Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಟೆಲಿಕಾಂ ಲೂಟಿ ಹಾಗೂ ಕಾರ್ಪೊರೇಟ್ ಕಂಪನಿಗಳ ‘ಕಪ್ಪು ಹಣ’ದ ಪಾರ್ಲರ್ ಹಾವಳಿ ವಿರುದ್ಧ ಸವಿತಾ ಸಮಾಜದ ಸಮರ ಸಂಸದ ರಾಘವ್ ಚಡ್ಡಾ ಹೋರಾಟಕ್ಕೆ ಗದಗ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ಬೆಂಬಲ.

ಕರುನಾಡು ಘರ್ಜನೆ ಸುದ್ದಿ ಗದಗ 30: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಡೇಟಾ ಮತ್ತು ರೀಚಾರ್ಜ್ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿರುವ ಟೆಲಿಕಾಂ ಕಂಪನಿಗಳ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿರುವ ಸಂಸದ ರಾಘವ್ ಚಡ್ಡಾ ಅವರ ಹೋರಾಟವು ಐತಿಹಾಸಿಕವಾಗಿದೆ. ಅವರ…

ಕರುನಾಡು ಘರ್ಜನೆ ಸುದ್ದಿ ಗದಗ 30: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಡೇಟಾ ಮತ್ತು ರೀಚಾರ್ಜ್ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿರುವ ಟೆಲಿಕಾಂ ಕಂಪನಿಗಳ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿರುವ ಸಂಸದ ರಾಘವ್ ಚಡ್ಡಾ ಅವರ ಹೋರಾಟವು ಐತಿಹಾಸಿಕವಾಗಿದೆ. ಅವರ ಈ ಜನಪರ ನಿಲುವಿಗೆ ಗದಗ ಜಿಲ್ಲಾ ಸವಿತಾ ಸಮಾಜವು ತನ್ನ ಸಂಪೂರ್ಣ ಮತ್ತು ಸಾಂಸ್ಥಿಕ ಬೆಂಬಲವನ್ನು ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಅತ್ಯಂತ ಕಟುವಾಗಿ ಪ್ರತಿಕ್ರಿಯಿಸಿರುವ ಅವರು, “ಕೇವಲ 28 ದಿನಗಳ ವ್ಯಾಲಿಡಿಟಿ ನೀಡಿ ಗ್ರಾಹಕರಿಂದ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಾಗಿದೆ. ಸಂಸದ ಚಡ್ಡಾ ಅವರು ಪ್ರಸ್ತಾಪಿಸಿರುವಂತೆ, ಬಳಕೆಯಾಗದ ಡೇಟಾವನ್ನು ‘ಡಿಜಿಟಲ್ ಆಸ್ತಿ’ ಎಂದು ಪರಿಗಣಿಸಿ ಅದನ್ನು ಮುಂದಿನ ರೀಚಾರ್ಜ್‌ಗೆ ವರ್ಗಾಯಿಸುವ ನಿಯಮವನ್ನು ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ತರಬೇಕು,” ಎಂದು ಆಗ್ರಹಿಸಿದರು.
ಸವಿತಾ ಸಮಾಜದ ಇಂದಿನ ಶೋಚನೀಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೃಷ್ಣಾ ಎಚ್ ಹಡಪದ ಅವರು, “ಒಂದೆಡೆ ಡಿಜಿಟಲ್ ಸುಲಿಗೆಯಾದರೆ, ಇನ್ನೊಂದೆಡೆ ಸವಿತಾ ಸಮಾಜದ ಪಾರಂಪರಿಕ ಕುಲಕಸುಬನ್ನು ಕಾರ್ಪೊರೇಟ್ ಶಕ್ತಿಗಳು ಹೈಜಾಕ್ ಮಾಡುತ್ತಿವೆ. ದೇಶದಾದ್ಯಂತ ದೊಡ್ಡ ದೊಡ್ಡ ಶ್ರೀಮಂತರು ಮತ್ತು ಮಲ್ಟಿ-ನ್ಯಾಷನಲ್ ಕಂಪನಿಗಳು ತಮ್ಮ ‘ಕಪ್ಪು ಹಣ’ವನ್ನು ಬಿಳಿ ಮಾಡಿಕೊಳ್ಳುವ ಕೆಟ್ಟ ಉದ್ದೇಶದಿಂದ ಬೃಹತ್ ಪಾರ್ಲರ್‌ಗಳನ್ನು ಆರಂಭಿಸಿವೆ.
ಇವರು ವೃತ್ತಿ ಕಸುಬುದಾರರಲ್ಲದಿದ್ದರೂ ಕೇವಲ ಬಂಡವಾಳದ ಬಲದಿಂದ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಶತಮಾನಗಳಿಂದ ಈ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಸವಿತಾ ಸಮಾಜದ ಸಣ್ಣ ಸಣ್ಣ ಕ್ಷೌರಿಕ ಅಂಗಡಿಗಳು ಬಾಗಿಲು ಹಾಕುವಂತಾಗಿದ್ದು, ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತಿವೆ,” ಎಂದು ಜಿಲ್ಲಾಧ್ಯಕ್ಷ ಕೃಷ್ಣ ಎಚ್ ಹಡಪದ ಆಕ್ರೋಶ ಹೊರಹಾಕಿದರು.
ವೃತ್ತಿ ಬಾಂಧವರಲ್ಲದ ಮಾಲೀಕರು ನಡೆಸುತ್ತಿರುವ ಮತ್ತು ಕೇವಲ ಬಂಡವಾಳಶಾಹಿ ಉದ್ದೇಶ ಹೊಂದಿರುವ ಪಾರ್ಲರ್‌ಗಳನ್ನು ಸರ್ಕಾರ ಕೂಡಲೇ ಗುರುತಿಸಿ, ಅವುಗಳ ಪರವಾನಗಿ ರದ್ದುಗೊಳಿಸಬೇಕು.
ಸವಿತಾ ಸಮಾಜದವರಿಗೆ ಮಾತ್ರ ಈ ವೃತ್ತಿಯಲ್ಲಿ ಆದ್ಯತೆ ನೀಡುವಂತಹ ವಿಶೇಷ ಕಾನೂನು ರೂಪಿಸಬೇಕು ಎಂದರಲ್ಲದೆ “ಬಡವರ ಪರವಾಗಿ ಮಾತನಾಡುವ ಸಂಸದ ರಾಘವ್ ಚಡ್ಡಾ ಅವರಂತಹ ನಾಯಕರು ಸಂಸತ್ತಿನಲ್ಲಿ ಸವಿತಾ ಸಮಾಜದ ಈ ನೋವಿಗೂ ಧ್ವನಿಯಾಗಬೇಕು.
ಕಾರ್ಪೊರೇಟ್ ಕಂಪನಿಗಳು ನಮ್ಮ ಕುಲಕಸುಬನ್ನು ಕಸಿದುಕೊಳ್ಳುತ್ತಿರುವುದರ ವಿರುದ್ಧ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು,” ಎಂದು ಬಡವರ ಪರ ಹಿತ ಚಿಂತಕರು ಹಾಗೂ ಸಂಸದರಾದ ರಾಘವ್ ಚಡ್ಡಾ ಅವರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್ ಹಡಪದ ಅವರು ಗೌರವಾನ್ವಿತ ಪತ್ರಿಕಾ ಪ್ರಕಟಣೆಯ ಸಹಾಯದ ಮೂಲಕ ವಿನಂತಿಸಿದ್ದಾರೆ.
“ಸಾಮಾನ್ಯ ಜನರ ಬೆವರಿನ ಹಣವನ್ನು ಲೂಟಿ ಮಾಡುತ್ತಿರುವ ಟೆಲಿಕಾಂ ಮಾಫಿಯಾ ಮತ್ತು ಸವಿತಾ ಸಮಾಜದ ಬದುಕನ್ನು ಕಸಿದುಕೊಳ್ಳುತ್ತಿರುವ ಕಾರ್ಪೊರೇಟ್ ಮಾಫಿಯಾದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಜನಪರ ರಾಜಕಾರಣಿಗಳು ಗೌರವಾನ್ವಿತ ಸಂಸದರಾದ ರಾಘವ್ ಚಡ್ಡಾ ಅವರ ಧ್ವನಿಗೆ ನಾವು ಶಕ್ತಿಯಾಗಿ ನಿಲ್ಲುತ್ತೇವೆ,” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಗುಡುಗಿ ಹೇಳಿದ್ದಾರೆ.

