Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಹಾಸನದಲ್ಲಿ  ಲೈಂಗಿಕ ಹಗರಣ (ಸೆಕ್ಸ್ ಸ್ಕ್ಯಾಂಡಲ್) ನಡೆದಿದೆ ಓಆಂ ಅಭ್ಯರ್ಥಿ ಜೆಡಿಎಸ್ ಪಕ್ಷದ ಸಂಸದರಾದ ಆರೋಪಿ..! ಪ್ರಜ್ವಲ್ ರೇವಣ್ಣ ವಿರುದ್ಧ ಮೋದಿ ಏಕೆ ತುಟಿ ಬಿಚ್ಚುತ್ತಿಲ್ಲ : ಎಸ್.ಡಿ.ಪಿ.ಐ

ಕರುನಾಡು ಘರ್ಜನೆ ಸುದ್ದಿ ಗದಗ ೦೩: ಹಾಸನದಲ್ಲಿ ಮೋದಿಯ ಪರಮಾಪ್ತ ಪಕ್ಷವಾದ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ…

ಕರುನಾಡು ಘರ್ಜನೆ ಸುದ್ದಿ ಗದಗ ೦೩: ಹಾಸನದಲ್ಲಿ ಮೋದಿಯ ಪರಮಾಪ್ತ ಪಕ್ಷವಾದ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿ, ಆ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿರುವ ದೂರುಗಳನ್ನು ಸಂತ್ರಸ್ತ ಮಹಿಳೆಯರೇ ಮಾಡಿದ್ದಾರೆ. ಆ ವಿಡಿಯೋಗಳು ಈಗ ಎಲ್ಲೆಲ್ಲೂ ಹರಿದಾಡುತ್ತಿವೆ. ಇಲ್ಲಿನ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ಇದು ದೇಶದ ಅತಿ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಅನ್ನುವುದರಲ್ಲಿ ಅನುಮಾನವಿಲ್ಲ. ಈ ನೀಚ ಕೃತ್ಯದಲ್ಲಿ ಜೆಡಿಎಸ್ ಹಿರಿಯ ನಾಯಕ ರೇವಣ್ಣ ಕೂಡ ಭಾಗಿಯಾಗಿರುವ ಆರೋಪ ಮಾಡಲಾಗಿದೆ. ಕೋಮು ದ್ವೇಷವನ್ನು ಹರಡುವ ಏಕೈಕ ಉದ್ದೇಶದಿಂದ ಹುಬ್ಬಳ್ಳಿಯ ನೇಹಾ ಪ್ರೇಮ ವೈಫಲ್ಯ ಕೊಲೆ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಿ, ರಾದ್ಧಾಂತ ಮಾಡಿದ ಮೋದಿಯವರು ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ ಏಕೆ ? ಇಲ್ಲಿ ನೊಂದಿರುವ ಸಾವಿರಾರು ಹೆಣ್ಣುಮಕ್ಕಳು ಹಿಂದೂಗಳಲ್ಲವೇ ? ಆರೋಪಿ ಮುಸ್ಲಿಂ ಆಗಿದ್ದರೆ ಮಾತ್ರ ಇವರ ಆಕ್ರೋಶವೆ ? ಪಶ್ಚಿಮ ಬಂಗಾಳದ ಸಂದೇಶಖಲಿ ಇಂತಹದ್ದೇ ಘಟನೆಯಲ್ಲಿ ಆರೋಪಿ ಮುಸ್ಲಿಂ ಆಗಿದ್ದ ಒಂದೇ ಕಾರಣಕ್ಕೆ ಮಾಧ್ಯಮಗಳು ಅರಚಾಟ ಆಡಿದ್ದವು. ಪ್ರಧಾನಿ ಮೋದಿ ಸಂತ್ರಸ್ತ ಮಹಿಳೆಯರನ್ನು ಖುದ್ದು ಭೇಟಿ ಮಾಡಿದ್ದರು. ಅವರಲ್ಲಿ ಒಬ್ಬ ಮಹಿಳೆಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಸಹ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಪ್ರಕರಣದಲ್ಲಿ ಇನ್ನಿಲ್ಲದ ಆಸಕ್ತಿ ತೋರಿಸಿ ಕ್ರಮ ಕೈಗೊಂಡಿತ್ತು. ಆದರೆ ಈಗ ಇದ್ಯಾವುದೂ ಇಲ್ಲ. ರಾಷ್ಟ್ರೀಯ ಮಹಿಳಾ ಆಯೋಗದಿಂದ ಕನಿಷ್ಟ ನೋಟಿಸ್ ಸಹ ಜಾರಿಯಾಗಿಲ್ಲ. ಇದು ಎಂತಹ ಭೇದಭಾವ ಮನಸ್ಥಿತಿ ? ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ. ಪಿ.ಐ) ಪಕ್ಷ ಈ ನೀಚ ಕೃತ್ಯ ಮತ್ತು ಮೋದಿ ಮತ್ತವರ ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ.

