ಕರುನಾಡು ಘರ್ಜನೆ ಸುದ್ದಿ ಗದಗ 7-ಹಾವೇರಿ ಜಿಲ್ಲೆ ಗೊಟಗೋಡಿಯಲ್ಲಿರುವ ಕರ್ನಾಟಕದ ಪ್ರತಿಷ್ಠಿತ ರಾಕ್ ಗಾರ್ಡನ್ ನ ಕ್ಯುರೇಟರ್ ಡಾ.ವೇದರಾಣಿ ದಾಸನೂರ್ ಅವರಿಗೆ ‘ನಿರಂತರ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಅಧಿಕೃತ ಆಹ್ವಾನ ನೀಡಲಾಯಿತು
ಗಜೇಂದ್ರಗಡದ ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಹಾಗೂ ಗದುಗಿನ ನಿರಂತರ ಪ್ರಕಾಶನದ ಸಹಯೋಗದಲ್ಲಿ ಈ ಪುರಸ್ಕಾರವನ್ನು ಕೊಡಲು ಪ್ರತಿಷ್ಠಾನದ ಸದಸ್ಯರು ಮತ್ತು ಸಂಚಾಲಕರು ನಿರ್ಧರಿಸಿ ಹಿನ್ನಲೆಯಲ್ಲಿ ಪ್ರಕಾಶ ದಾಸನೂರ್ ಅವರ ನಿವಾಸದಲ್ಲಿ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳ ಸಾಹಿತಿ ಮಿತ್ರರೆಲ್ಲರೂ ಸೇರಿ ಆಹ್ವಾನ ನೀಡಿ ಸನ್ಮಾನಿಸಿದರು.
ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಯಾವ ಸಿಪಾರಸ್ಸು ಇಲ್ಲದೆಸಾಧಕರು ಮಾಡಿದ ಸಾಧನೆ ಗುರುತಿಸಿ ಪುರಸ್ಕಾರ ಕೊಡಮಾಡುತ್ತಿರುವ ನಿರಂತರ ಪ್ರಕಾಶನದ ಕಾರ್ಯ ಅಭಿನಂದನಾರ್ಹ ಎಂದು ಉಪನ್ಯಾಸಕ. ಕವಿ ರಂಜಾನ ಹೆಬಸೂರ ಅಭಿಪ್ರಾಯಪಟ್ಟರು. ಹಿರಿಯ ಕವಿ, ಸಂಚಾಲಕ ಎ. ಎಸ್. ಮಕಾನದಾರ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ನಿರಂತರ ಪ್ರಕಾಶನದ ಧ್ಯೇಯೋದ್ದೇಶ, ಪ್ರಕಾಶನ ಬೆಳೆದು ಬಂದ ಬಗೆ, ಓದಿನ ಮೂಲಕ ಜೀವ ಪರ ಜಗತ್ತು ಕಟ್ಟುವ ಜರೂರತ್ತು ಪುಸ್ತಕ ಸಂಸ್ಕೃತಿ ಉಳಿಸಲು ನಮ್ಮ ಮುಂದಿನ ಸವಾಲುಗಳನ್ನು ವಿವರಿಸಿ ದರು
ಮಹಿಳೆಯರ ಸಾಧನೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ವೇದಾರಾಣಿಯವರಿಗೆ ಈಗಾಗಲೇ ನಾಡಿನ ವಿವಿಧ ಪ್ರತಿಷ್ಠಿತ ಪುರಸ್ಕಾರಗಳು ಒಲಿದು ಬಂದಿವೆ. ಮಕಾನದಾರ ಪ್ರತಿಷ್ಠಾನ ಈ ಪೂರ್ವ ನಾಡಿನ ವಿವಿಧ ಪ್ರದೇಶಗಳ ಆರು ಜನ ಮಹಿಳಾ ಸಾಧಕಿಯರನ್ನು ಗುರುತಿಸಿದೆ ಇಂತಹ ಇನ್ನೂ ಹಲವು ಕಾರ್ಯಗಳು ಸತತವಾಗಿ ನಡೆಯುತ್ತಿರಲಿ ಎಂದು ಕಾರ್ಯಕ್ರಮವನ್ನು ನಿರ್ವಹಿಸಿದ ಶಿರಸಿಯ ಅಂಚೆ ಇಲಾಖೆಯ ಉದ್ಯೋಗಿ,ಯುವ ಕವಯತ್ರಿ ದೀಪಾ ಗೋನಾಳ ಅವರು ಸಂತಸ ವ್ಯಕ್ತ ಪಡಿಸಿದರು .
