕ್ಕೆ ಹಗರಣದ ದುರ್ನಾಥ ವಾಸನೆ ಬರುತ್ತಿದೆ. ಎಂದು ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಕಟ್ಟಿ ಆರೋಪ ಮಾಡಿದ್ದಾರೆ. ನಿರ್ಗಮಿತ ಉಪಕುಲಪತಿಗಳಾದಂತ ಪ್ರೊ.ಬಿ.ಕೆ ತುಳಸಿ ಮಾಲಾ ಅವರು ತಮ್ಮ ಅವಧಿಯ ಮುಕ್ತಾಯ ಸಮೀಪದಲ್ಲಿ PWG-34 ರಿಸಿಪ್ಟ್ ಅಡಿಯಲ್ಲಿ 70 ಬೂದಕೇತರ ಸಿಬ್ಬಂದಿಯನ್ನು ಸಿಂಡಿಕೇಟ್ ಅನುಮೋದನೆ ಇಲ್ಲದೆ ನೇಮಕಾತಿ ಮಾಡಿರುವುದು ಒಂದು ದೊಡ್ಡ ಬ್ರಷ್ಟಾಚಾರಕ್ಕೆ ಸಂಶಯಕ್ಕೆ ಎಡ ಮಾಡಿದೆ. ಈ ಒಂದು ಕರ್ಮಕಾಂಡದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸಾಮೀಲಾಗಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸಿಂಡಿಕೇಟ್ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸದೆ ಸರ್ವಾಧಿಕಾರ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತು ಈ ವಿಶ್ವವಿದ್ಯಾಲಯದಲ್ಲಿ ಇರುವುದಿಲ್ಲ. ಈ ವಿಶ್ವವಿದ್ಯಾಲಯ ಅಧಿಕಾರಿಗಳು ಸಿಂಡಿಕೇಟ್ ಸದಸ್ಯರಿಗೆ ಗಮನಕ್ಕೆ ತರದೆ ನಿರ್ಧಾರವನ್ನು ತೆಗೆದುಕೊಳ್ಳುವುದು ಸರ್ವಸಾಮಾನ್ಯ ಆಗಿಬಿಟ್ಟಿದೆ. ಆದರೂ ಸರ್ಕಾರ ಇವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು

ವಿಶ್ವವಿದ್ಯಾಲಯದ ಕುಲಸಚಿವರು ಕಳೆದ ಒಂದು ವರ್ಷದಿಂದ ಹೆಚ್ಚುವರಿ ಯಾಗಿ ಆರ್ಥಿಕ ಅಧಿಕಾರಿ ಹುದ್ದೆಯನ್ನು ತಾವೇ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಸರಿಯಾದ ಸಮಯದಲ್ಲಿ ಸಿಬ್ಬಂದಿಗಳ ವೇತನ, ಸಿಂಡಿಕೇಟ್ ಸದಸ್ಯರ ಆಸನ ಬತ್ತೆ, ಪರೀಕ್ಷಾ ಮೌಲ್ಯಮಾಪನ ಪರೀಕ್ಷಕರ ಬತ್ತೆ, ವಾರ್ಷಿಕ ಅಡಿಟದಲ್ಲಿ ಹಲವಾರು ನ್ಯೂನ್ಯತೆ ಬಂದಿರುತ್ತದೆ, ಆರ್ಥಿಕ ವ್ಯವಹಾರದಲ್ಲಿ ದಿನನಿತ್ಯದ ಕಾರ್ಯ ಕಲಾಪಗಳು ತುಂಬಾ ವಿಳಂಬ ಮಾಡುತ್ತಿದ್ದಾರೆ ಹಾಗೂ ಮೇಲ್ನೋಟಕ್ಕೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ.

 