ಇದೊಂದು ಅಮಾನವೀಯ, ವಿಕೃತಕಾಮಿಯ ಮನಸ್ಥಿತಿಯನ್ನು ಪ್ರದರ್ಶಿಸುವ ಕೃತ್ಯವಾಗಿದೆ. ತನ್ನ ತಾಯಿಯ ವಯಸ್ಸಿನ ಮಹಿಳೆಯರನ್ನು ಕೂಡ ಅವರು ಕೈಮುಗಿದು ಬೇಡುತ್ತಿದ್ದರೂ ಬಿಡದೆ ಅವರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡಿರುವುದನ್ನು ಕೆಲವು ವಿಡಿಯೋಗಳಲ್ಲಿ ನೋಡಬಹುದಾಗಿದೆ. ಅದಷ್ಟೇ ಅಲ್ಲದೆ, ಈ ಎಲ್ಲಾ ವಿಡಿಯೋಗಳನ್ನು ಸ್ವತಃ ಆರೋಪಿ ಪ್ರಜ್ವಲ್ ರೇವಣ್ಣನೇ ರೆಕಾರ್ಡ್ ಮಾಡಿರುವ ಅರೋಪಗಳಿಗೆ ಇದೆಲ್ಲ ನೋಡಿದರೆ ಇದು ವಿಕೃತಕಾಮಿಗಳನ್ನೂ ಮೀರಿಸುವ ಸೈಕೋಪಾತ್ ವರ್ತನೆ ಎಂಬAತೆ ತೋರುತ್ತಿದೆ. ಇಂಥಹ ನೀಚ ಮನಸ್ಥಿತಿಯ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲ, ಸಮಾಜದಲ್ಲಿರಲೂ ಸಹ ನಾಲಾಯಕ್ಕಾಗಿರುತ್ತಾನೆ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ಹೇಳಿದ ಪ್ರಜ್ವಲ್ ರೇವಣ್ಣ ತಾವು ನಿರಪರಾಧಿಯಾಗಿದ್ದರೆ ರಾತ್ರೋರಾತ್ರಿ ದೇಶ ತೊರೆದು ಹೋದದ್ದು ಏಕೆಂದು ಹೇಳಬೇಕು. ಜೊತೆಗೆ ಆರೋಪಿ ಪ್ರಜ್ವಲ್ ರೇವಣ್ಣ ದೇಶ ತೊರೆಯಲು ಸಹಕರಿಸಿದವರು ಯಾರು ಎಂಬ ಬಗ್ಗೆಯೂ ತನಿಖೆಯಾಗಬೇಕು.