ಕಳೆದ ಹದಿನಾರು ವರ್ಷದಿಂದ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ನಿರಂತರ ಪುರಸ್ಕಾರವನ್ನು ಕೊಡುತ್ತ ಬಂದಿದ್ದಾರೆ. ಈ ಬಾರಿ ಧಾರವಾಡ ಜಿಲ್ಲೆಯ ಡಾ.ವೇದಾರಾಣಿ ದಾಸನೂರು ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸ್ವಾಗತಾರ್ಹ ಸಂಗತಿ ಇಂತಹ ಗುರುತಿಸುವಿಕೆ ಸ್ವಸ್ಥ ಸಮಾಜ ಕಟ್ಟುವಲ್ಲಿ ಬಹಳ ಮಹತ್ವದ್ದು ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಲಿಂಗರಾಜ ಅಂಗಡಿಯವರು ನುಡಿದರು.
ಸತತ ಪರಿಶ್ರಮದೊಂದಿಗೆ ರಾಕ್ ಗಾರ್ಡನ್ ರೂಪಿಸಿ, ಅದು ಎಂಟು ವಿಶ್ವ ದಾಖಲೆಗಳಿಸುವಂತೆ ಮಾಡುವಲ್ಲಿ ಕಲಾವಿದ ಟಿ.ಬಿ.ಸೊಲಬಕ್ಕನವರ ಹಾಗೂ ಶ್ರೀಮತಿ ವೇದಾರಾಣಿ ದಾಸನೂರ ಅವರ ಪಾತ್ರ ಹಿರಿದಾಗಿದ್ದು . ಕಲಾವಿದ ಟಿ.ಬಿ. ಸೊಲಬಕ್ಕನವರ ಅವರು ಹಾಕಿ ಕೊಟ್ಟ ಅಡಿಪಾಯದ ಮೇಲೆ ಕಲ್ಲಲ್ಲಿ ಹೂವರಳಿಸುವ ಕಾಯಕದಲ್ಲಿ ನಿರತರಾದ ಡಾ.ವೇದಾ ರಾಣಿ ಅವರು ಅನೇಕ ಮಾನ್ಯತೆಗೆ ಪಾತ್ರರಾದವರೆಂದು ಅಭಿನಂದನಾ ನುಡಿ ನುಡಿದರು ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ನಿರಂತರ ಪ್ರಕಾಶನ, ಉತ್ತರ ಸಾಹಿತ್ಯ ವೇದಿಕೆ, ಅಂಚೆ ಇಲಾಖೆಯ ಸಾಹಿತ್ಯ ಬಳಗ ದಿಂದ ಡಾ. ವೇದಾರಾಣಿ ಅವರಿಗೆ ಸನ್ಮಾನಿಸಲಾಯಿತು. ಡಾ. ದಾಸನೂರ್ ಅವರು ಕೃತಜ್ಞತಾ ಪರ ನುಡಿ ನುಡಿದರು.
ಹಿರಿಯ ಗಜಲ್ ಕಾರ್ತಿ, ಶಿಕ್ಷಕಿ ನಿರ್ಮಲಾ ಶೆಟ್ಟರ್ ಸ್ವಾಗತಿಸಿದರು . ಹಿರಿಯ ಕವಯಿತ್ರಿ, ಮುಖ್ಯ ಶಿಕ್ಷಕಿ ಡಾ.ರೇಣುಕಾ ತಾಯಿ ಎಂ. ಸಂತಬಾ ವಂದಿಸಿದರು ಹಾನಗಲ್ ನ ಸೌಮ್ಯ. ಪರಪ್ಪನವರ ಕಾರ್ಯಕ್ರಮ ನಿರ್ವಹಿಸಿದರು