ಪದವಿ ಮಹಾವಿದ್ಯಾಲಯಗಳಲ್ಲಿ ಬಾಹ್ಯ ಹಿರಿಯ ಮೇಲ್ವಿಚಾರಕ ನಿಯೋಜನೆಯ ವಿಷಯದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಬ್ರಹ್ಮಾಂಡ ಬ್ರಷ್ಟಾಚಾರ ಎಸಿಗಿರುತ್ತಾರೆ. ಪರೀಕ್ಷಾ ಕೈಪಿಡಿಯನ್ನು ಗಾಳಿಗೆ ಎಸೆದು ತಮಗೆ ಮನಸ್ಸಿಗೆ ಬಂದ ಹಾಗೆ ಪರೀಕ್ಷಾ ಬಾಹ್ಯ ಮೇಲ್ವಿಚಾರಕರನ್ನು ನೇಮಿಸಿರುತ್ತಾರೆ ಬಿ ಓ ಇ ಪಟ್ಟಿಯಲ್ಲಿ ಇಲ್ಲದವರನ್ನು ನೇಮಕ ಮಾಡಿರುತ್ತಾರೆ. ಹಾಗೂ ಜೇಷ್ಠತಾ ಪಟ್ಟಿಯನ್ನು ಇವರು ಹಿರಿಯ ಪ್ರಾಧ್ಯಾಪಕರನ್ನು ನಿರ್ಲಕ್ಷಿಸುತ್ತಾರೆ. ಹಾಗೂ ಪ್ರತಿ ವರ್ಷ ಪರೀಕ್ಷಾ ಬಾಹ್ಯ ಮೇಲ್ವಿಚಾರಕರು ಮತ್ತು ಗುಪ್ತ ದಳ ನಿರ್ವಹಿಸುವಂತವರೇ ಸತತವಾಗಿ ಇವರೇ ಕಾರ್ಯನಿರ್ಸುತ್ತಿರುತ್ತಾರೆ. ಈಗಾಗಲೇ ಶಾಹಿನ ಮಹಿಳಾ ಪದವಿ ಮಹಾವಿದ್ಯಾಲಯ ಬೀದರ್ ಜಿಲ್ಲೆ ಮುಂದುವರಿಕೆ ಸಲಂಗ್ಮತೆ ಇಲ್ಲದೆ 3 ವರ್ಷ ಆಗಿರುತ್ತದೆ, ಮಹಾವಿದ್ಯಾಲಯದಲ್ಲಿ ಯಾವುದೇ ವಿದ್ಯಾರ್ಥಿನಿಯರು ದಾಖಲಾತಿ ಆಗಿರುವುದಿಲ್ಲ ಮತ್ತು ಯಾವುದೇ ವಿದ್ಯಾರ್ಥಿನಿ ಪರೀಕ್ಷಾಕೂಡ ಬರೆಯುತ್ತಿರುವುದಿಲ್ಲ. ಆದರೂ ಕೂಡ ಕುಲಸಚಿವರು ಮೌಲ್ಯಮಾಪನ ಪ್ರೊ.ಚಂದ್ರಶೇಖರ್ ಅವರು ಪರೀಕ್ಷಾ ಕೇಂದ್ರ ಕೊಟ್ಟು ಎಡವಟ್ಟು ಮಾಡಿದ್ದಾರೆ.ಹಾಗೂ ಯಾದಗಿರಿ ಮತ್ತು ಬೀದರ್ ಜಿಲ್ಲೆಯ ಮುಚ್ಚಿದ ಮಹಿಳಾ ಕಾಲೇಜಿಗೆ ಪರೀಕ್ಷಾ ಕೇಂದ್ರ ಕೊಟ್ಟು ಅಪರಾ- ತಪರಾ ಎಡವಟ್ಟು ಕೆಲಸ ಮಾಡಿರುತ್ತಾರೆ.

 

ಕುಲಸಚಿವರು ಮೌಲ್ಯಮಾಪನ ಆದಂತವರು ಪರೀಕ್ಷಾ ಉತ್ತರ ಪುಸ್ತಕ ಇದ್ದರೂ ಕೂಡ ಮತ್ತೆ 50 ಲಕ್ಷ ರುಪಾಯಿದ ಉತ್ತರ ಪತ್ರಿಕೆಯನ್ನು ಖರೀದಿಸುತ್ತಾರೆ, ಈ ರೀತಿಯಾಗಿ ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಆರ್ಥಿಕ ಪರಿಸ್ಥಿತಿ ಕುಂಟಿತಗೊಳಿಸುತ್ತಿದ್ದಾರೆ.

 

ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಗಳಾದಂತ ಪ್ರೊ. ಟಿ.ಶಾಂತಾದೇವಿ ಇವರು ಎಲ್ಲ ವಿಷಯ ಗೊತ್ತಿದ್ದರೂ ಕೂಡ ಕಣ್ಣು ಮುಚ್ಚಿ ಕುಳಿತಿದ್ದಾರೆ ಇದು ಸಂಶಯಕ್ಕೆ ಕಾರಣವಾಗಿದೆ. ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯಪಾಲರು ಮತ್ತು ಸರ್ಕಾರವು ಸಮಗ್ರ ತನಿಖೆ ಕೈಗೊಂಡು ಮಹಿಳಾ ವಿಶ್ವವಿದ್ಯಾಲಯದ ಘನತೆಯನ್ನು ಕಾಪಾಡಬೇಕು.

Editor

Leave a comment