ತಮ್ಮ ರಾಜಕೀಯ ಲಾಭಕ್ಕೆ ಮತ್ತು ಮುಸ್ಲಿಮರ ವಿರುದ್ಧ ದ್ವೇಷಕಾರುವ ತಮ್ಮ ಯೋಜನೆಯ ಭಾಗವಾಗಿ ಮುಸ್ಲಿಮರು ಆರೋಪಿಯಾಗಿರುವ ಆಯ್ದ ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊAಡು ಬಿಜೆಪಿ ಗಲಭೆಗಳನ್ನು ಮಾಡುತ್ತದೆ. ಅಂತಹ ನೀಚ ಕೃತ್ಯಕ್ಕೆ ದೇಶದ ಪ್ರಧಾನಿಗಳು ಕೂಡ ಇಳಿದಿದ್ದಾರೆ. ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಪ್ರೇಮ ವೈಫಲ್ಯದ ಕೊಲೆ ಪ್ರಕರಣವನ್ನು ದೇಶಮಟ್ಟದಲ್ಲಿ ಚರ್ಚೆಗೆ ತಂದು ಆ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ಕೋಮು ದ್ವೇಷದ ನೀಚ ರಾಜಕಾರಣವನ್ನು ಅನಾವರಣಗೊಳಿಸಿದ್ದರು. ದೇಶದಲ್ಲಿ ಪ್ರತಿದಿನ ೯೦ ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ಅವುಗಳ ಬಗ್ಗೆ ಮೋದಿಯವರಿಗೆ ಮಾತನಾಡಲು ಬಾಯಿ ಬರುವುದಿಲ್ಲ. ಅವರದೇ ಪಕ್ಷದ ಸಂಸದ ರಾಷ್ಟ್ರಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದಾಗ ಮೋದಿ ಮೌನ ಬಿಟ್ಟು ಬೇರೇನೂ ಮಾಡುವುದಿಲ್ಲ. ಮಣಿಪುರದಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ನಡೆಸಿದಾಗಲೂ ಅವರ ಮನಸ್ಸು ಕರಗುವುದಿಲ್ಲ. ಆದರೆ ಆರೋಪಿ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಹುಬ್ಬಳ್ಳಿ ಪ್ರಕರಣವನ್ನು ದೇಶದಲ್ಲಿ ಅಶಾಂತಿ ಮೂಡಿಸುವ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಾರೆ. ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಅರಚುತ್ತಾರೆ. ಈಗ ಹಾಸನದಲ್ಲಿ ಪ್ರಮುಖ ನಾಯಕನೇ ನಡೆಸಿರುವ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೆ ಬಲಿಯಾಗಿರುವ ಹೆಣ್ಣುಮಕ್ಕಳು ಹಿಂದುಗಳಲ್ಲವೆ ? ಅವರಿಗೆ ನ್ಯಾಯ ಕೊಡಿಸುವ ಅವಶ್ಯಕತೆ ಇಲ್ಲವೆ ?
ರಾಜ್ಯ ಸರ್ಕಾರ ಈ ಪ್ರಕರಣವನ್ನು ತನಿಖೆ ಮಾಡಲು SIಖಿ ನೇಮಿಸಿರುವುದನ್ನು ಎಸ್.ಡಿ.ಪಿ.ಐ ಪಕ್ಷ ಸ್ವಾಗತ್ತಿಸುತ್ತದೆ. ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನೊಂದ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಿರುವುದೂ ಕೂಡ ಸ್ವಾಗತಾರ್ಹ. ಆದಷ್ಟು ಬೇಗ ತನಿಖೆ ಮುಕ್ತಾಯಗೊಳಿಸಿ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ರಂಜಾನ್ ಕಡಿವಾಳ್, ಜಿಲ್ಲಾಧ್ಯಕ್ಷರಾದ ಬಿಲಾಲ ಗೋಕಾವಿ, ಉಪಾಧ್ಯಕ್ಷರಾದ ಹಿದಾಯತುಲ್ಲಾ ಕಾಗದಗಾರ, ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಖಜಾಂಚಿ ಮುಜಾಹೀದ್ ಕಣಕೇನ್ನವರ್, ಅನ್ವರ್ ಮುಲ್ಲಾ, ನವೀದ್ ಕಮಾನಗಾರ, ಯಾಸೀನ್ ಹುಬ್ಬಳ್ಳಿ, ಮುಸ್ತಾಕ್ ಕಟ್ಟಿಮನಿ, ಮುಸ್ತಾಕ್ ಹೊಸಮನಿ, ಸಾಧಿಕ್ ಬುರಬುರೆ, ಸಾಕಷ್ಟು ಮಹಿಳೆಯರು, ಯುವಕರು, ಬೆಂಬಲಿಗರು ಹಾಗೂ ಹಿರಿಯ ವಕೀಲರು ಮತ್ತು ಸಾಮಾಜಿಕ ಚಿಂತನಾಕಾರರಾದ ಮುಕ್ತಾರ್ ಮೌಲ್ವಿ ಸರ್ ಕೂಡ ನಿಷ್ಪಕ್ಷವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Editor

Leave a comment