ಬಾಕ್ಸ್ ಹೇಳಿಕೆ
°°°°°°°°°°°°°°
“ಟೆಲಿಕಾಂ ಕಂಪನಿಗಳು ರೀಚಾರ್ಜ್ ಹೆಸರಿನಲ್ಲಿ ಬಡವರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ, ಇತ್ತ ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳು ‘ಹವಾನಿಯಂತ್ರಿತ ಪಾರ್ಲರ್’ ಹೆಸರಿನಲ್ಲಿ ಸವಿತಾ ಸಮಾಜದ ಕುಲಕಸುಬಿಗೆ ಚಿತೆ ಇಡುತ್ತಿವೆ! ಶ್ರೀಮಂತರು ತಮ್ಮ ‘ಕಪ್ಪು ಹಣ’ವನ್ನು ತೊಳೆದುಕೊಳ್ಳಲು ಸವಿತಾ ಬಾಂಧವರ ಅನ್ನದ ತಟ್ಟೆಯನ್ನು ಕಸಿದುಕೊಳ್ಳುತ್ತಿರುವುದು ಹಗಲು ದರೋಡೆಯಲ್ಲದೆ ಮತ್ತೇನು? ಸವಿತಾ ಸಮಾಜದ ರಕ್ತ ಹರಿಸಿ ಬೆಳೆಯುತ್ತಿರುವ ಈ ‘ಗ್ಲಾಮರ್ ಮಾಫಿಯಾ’ವನ್ನು ಸರ್ಕಾರ ಕೂಡಲೇ ಮಟ್ಟಹಾಕಬೇಕು. ಸಂಸದ ರಾಘವ್ ಚಡ್ಡಾ ಅವರೇ, ಸಂಸತ್ತಿನಲ್ಲಿ ನಿಮ್ಮ ಧ್ವನಿ ಕೇವಲ ಮೊಬೈಲ್ ಡೇಟಾಕ್ಕೆ ಸೀಮಿತವಾಗದಿರಲಿ, ಬೀದಿಪಾಲಾಗುತ್ತಿರುವ ಲಕ್ಷಾಂತರ ಸವಿತಾ ಸಮಾಜದ ಕ್ಷೌರಿಕ ಬಾಂಧವರ ಬದುಕಿನ ರಕ್ಷಣೆಗೂ ನಿಮ್ಮ ಸಿಡಿಲಂಥ ಮಾತುಗಳು ಗುಡುಗಲಿ. ನಮ್ಮ ವೃತ್ತಿಯನ್ನು ಕಸಿದುಕೊಳ್ಳುವವರ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸಮಾಜದ ಆಕ್ರೋಶಕ್ಕೆ ಬೆಲೆ ತೆರಬೇಕಾಗುತ್ತದೆ!”
— ಬೈಲಪ್ಪ ನಾರಾಯಣಸ್ವಾಮಿ
ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಾಯಕರು ಸಾ” ಬೆಂಗಳೂರು

Editor

Leave a comment